Women are responsible to bring smile on our face during the month of Aati – Sheela K. Shetty

Padubidri, Aug 5th, 2018:  Rotary club and Inner Wheel clubs of Padubidri organised a competition for women “Aatida Pantha” (Aati’s Challenge) to prepare various delicacies of the month of Aati (Aashadha) at Ambedkar Bhavan on Sunday.  Udupi Zilla Panchayat vice president Smt. Sheela K.. Shetty was the chief guest and in iher address she said women are responsible for bringing  smile on our face during the harsh month of Aati.

Tulu thinker P.K. Sadananda inaugurated the function by lighting the torch (Tudar) and said we should nourish our culture by passing it on to our younger generation and not just restricting it to celebrations.

Rotary president Genesh Acharya presided and welcomed the guests.  Senior Rotarian Madhava Suvarna and other dignitaries were present.

Full news in Kannada ..

ಈಗಿನ ಆಟಿ ತಿಂಗಳ ನಗುವಿಗೆ ಮಹಿಳೆಯರು ಕಾರಣ-ಶೀಲಾ ಕೆ.ಶೆಟ್ಟಿ

ಪುರಾತನ ಕಾಲದಲ್ಲಿ ಆಟಿ ತಿಂಗಳು ಕಷ್ಟಕರ ದುಃಖಕರ ಸಮಯವಾಗಿತ್ತು.ಆದರೆ ಇಂದು ಆಟಿ ತಿಂಗಳು ನಗುವಿನ ತಿಂಗಳಾಗಿದೆ.ಇದಕ್ಕೆ ಮಹಿಳೆಯರೇ ಕಾರಣ.ಬಗೆಬಗೆಯ ಆಟಿ ತಿನಿಸುಗಳನ್ನು ತಯಾರಿಸುವ ಮೂಲಕ ಮಹಿಳೆಯರು ನಗುವಿಗೆ ಕಾರಣರಾಗಿದ್ದಾರೆ ಎಂದು ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಎರ್ಮಾಳು ಹೇಳಿದರು.

ಪಡುಬಿದ್ರಿ ರೋಟರಿ ಕ್ಲಬ್ ಮತ್ತು ಇನ್ನರ್‍ವೀಲ್ ಕ್ಲಬ್ ಆಶ್ರಯದಲ್ಲಿ ಭಾನುವಾರ ಪಡುಬಿದ್ರಿಯ ಅಂಬೇಡ್ಕರ್ ಭವನದಲ್ಲಿ ಮಹಿಳೆಯರಿಗಾಗಿ ನಡೆದ ಆಟಿದ ಪಂಥ(ತುಳುನಾಡಿನ ಆಟಿ ತಿಂಗಳ ವಿವಿಧ ಖಾದ್ಯ ಪದಾರ್ಥಗಳ ಸ್ಪರ್ಧೆ) ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಆಟಿ ತಿಂಗಳ ಆಹಾರವೇ ಔಷಧ.ಅನಘ್ರ್ಯ ಔಷಧ ಭಂಡಾರ ಈ ಪ್ರಕೃತಿ ಎಂದ ಅವರು ಅವಿಭಜಿತ ದಕ ಜಿಲ್ಲೆಯಲ್ಲಿ 1999ರಲ್ಲಿ ಉಡುಪಿ ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟ ಪ್ರಥಮ ಬಾರಿಗೆ ಆಟಿ ಕೂಟ ಆಯೋಜಿಸಿದ್ದು, ಇಂದಿಗೂ ನಿರಂತರ ಮುಂದುವರಿಸಿಕೊಂಡು ಬಂದಿದೆ ಎಂದರು.

