Rockers Eleven team wins Padubidri Premier League (PPL) Tennis ball cricket Tournament

Padubidri, April 2nd, 2018: Rockets Eleven Padubidri won the Padubidri Premier League (PPL) “Bandhyavya Trophy- 2018” cricket tournament held at Board School Grounds. They defeated Gagan Warriors team in the finals and bagged a cash award of Rs. 50,000.

Full news i Kannada ….

ಬಲಿಷ್ಠ ಇಲೆವೆನ್ ರಾಕರ್ಸ್‍ಗೆ ಪಡುಬಿದ್ರಿ ಪಿಪಿಎಲ್ ಬಾಂಧವ್ಯ ಟ್ರೋಫಿ-2018

ಇಲ್ಲಿನ ಬೋರ್ಡ್ ಶಾಲಾ ಮೈದಾನದಲ್ಲಿ ಕಳೆದ 4 ದಿನಗಳಿಂದ ಬೀಡು ಹಾಗೂ ನವಚೇತನ ಕ್ರಿಕೆಟರ್ಸ್ ಆಶ್ರಯದಲ್ಲಿ ನಡೆದ ಪಡುಬಿದ್ರಿ ಪ್ರೀಮಿಯರ್ ಲೀಗ್(ಪಿಪಿಎಲ್) ಸೀಸನ್-4 ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಬಲಿಷ್ಠ ಇಲೆವೆನ್ ರಾಕರ್ಸ್ ತಂಡವು ಬಾಂಧವ್ಯ ಟ್ರೋಫಿ-2018ರ ಜತೆಗೆ ನಗದು ರೂ.50,000 ಪಡೆಯಿತು.

ಯುವ ಪ್ರತಿಭಾನ್ವೇಷಣೆಗೆ ಪೂರಕವಾಗಿ 200ಕ್ಕೂ ಯುವ ಕ್ರಿಕೆಟಿಗರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ 14 ತಂಡಗಳಿಗೆ ಅವಕಾಶ ಮಾಡಿಕೊಟ್ಟ ಪಂದ್ಯಾಟದಲ್ಲಿ ಆದಿಲ್ ಕಂಚಿನಡ್ಕ ಮಾಲಿಕತ್ವದ ಇಲೆವೆನ್ ರಾಕರ್ಸ್ ತಂಡವು ಫೈನಲ್‍ನಲ್ಲಿ ಯುವ ಪ್ರತಿಭೆಗಳನ್ನೊಳಗೊಂಡ ಕೃಷ್ಣ ಸಾಲ್ಯಾನ್ ಮಾಲೀಕತ್ವದ ಗಗನ್ ವಾರಿಯರ್ಸ್ ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿ ಪ್ರಶಸ್ತಿ ಪಡೆಯಿತು.

ನಿಗದಿತ 8 ಒವರ್‍ನಲ್ಲಿ ಇಲೆವೆನ್ ರಾಕರ್ಸ್ ತಂಡವು ನಿಕಿಲ್‍ರಾಜ್ ಭರ್ಜರಿ ಬ್ಯಾಟಿಂಗ್(43 ರನ್) ಮೂಲಕ 6 ವಿಕೆಟ್ ನಷ್ಟಕ್ಕೆ 75 ರನ್ ಗಳಿಸಿದರೆ,ಚೇಸಿಂಗ್ ವೇಳೆ ಗಗನ್ ವಾರಿಯರ್ಸ್ ತಂಡವು ಇಲೆವೆನ್ ರಾಕರ್ಸ್‍ನ ಸೋನುರವರ ಮಾರಕ ದಾಳಿ(2 ಓವರ್‍ನಲ್ಲಿ 5 ವಿಕೆಟ್) ಗೆ ಸಿಲುಕಿ ಕೇವಲ 17 ರನ್ ಗಳಿಗೆ ಆಲೌಟ್ ಆಗಿ 58 ರನ್‍ಗಳಿಂದ ಸೋಲೊಪ್ಪಿಕೊಂಡಿತು.ಗಗನ್ ವಾರಿಯರ್ಸ್‍ಗೆ ದ್ವಿತೀಯ ಟ್ರೋಫಿ ಸಹಿತ ನಗದು ರೂ.30000 ದೊರಕಿತು.

