ಮುದರಂಗಡಿ-ಎಂ.ಎಲ್.ಸಿ. ಐವನ್ ಡಿಸೋಜರಿಗೆ ಹುಟ್ಟೂರ ಸನ್ಮಾನ

ಪಡುಬಿದ್ರಿ: ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ ಹುಟ್ಟೂರು ಮುದರಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಆರು ವರ್ಷಗಳಲ್ಲಿ 25 ಕೋಟಿಗೂ ಹೆಚ್ಚಿನ ಅನುದಾನದಿಂದ ಅಭಿವೃದ್ಧಿ ಕಾರ್ಯ ನಿರ್ವಹಿಸಿದ ಐವನ್ ಡಿಸೋಜರವರಿಗೆ ಮುದರಂಗಡಿ ಗ್ರಾಮ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರದ ಸರ್ವ ನಾಗರಿಕರ ಪರವಾಗಿ ಮುದರಂಗಡಿ ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್‍ನ ಸಭಾಭವನದಲ್ಲಿ ಕೃತಜ್ಞತಾ ಪೂರ್ವಕ ಸನ್ಮಾನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಧರ್ಮಗುರುಗಳು, ಗ್ರಾಪಂ ಅಧ್ಯಕ್ಷ ಡೇವಿಡ್ ಡಿಸೋಜಾ, ತಾಪಂ ಸದಸ್ಯ ಯು.ಸಿ. ಶೇಕಬ್ಬ, ಗ್ರಾಪಂ ಸದಸ್ಯರು, ಗ್ರಾಮಾಭಿವೃದ್ಧಿ ಅಧಿಕಾರಿ, ಗ್ರಾಮಕರಣಿಕರು, ಅಭಿಮಾನಿಗಳು ಉಪಸ್ಥಿತರಿದ್ದರು.