Rotary club Padubidri organises Iftar meet for harmony

ಸೌಹಾರ್ದಕೂಟಗಳು ವೇದಿಕೆಗೆ ಮಾತ್ರ ಸೀಮಿತವಾಗಬಾರದು-ನಜೀರ್ ಮದನಿ

ಸೌಹಾರ್ದಕೂಟಗಳು ವೇದಿಕೆಗೆ ಮಾತ್ರ ಸೀಮಿತವಾಗದೆ ಜೀವನದಲ್ಲಿ ಪರಿಪಾಲಿಸಿದಾಗ ಮಾನವ ಸಹೋದರತೆ ಉಜ್ವಲಗೊಳ್ಳುತ್ತದೆ ಎಂದು ಬೆಳ್ತಂಗಡಿ ಪೂಂಜಾಲಕಟ್ಟೆಯ ನಜೀರ್ ಮದನಿ ಹೇಳಿದರು.
ಪಡುಬಿದ್ರಿ ಸಾಯಿ ಆರ್ಕೇಡ್ ಸಭಾಂಗಣದಲ್ಲಿ ಪಡುಬಿದ್ರಿ ರೋಟರಿ ಕ್ಲಬ್ ವತಿಯಿಂದ ನಡೆದ ಮೂರನೇ ವರ್ಷದ ಸೌಹಾರ್ದ ಇಫ್ತಾರ್ ಕೂಟದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಜಾತಿ ಸಂಘರ್ಷಗಳು ನಡೆಯುತ್ತಿದ್ದು,ರಾಜಕೀಯ ಪಕ್ಷಗಳು ಬೇಳೆ ಬೇಯಿಸಿಕೊಳ್ಳುತ್ತಿದೆ.ಸಂಘರ್ಷರಹಿತ ಜೀವನಕ್ಕೆ ಇಂತಹ ಸೌಹಾರ್ದಕೂಟಗಳು ನಾಂದಿಯಾಗಲಿ ಎಂದವರು ಅಭಿಪ್ರಾಯಿಸಿದರು.

ಪಡುಬಿದ್ರಿ ಜೇಸಿಐ ಅಧ್ಯಕ್ಷ ಮಕರಂದ್ ಸಾಲ್ಯಾನ್,ಲಯನ್ಸ್ ಕ್ಲಬ್ ಅಧ್ಯಕ್ಷ ಮ್ಯಾಕ್ಸಿಮ್ ಡಿಸೋಜಾ,ಸಾಯಿ ಆರ್ಕೇಡ್‍ನ ಪಿ.ಕೆ.ಸದಾನಂದ,ರೋಟರಿ ಜಿಲ್ಲಾ ನಿಯೋಜಿತ ಸಹಾಯಕ ಗವರ್ನರ್ ಸೂರ್ಯಕಾಂತ ಶೆಟ್ಟಿ,ಪಡುಬಿದ್ರಿ ರೋಟರಿ ನಿಯೋಜಿತ ಅಧ್ಯಕ್ಷ ಗಣೇಶ್ ಆಚಾರ್ಯ ಎರ್ಮಾಳು ಮುಖ್ಯ ಅತಿಥಿಗಳಾಗಿದ್ದರು.

ರೋಟರಿ ಅಧ್ಯಕ್ಷ ರಮೀಝ್ ಹುಸೈನ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.ಸುಧಾಕರ್ ಕೆ.ಕಾರ್ಯಕ್ರಮ ನಿರ್ವಹಿಸಿದರು.ಬುಡಾನ್ ಸಾಹೇಬ್ ದುವಾ ಪ್ರಾರ್ಥನೆ ನೆರವೇರಿಸಿದರು.ಅಬ್ದುಲ್ ಹಮೀದ್ ವಂದಿಸಿದರು

 

News and pictures by

HK Hejmady