 

ತುಡರ ದೀಪ ಹಚ್ಚು ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ತುಳು ಚಿಂತಕ ಪಿ.ಕೆ.ಸದಾನಂದ ಆಟಿಕೂಟಗಳು ಆಚರಣೆಗೆ ಸೀಮಿತವಾಗದೆ ಎಳೆಯರಿಗೆ ಕಲಿಸಿಕೊಡುವ ಮೂಲಕ ಸಂಸ್ಕøತಿ ಉಳಿಕೆಗೆ ಪ್ರೋತ್ಸಾಹ ನೀಡಬೇಕೆಂದರು.ತುಳುವರ ಆಚರಣೆ,ಆಹಾರ ಪದ್ಧತಿ,ಆರಾಧನಾ ಪದ್ಧತಿ,ನಡವಳಿಕೆ,ಸಂಸ್ಕಾರ,ಸಂಸ್ಕøತಿಗಳ ಬಗ್ಗೆ ಸಾಂಪ್ರದಾಯಿಕ ತುಳು ಭಾಷೆಯಲ್ಲಿ ಮಾಹಿತಿ ನೀಡಿದರು.

ಪಡುಬಿದ್ರಿ ರೋಟರಿ ಅಧ್ಯಕ್ಷ ಗಣೇಶ್ ಆಚಾರ್ಯ ಎರ್ಮಾಳು ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.

ರೋಟರಿ ಹಿರಿಯ ನಾಯಕ ಮಾಧವ ಸುವರ್ಣ,ರೊಟರಿ ಜಿಲ್ಲಾ ನಿಯೋಜಿತ ಸಹಾಯಕ ಗವರ್ನರ್ ಗಣೇಶ್ ಆಚಾರ್ಯ ಉಚ್ಚಿಲ,ಗೊಡ್ಡ ಸಮಾಜ ಸೇವಾ ಸಂಘದ ಅಧ್ಯಕ್ಷ ಪಿ.ಕೃಷ್ಣ ಬಂಗೇರ,ಇನ್ನರ್‍ವೀಲ್ ಕ್ಲಬ್ ಅಧ್ಯಕ್ಷೆ ಸುಧಾ ಎಮ್.ಸುವರ್ಣ,ಕಾರ್ಯದರ್ಶಿ ಸುನಂದಾ ದೇವಾಡಿಗ ಮುಖ್ಯ ಅತಿಥಿಗಳಾಗಿದ್ದರು.
ಎರ್ಮಾಳು ತೆಂಕ ಮಹಿಳಾ ಮಂಡಲ,ಮಟ್ಟುಪಟ್ಣ ಮೊಗವೀರ ಮಹಿಳಾ ಸಭಾ,ಎರ್ಮಾಳು ಬಡಾ ಮಹಿಳಾ ಮಂಡಲ,ಪಡುಬಿದ್ರಿ ಶ್ರೀ ಜಾರಂದಾಯ ಮಹಿಳಾ ಮಂಡಲ ಮತ್ತು ಹೆಜಮಾಡಿ ವಿದ್ಯಾದಾಯಿನಿ ಮಹಿಳಾ ಮಂಡಲಗಳು ಆಟಿ ಪಂಥ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.ಶೀಲಾ ಕೆ.ಶೆಟ್ಟಿ,ಪಿ.ಕೆ.ಸದಾನಂದ,ಪತ್ರಕರ್ತ ಹರೀಶ್ ಕುಮಾರ್ ಹೆಜ್ಮಾಡಿ ತೀರ್ಪುಗಾರರಾಗಿದ್ದರು.

ಫಲಿತಾಂಶ:ಪ್ರಥಮ- ಪಡುಬಿದ್ರಿ ಶ್ರೀ ಜಾರಂದಾಯ ಮಹಿಳಾ ಮಂಡಲ,ದ್ವಿತೀಯ-ಮಟ್ಟುಪಟ್ಣ ಮೊಗವೀರ ಮಹಿಳಾ ಸಭಾ ಮತ್ತು ಎರ್ಮಾಳು ತೆಂಕ ಮಹಿಳಾ ಮಂಡಲ.ಬಳಿಕ ವಿಜೇತರಿಗೆ ನಗದು ಸಹಿತ ಬಹುಮಾನ ವಿತರಿಸಲಾಯಿತು.
ರೋಟರಿ ಕಾರ್ಯದರ್ಶಿ ಸುಧಾಕರ ವಂದಿಸಿದರು.ಬಿ.ಎಸ್.ಆಚಾರ್ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *