Sea erosion intensified in Yermal Tenka and Bada villages

Padubidri, July 17th, 2018:  Sea erosion problem at the beach areas in Yermal Tenka and Bada villages has intensified and the protective wall of boulders, coconut trees and fisheries road are facing threat of getting engulfed by the sea.  The sea erosion has occurred within 100 meters radius off Vishnu Bhajana Mandira.  The fisheries road is threatened being cut off and many trees are also facing threat being engulfed.

 

Sea erosion had also occurred a few years ago engulfing the road and the coconut trees.  A 10 meter wide temporary wall was built by filling large boulders.  But now they are getting washed away.  The sea is also turbulent near Alve Kodi and Padubidri’s Kadipatna areas.

ಎರ್ಮಾಳು ಗ್ರಾಮಗಳಲ್ಲಿ ತೀವ್ರಗೊಂಡ ಸಮುದ್ರ ಕೊರೆತ


ಪಡುಬಿದ್ರಿ, 17/07/2018: ಎರ್ಮಾಳು ತೆಂಕ ಮತ್ತು ಬಡಾ ಗ್ರಾಮಗಳ ಸಮುದ್ರ ತೀರದಲ್ಲಿ ಕಡಲ್ಕೊರೆತ ತೀವ್ ಗೊಂಡಿದ್ದು,ತಾತ್ಕಾಲಿಕ ತಡೆಗೋಡೆ ,ತೆಂಗಿನ ಮರಗಳು,ಮೀನುಗಾರಿಕಾ ರಸ್ತೆ ಸಮುದ್ರ ಪಾಲಾಗುವ ಭೀತಿ ಎದುರಾಗಿದೆ.
ಬಡಾ ಎರ್ಮಾಳು ವಿಷ್ಣು ಭಜನಾ ಮಂದಿರದ ಬಳಿ ಸುಮಾರು ನೂರು ಮೀಟರ್ ವ್ಯಾಪ್ತಿಯಲ್ಲಿ ಕಡಲ್ಕೊರೆತ ಉಂಟಾಗಿದ್ದು, ಈ ಪ್ರದೇಶದಲ್ಲಿ ಹಾದು ಹೋಗಿರುವ ಮೀನುಗಾರಿಕಾ ರಸ್ತೆ ಸಂಪರ್ಕ ಕಡಿತಗೊಳ್ಳುವ ಭೀತಿಯಲ್ಲಿದೆ. ಈ ಪ್ರದೇಶದಲ್ಲಿರುವ ಹತ್ತಾರು ತೆಂಗಿನ ಮರಗಳು ಸಮುದ್ರ ಪಾಲಾಗುವ ಸ್ಥಿತಿಯಲ್ಲಿವೆ.

ಕೆಲ ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಕಡಲ್ಕೊರೆತ ಉಂಟಾಗಿ ರಸ್ತೆ ಹಾಗೂ ತೆಂಗಿನ ಮರಗಳು ಸಾಗರದ ಒಡಲು ಸೇರಿತ್ತು. ಅಂದು ಈ ಪ್ರದೇಶದಲ್ಲಿ 10 ಮೀಟರ್ ಅಗಲಕ್ಕೆ ಕಲ್ಲುಗಳನ್ನು ತುಂಬಿ ತಾತ್ಕಾಲಿಕ ತಡೆಗೋಡೆ ನಿರ್ಮಿಸಲಾಗಿತ್ತು. ಇದೀಗ ಅ ಕಲ್ಲುಗಳು ಸಮುದ್ರ ಪಾಲಾಗುತ್ತಿವೆ.

ತೆಂಕ ಎರ್ಮಾಳಿನಲ್ಲಿಯೂ ಸುಮಾರು 25 ಮೀಟರ್ ವಿಸ್ತೀರ್ಣದಲ್ಲಿ ಕಡಲಬ್ಬರ ಜೋರಾಗಿದ್ದು, ತಾತ್ಕಾಲಿಕ ತಡೆಗೋಡೆ ಕಡಲು ಪಾಲಾಗುತ್ತಿದೆ.ಸುಮಾರು ಎರಡು ವರ್ಷಗಳ ಹಿಂದೆಯಷ್ಟೇ ಇಲ್ಲಿ ಸಮುದ್ರ ತಡೆಗೋಡೆ ನಿರ್ಮಿಸಲಾಗಿತ್ತು. ಅಳ್ವೆಕೋಡಿ, ಪಡುಬಿದ್ರಿಯ ಕಾಡಿಪಟ್ಣ ಪ್ರದೇಶದಲ್ಲಿಯೂ ಸಮುದ್ರದ ಅಬ್ಬರದ ಅಲೆಗಳು ತೀರದಲ್ಲಿ ಅಪ್ಪಳಿಸುತ್ತಿವೆ.