ಅಡ್ವೆ-ನಂದಿಕೂರು ಕೋಟಿ-ಚೆನ್ನಯ ಜೋಡುಕರೆ ಕಂಬಳದ ಫಲಿತಾಂಶ

ಪಡುಬಿದ್ರಿ: 28ನೇ ವರ್ಷದ ಅಡ್ವೆ-ನಂದಿಕೂರು ಕೋಟಿ ಚೆನ್ನಯ ಜೋಡುಕರೆ ಹೊನಲು ಬೆಳಕಿನ ಕಂಬಳವು ಭಾನುವಾರ ಮುಕ್ತಾಯಗೊಂಡಿದ್ದು 144 ಜತೆ ಕೋಣಗಳು ಭಾಗವಹಿಸಿದ ಕಂಬಳ ಸ್ಪರ್ಧಾ ಫಲಿತಾಂಶ ಇಂತಿದೆ.

ಕನೆ ಹಲಗೆ(4 ಜತೆ): ನೀರು ನೋಡಿ ಬಹುಮಾನ-ಪ್ರಥಮ-ಬಾರ್ಕೂರು ಶಾಂತಾರಾಮ ಶೆಟ್ಟಿ(ಹಲಗೆ ಮುಟ್ಟಿದವರು-ಮಂದಾರ್ತಿ ಶಿರೂರು ಗೋಪಾಲ ನಾಯ್ಕ), ದ್ವಿತೀಯ-ಬೇಲಾಡಿಬಾವ ಅಶೋಕ್ ಶೆಟ್ಟಿ(ನಾರಾವಿ ಯುವರಾಜ ಜೈನ್). ಅಡ್ಡ ಹಲಗೆ(4 ಜತೆ): ಪ್ರಥಮ-ಬೋಳಾರ ತ್ರಿಶಾಲ್ ಕೆ.ಪೂಜಾರಿ ಎ(ಹಲಗೆ ಮುಟ್ಟಿದವರು-ಮಂದಾರ್ತಿ ಶಿರೂರು ಗೋಪಾಲ ನಾಯ್ಕ), ದ್ವಿತೀಯ-ಬೋಳಾರ ತ್ರಿಶಾಲ್ ಕೆ.ಪೂಜಾರಿ ಬಿ(ಮಂದಾರ್ತಿ ಶಿರೂರು ಗೋಪಾಲ ನಾಯ್ಕ). ಹಗ್ಗ ಹಿರಿಯ(15 ಜತೆ): ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್(ಕೋಣ ಓಡಿಸಿದವರು-ಕೊಳಕೆ ಇರ್ವತ್ತೂರು ಆನಂದ್), ದ್ವಿತೀಯ-ಮೂಡಬಿದಿರೆ ನಿವ್ ಪಡಿವಾಳ್ಸ್ ಮಿಹೀತ್ ಮಿಥುನ್ ಬಿ.ಶೆಟ್ಟಿ ಎ(ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ). ಹಗ್ಗ ಕಿರಿಯ(11 ಜತೆ): ಪ್ರಥಮ-ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ ಎ(ಕೋಣ ಓಡಿಸಿದವರು-ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ), ದ್ವಿತೀಯ-ಸೂಡ ಹಳೆಮನೆ ಅಜಿತ್ ರಾಜು ಶೆಟ್ಟಿ(ಮಾಳ ಕಲ್ಲೇರಿ ಭರತ್ ಶೆಟ್ಟಿ). ನೇಗಿಲು ಹಿರಿಯ(23 ಜತೆ): ಪ್ರಥಮ-ಇರುವೈಲು ಪಾಣಿಲ ಬಾಡ ಪೂಜಾರಿ(ಕೋಣ ಓಡಿಸಿದವರು- ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ), ದ್ವಿತೀಯ-ಬೋಳದಗುತ್ತು ಸತೀಶ್ ಶೆಟ್ಟಿ ಎ(ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಶೆಟ್ಟಿ). ನೇಗಿಲು ಕಿರಿಯ(87 ಜತೆ): ಪ್ರಥಮ-ಬ್ರಹ್ಮಾವರ ಹಂದಾಡಿ ಶೇಖರ ಪೂಜಾರಿ(ಕೋಣ ಓಡಿಸಿದವರು-ಪಣಪಿಲ ಪ್ರವೀಣ್ ಕೋಟ್ಯಾನ್), ದ್ವಿತೀಯ-ಕರ್ನಿರೆ ಮಾಗಂದಡಿ ನಯನ ಪ್ರಕಾಶ್ ಶೆಟ್ಟಿ ಎ(ಮರೋಡಿ ಶ್ರೀಧರ್).
ಹಗ್ಗ ಹಿರಿಯ ವಿಭಾಗದಲ್ಲಿ ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್ ಅವರ ಕೋಣಗಳನ್ನು ಓಡಿಸಿದ ಕೊಳಕೆ ಇರ್ವತ್ತೂರು ಆನಂದ್‍ರವರು ನಡುಮುಗೇರಗುತ್ತು ಕರುಣಾಕರ ಶೆಟ್ಟಿ ಸ್ಮರಣಾರ್ಥ ಒಂದು ಪವನ್ ಚಿನ್ನದ ವಿಶೇó ಬಹುಮಾನ ಪಡೆದರು.

ಅಡ್ವೆ ನಂದಿಕೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಅಡ್ವೆ ಚಿತ್ತರಂಜನ್ ಶೆಟ್ಟಿ, ಅಡ್ವೆ ಕಂಕಣಗುತ್ತು ಹರೀಶ್ ಶೆಟ್ಟಿ, ಸುರೇಶ್ ಶೆಟ್ಟಿ ಮೂಡ್ರಗುತ್ತು, ಕಾರ್ಯಾಧ್ಯಕ್ಷ ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನವೀನ್‍ಚಂದ್ರ ಸುವರ್ಣ ಅಡ್ವೆ, ಉಪಾಧ್ಯಕ್ಷರುಗಳಾದ ಶೆಟ್ಟಿ ಬೆಜ್ಜಬೆಟ್ಟು, ಶಶಿಕುಮಾರ್ ಶೆಟ್ಟಿ ಸಾಂತೂರು ಬಾಲ್ಕಟ್ಟ ಮನೆ, ಕಾರ್ಯದರ್ಶಿಗಳಾದ ಶಶಿಧರ್ ಹೆಗ್ಡೆ ಅಡ್ವೆ, ಉದಯ ರೈ ಅರಂತಡೆ, ಕೃಷ್ಣಕುಮಾರ್ ಸನ್ನೋಣಿ, ಕೋಶಾಧಿಕಾರಿಗಳಾದ ಲಕ್ಷ್ಮಣ ಶೆಟ್ಟಿವಾಲ್ ಅರಂತಡೆ, ಗಣೇಶ್ ಶೆಟ್ಟಿ ಸಾಂತೂರು, ಅಮರನಾಥ ಶೆಟ್ಟಿ ಅಣ್ಣಾಜಿಗೋಳಿ, ಗಣೇಶ್‍ರಾಜ್ ಶೆಟ್ಟಿ ಅಡ್ವೆ ವಿಜೇತರಿಗೆ ಬಹುಮಾನ ವಿತರಿಸಿದರು.

ತೀರ್ಪುಗಾರರಾದ ಎಡ್ತೂರು ರಾಜೀವ ಶೆಟ್ಟಿ, ವಿಜಯಕುಮಾರ್ ಕಂಗಿನಮನೆ ಕಾರ್ಯಕ್ರಮ ನಿರ್ವಹಿಸಿದರು.
ಫೋಟೋ:12ಎಚ್‍ಕೆ1