Sadashiva Kotian elected as the president of Elooru Mogaveera Sabha

ಹೆಜಮಾಡಿ ಏಳೂರು ಮೊಗವೀರ ಸಭಾ ಅಧ್ಯಕ್ಷರಾಗಿ ಸದಾಶಿವ ಕೋಟ್ಯಾನ್ ಆಯ್ಕೆ

ಪಡುಬಿದ್ರಿ: ಹೆಜಮಾಡಿ,ಗುಂಡಿ,ಕನ್ನಂಗಾರು,ಪಲಿಮಾರು,ಮಟ್ಟು,ಆಚೆಮಟ್ಟು ಮತ್ತು ಸಣ್ಣಗುಂಡಿ ಮೊಗವೀರ ಮಹಾಸಭಾಗಳನ್ನೊಳಗೊಂಡ ಸಂಯುಕ್ತ ಹೆಜಮಾಡಿ ಏಳೂರು ಮೊಗವೀರ ಮಹಾಸಭಾ ಅಧ್ಯಕ್ಷರಾಗಿ ಸದಾಶಿವ ಕೋಟ್ಯಾನ್ ಪಲಿಮಾರು ಆಯ್ಕೆಯಾಗಿದ್ದಾರೆ.

ಇತರ ಪದಾಧಿಕಾರಿಗಳು: ಉಪಾಧ್ಯಕ್ಷ- ರವಿ ಎಚ್,ಕುಂದರ್ ಹೆಜಮಾಡಿ,ಪ್ರಧಾನ ಕಾರ್ಯದರ್ಶಿ-ಎಸ್.ದಿವಾಕರ ಹೆಜ್ಮಾಡಿ ಗುಂಡಿ,ಜತೆ ಕಾರ್ಯದರ್ಶಿ-ಶರಣ್ ಕುಮಾರ್ ಮಟ್ಟು,ಕೋಶಾಧಿಕಾರಿ-ಅಶೋಕ್ ವಿ.ಕೆ.ಗುಂಡಿ,ಕಾರ್ಯಕಾರಿ ಸಮಿತಿ ಸದಸ್ಯರು-ವಿಜಯ ಕೋಟ್ಯಾನ್ ಮಟ್ಟು,ಸುಧಾಕರ ಕರ್ಕೇರ ಪಲಿಮಾರು,ಲಲಿತ್ ಕುಮಾರ್ ಆಚೆಮಟ್ಟು,ನಾಗೇಶ್ ಬಂಗೇರ ಕಣ್ಣಂಗಾರು,ದೇವಾನಂದ ಮೆಂಡನ್ ಸಣ್ಣಗುಂಡಿ,ಪಾಂಡುರಂಗ ಕರ್ಕೇರ ಹೆಜಮಾಡಿ ಆಯ್ಕೆಯಾಗಿದ್ದಾರೆ.