ಭಾರತವು ಕುಟುಂಬ ಪದ್ಧತಿಗೆ ಬದ್ಧವಾಗಿರುವ ದೇಶ

ಪಡುಬಿದ್ರಿ ಭಾರತವು ಕುಟುಂಬ ಪದ್ಧತಿಗೆ ಬದ್ಧವಾಗಿರುವ ದೇಶ. ಭಾರತದ ಕುಟುಂಬ ಪದ್ಧತಿಯಲ್ಲಿ ಮಹಿಳೆಯ ಪಾತ್ರ ಮಹತ್ತರವಾದುದು. ಇಂದು ವಿಶ್ವದಲ್ಲಿ ಭಾರತಕ್ಕೆ ಹೆಚ್ಚು ಆದ್ಯತೆ ಸಿಗಲು ಭಾರತದ ಕುಟುಂಬ ಪದ್ಧತಿಯೇ ಕಾರಣ ಎಂದು ಉಡುಪಿ ಜಿಪಂ ಸದಸ್ಯೆ ರೇಷ್ಮಾ ಉದಯ ಶೆಟ್ಟಿ ಇನ್ನ ಹೇಳಿದರು.

ಜೇಸಿಐ ಪಡುಬಿದ್ರಿಯ ಜೇಸಿರೆಟ್ ಮತ್ತು ಮಹಳಾ ಜೇಸಿ ಸದಸ್ಯರ ನೇತೃತ್ವದಲ್ಲಿ ಪಡುಬಿದ್ರಿಯ ಸಹಕಾರ ಸಂಗಮ ಸಭಾಂಗಣದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇದೇ ಸಂದರ್ಭ ಖ್ಯಾತ ಅಯುರ್ವೇದ ತಜ್ಞೆ ಡಾ.ಚೈತ್ರಾ ಗುರುಪ್ರಸಾದ್ ಶೆಟ್ಟಿ ಮಹಿಳೆಯರಿಗೆ ಆರೋಗ್ಯ ಮಾಹಿತಿ ನೀಡಿ, ರೋಗ ಬರುವುದಕ್ಕೆ ಮುನ್ನ ರೋಗ ಬಾರದಂತೆ ತಡೆಗಟ್ಟುವುದು ಕ್ಷೇಮ ಎಂದರು.

ಸನ್ಮಾನ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಂತೋಷ್ ಕೋಟ್ಯಾನ್‍ರವರ ಪತ್ನಿ ಮನೀಷಾ ಸಂತೋಷ್, ಬಿಎಸ್‍ಎಫ್ ಸೈನಿಕ ದಿಲೀಪ್‍ರವರ ಪತ್ನಿ ತುಳಸಿ ದಿಲೀಪ್, ಉಡುಪಿ ತಾಪಂ ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ ಮತ್ತು ಪೌರ ಕಾರ್ಮಿಕೆ ಯಶೋದಾ ಕುಮಾರ್‍ರವರನ್ನು ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಜೇಸಿಐ ಪಡುಬಿದ್ರಿಯ ಜೇಸೀರೆಟ್ ವಿಭಾಗದ ಅಧ್ಯಕ್ಷೆ ಅಶ್ವಿನಿ ಪ್ರದೀಪ್ ಆಚಾರ್ಯ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.
ಜೇಸಿಐ ವಲಯ 15ರ ವಲಯಾಧಿಕಾರಿ ಶಾರದೇಶ್ವರೀ ಗುರ್ಮೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.
ಜೇಸಿಐ ಪಡುಬಿದ್ರಿಯ ಅಧ್ಯಕ್ಷ ಪ್ರದೀಪ್ ಆಚಾರ್ಯ, ನಿಕಟಪೂರ್ವಾಧ್ಯಕ್ಷ ಅನಿಲ್ ಶೆಟ್ಟಿ, ಕೋಶಾಧಿಕಾರಿ ಶಿವರಾಜ್ ಮೊಯ್ಲಿ, ಜ್ಯೂನಿಯರ್ ಜೇಸೀ ಅಧ್ಯಕ್ಷ ಆದಿತ್ಯ ಜೆ.ಶೆಟ್ಟಿ ಉಪಸ್ಥಿತರಿದ್ದರು.

ಪ್ರೀತಿ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು. ಅನೂಷಾ ಶಿವರಾಜ್ ವಂದಿಸಿದರು.