ಹೆಜಮಾಡಿ ಗಡಿಭಾಗದಲ್ಲಿ ತೀವ್ರ ತಪಾಸಣೆ

8 ಮಂದಿ ಉತ್ತರಕರ್ನಾಟಕ ಕೂಲಿ ಕಾರ್ಮಿಕರ ರಕ್ಷಣೆ

ಪಡುಬಿದ್ರಿ: ಮಂಗಳೂರಿನ ವಾಮಂಜೂರಿನಿಂದ ಹುಟ್ಟೂರು ಹಾವೇರಿಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದು 8 ಮಂದಿ ಕೂಲಿ ಕಾರ್ಮಿಕರನ್ನು ಮನವೊಲಿಸಿ ಪಡುಬಿದ್ರಿ ಪೋಲಿಸರು ಗಂಜಿ ಕೇಂದ್ರಕ್ಕೆ ರವಾನಿಸಿದ್ದಾರೆ.

ವಾಮಂಜೂರಿಗೆ ಕೂಲಿ ಕೆಲಸಕ್ಕೆಂದು ಬಂದಿದ್ದ ಅವರು ಊಟಕ್ಕಿಲ್ಲದ ಪರಿಣಾಮ ಕಾಲ್ನಡಿಗೆಯಲ್ಲಿ ರಾ.ಹೆ. ಮೂಲಕ ಹಾವೇರಿಗೆ ತೆರಳಿದ್ದರು. ಹೆಜಮಾಡಿ ಗಡಿಯ ಚೆಕ್‍ಪೋಸ್ಟ್‍ನಲ್ಲಿ ಪೋಲಿಸರು ತಡೆದು ಹಿಂದಕ್ಕೆ ಕಳಿಸಿದ್ದರು. ಈ ಸಂದರ್ಭ ಅಲ್ಲಿದ್ದ ಪತ್ರಕರ್ತರೊಬ್ಬರು ಕೂಲಿ ಕಾರ್ಮಿಕರ ಮನವೊಲಿಸಿ ಗಂಜಿ ಕೇಂದ್ರದಲ್ಲಿ ಎಲ್ಲಾ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದಂತೆ ಪಡು