ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವ ವ್ಯಕ್ತಿತ್ವ ಪ್ರಕಾಶ್ ಶೆಟ್ಟಿ ಅವರದ್ದಾಗಿದೆ: ಡಾ.ದೇವಿಪ್ರಸಾದ್ ಶೆಟ್ಟಿ

ಪಡುಬಿದ್ರಿ: ಬಂಟ ಸಮಾಜದಲ್ಲಿ ಜನಿಸಿ ಯಶಸ್ವೀ ಉದ್ಯಮಿಯಾಗಿರುವ ಕೆ. ಪ್ರಕಾಶ್ ಶೆಟ್ಟಿ ಅವರು ಸಮಾಜದ ಬಡವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವಂತಹ ಗುಣವನ್ನು ಹೊಂದಿರುವವರಾಗಿದ್ದಾರೆ. ಈ ಕೊರೊನಾ ಮಹಾಮಾರಿಯ ಸಮಯದಲ್ಲಿ ಕೇವಲ ಬಂಟರು ಮಾತ್ರವಲ್ಲದೇ ಇತರೆಲ್ಲಾ ವರ್ಗದ ಬಡವರಿಗೂ ಸುಮಾರು 1ಕೋಟಿ ರೂ.ಗಳ ನಿತ್ಯ ಉಪಯೋಗಿ ಅಕ್ಕಿ, ಸಕ್ಕರೆ ಮುಂತಾದವುಗಳನ್ನೊಳಗೊಂಡ ಕಿಟ್ ನೀಡಿದಂತಹ ಹೃದಯವಂತಿಕೆಯ ವ್ಯಕ್ತಿತ್ವ ಅವರದ್ದಾಗಿದೆ ಎಂದು ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಹೇಳಿದರು.

ಅವರು ಎ. 4ರಂದು ಬೆಂಗಳೂರಿನ ಉದ್ಯಮಿ, ಬೆಂಗಳೂರಿನ ಎಂಆರ್‍ಜಿ ಗ್ರೂಪ್‍ನ ಸಂಸ್ಥಾಪಕ ಕೆ. ಪ್ರಕಾಶ್‍ಶೆಟ್ಟಿ ಅವರು ಕೊರೊನಾ ವೈರಾಣುವಿನಿಂದ ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಕಡು ಬಡವರ ದಿನನಿತ್ಯದ ಉಪಯೋಗಕ್ಕಾಗಿ ರವಾನಿಸಿರುವ ಆಹಾರ ಸಾಮಾಗ್ರಿಗಳ ಕಿಟ್‍ಅನ್ನು ಪಡುಬಿದ್ರಿ ಬಂಟರ ಸಂಘದ ವ್ಯಾಪ್ತಿಯಲ್ಲಿನ ಎಲ್ಲಾ ವರ್ಗದ ಬಡವರಿಗೆ ವಿತರಿಸಿ ಮಾತನಾಡಿದರು.

ಪಡುಬಿದ್ರಿ ಆಸುಪಾಸಿನ ಸುಮಾರು 200ಕುಟುಂಬಗಳು ಈ ಸೌಲಭ್ಯವನ್ನು ಪಡೆದರು.

ಈ ಸಂದರ್ಭ ಪಡುಬಿದ್ರಿ ಬಂಟರ ಸಂಘದ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಉಪಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಪಲ್ಲವಿ, ಪ್ರಮುಖರಾದ ಮುರಳೀನಾಥ ಶೆಟ್ಟಿ, ಮಾಧವ ಸಿ. ಶೆಟ್ಟಿ, ಹರೀಶ್ ಕೆ. ಶೆಟ್ಟಿ ಪಾದೆಬೆಟ್ಟು, ನವೀನ್ ಎನ್. ಶೆಟ್ಟಿ, ಧನ್‍ಪಾಲ್ ಶೆಟ್ಟಿ ಅವರಾಲು, ಕರುಣಾಕರ ಶೆಟ್ಟಿ ಪಲಿಮಾರು, ವಿನಯ ಶೆಟ್ಟಿ ಎರ್ಮಾಳು, ಸದಾನಂದ ಶೆಟ್ಟಿ ಪುಚ್ಚೊಟ್ಟು, ಸಂತೋಷ್ ಶೆಟ್ಟಿ ಅದಮಾರು ಮತ್ತಿತರಿದ್ದರು.