ವೈಯಕ್ತಿಕ ಪ್ರಶಸ್ತಿ: ಸರಣಿಯುದ್ದಕ್ಕೂ ಅತ್ಯತ್ತಮ ಆಟವಾಡಿದಗಗನ್ ವಾರಿಯರ್ಸ್ ನಾಯಕ ಉಮೇಶ್ ಪಡುಬಿದ್ರಿಗೆ ಸರಣಿಶ್ರೇಷ್ಠ ಪ್ರಶಸ್ತಿ, ಫೈನಲ್ ಪಂದ್ಯದ ಪಂದ್ಯಶ್ರೇಷ್ಟರಾಗಿ ಇಲೆವೆನ್ ರಾಕರ್ಸ್‍ನ ನಿಕಿಲ್ ರಾಜ್,ಅತ್ಯುತ್ತಮ ಬ್ಯಾಟ್ಸ್‍ಮೆನ್ ಆಗಿ ಮ್ಯಾಗ್ನಿಟ್ಯೂಡ್ ಬಾಯ್ಸ್ ತಂಡದ ವರುಣ್,ಅತ್ಯುತ್ತಮ ಬೌಲರ್ ಆಗಿ ಇಲೆವೆನ್ ರಾಕರ್ಸ್‍ನ ರಜಾಕ್,ಅತ್ಯತ್ತಮ ವಿಕೆಟ್‍ಕೀಪರ್ ಆಗಿ ಗಗನ್ ವಾರಿಯರ್ಸ್‍ನ ತರುಣ್,ಅತ್ಯುತ್ತಮ ಫೀಲ್ಡರ್ ಆಗಿ ಪಡುಬಿದ್ರಿ ಸೂಪರ್ ಕಿಂಗ್ಸ್‍ನ ಸಾಲಿಮ್ ವೈಯಕ್ತಿಕ ಪ್ರಶಸ್ತಿ ಪಡೆದರೆ, ಪಂದ್ಯಾವಳಿಯ ಶಿಸ್ತುಬದ್ಧ ತಂಡವಾಗಿ ಪ್ರಕಾಶ್ ಆಚಾರ್ಯ ಮಾಲಿಕತ್ವದ ಪಡುಬಿದ್ರಿ ಸೂಪರ್ ಕಿಂಗ್ಸ್ ಪ್ರಶಸ್ತಿ ಪಡೆಯಿತು.


ಸೆಮಿಫೈನಲ್‍ಗಳಲ್ಲಿ ಗಗನ್ ವಾರಿಯರ್ಸ್ ತಂಡವು ನಂದನ್ ಜೈನ್ ಮಾಲೀಕತ್ವದ ಬೀಡು ವಾರಿಯರ್ಸ್ ತಂಡವನ್ನು ಹಾಗೂ ಇಲೆವೆನ್ ರಾಕರ್ಸ್ ತಂಡವು ಅಹಮದ್ ಬಾವಾ ಮಾಲೀಕತ್ವದ ಎಎಮ್ ರಾಯಲ್ಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತ್ತು.
ಸನ್ಮಾನ:ಕಂಚಿನಡ್ಕ ಸ್ಮಶಾನ ನಿರ್ವಹಣೆಯ ಸೇವೆಗಾಗಿ ಸುಗುಣ ಹಾಗೂ ಅಂತರಾಷ್ಟ್ರೀಯ ಕರಾಟೆಪಟು ಹೆಜಮಾಡಿಯ ಪ್ರತೀಕ್ಷಾ ನಿತ್ಯಾನಂದ್‍ರವರನ್ನು ಸಂಘಟಕರ ಪರವಾಗಿ ಸನ್ಮಾನಿಸಲಾಯಿತು.

ಸಹಾಯಧನ,ವಿದ್ಯಾರ್ಥಿವೇತನ ವಿತರಣೆ: ಸಮಾರಂಭದಲ್ಲಿ ಸಂಘಟಕರ ವತಿಯಿಂದ ಪಲಿಮಾರಿನ ವಿಕಲಚೇತನ ಕೇಶವ ಸಫಲಿಗರಿಗೆ ಸಹಾಯಧನ,8 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ಬಹುಮಾನ ವಿತರಣೆ:ಲಾಲಾಜಿ ಮೆಂಡನ್,ಯಶಪಾಲ್ ಸುವರ್ಣ,ಸುರೇಶ್ ಶೆಟ್ಟಿ ಗುರ್ಮೆ,ಪ್ರಕಾಶ್ ಶೆಟ್ಟಿ ಪಾದೆಬೆಟ್ಟು,ನವೀನ್‍ಚಂದ್ರ ಜೆ.ಶೆಟ್ಟಿ,ಶಶಿಕಾಂತ್ ಪಡುಬಿದ್ರಿ,ಪ್ರಕಾಶ್ ಶೆಟ್ಟಿ ಪಡುಹಿತ್ಲು,ಉಮೇಶ್ ಪುತ್ರನ್,ಶರತ್ ಶೆಟ್ಟಿ,ರಾಜೇಶ್ ಕೋಟ್ಯಾನ್,ಯೋಗೀಶ್ ಶೆಟ್ಟಿ ಬಾಲಾಜಿ,ರಾಘವೇಂದ್ರ ಮುಗೆರಾಯ,ಮಕರಂದ ಸಾಲ್ಯಾನ್,ಸಂಕಪ್ಪ ಎ.,ಕರುಣಾಕರ ಪೂಜಾರಿ,ಅಜಿತ್ ಶೆಟ್ಟಿ,ಭಾಸ್ಕರ್,ದಿನೇಶ್ ಕೋಟ್ಯಾನ್,ಚಂದ್ರಹಾಸ ಎರ್ಮಾಳ್,ವಿಷ್ಣುಮೂರ್ತಿ ಆಚಾರ್ಯ,ರಾಜೇಶ್ ಎಸ್.,ಶರತ್ ಶರ್ಮ,ಪ್ರಸಾದ್ ದೇವಾಡಿಗ ಬೀಡು,ಸುಬ್ರಹ್ಮಣ್ಯ ನವಚೇತನ,ಹಸನ್ ಬಾವ,ವಿಘ್ನೇಶ್,ರಮೀಝ್ ಹುಸೈನ್ ಬಹುಮಾನ ವಿತರಿಸಿದರು.

ಪ್ರಕಾಶ್ ಕೆರಮ ಮತ್ತು ಶ್ಯಾಂ ಸುಂದರ್ ಕಾರ್ಯಕ್ರಮ ನಿರ್ವಹಿಸಿದರು.