ಭಾರಿ ಮಳೆ ಗಾಳಿಗೆ ಮನೆ ಭಾಗಶಃ ಕುಸಿದು ರೂ.80ಸಾವಿರ ನಷ್ಟ

ಪಡುಬಿದ್ರಿ; ಭಾನುವಾರ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಹೆಜಮಾಡಿ ಅಮವಾಸ್ಯೆಕರಿಯ ಬಳಿ ದಿ.ಲೋಕಯ್ಯ ಕೆ.ಮೆಂಡನ್‍ರ ಮಗ ಯತೀಶ್ ಅಮೀನ್ ಎಂಬವರ ಖಾಲಿ ಮನೆ ಭಾಗಶಃ ಕುಸಿದು ರೂ.80 ಸಾವಿರ ನಷ್ಟ ಸಂಭವಿಸಿದೆ.
ಭಾನುವಾರ ರಾತ್ರಿ ಭಾರಿ ಗಾಳಿಯ ಕಾರಣ ಮನೆಯ ಮಾಡು ಮನೆಯ ಒಳ ಭಾಗಕ್ಕೆ ಕುಸಿದಿತ್ತು. ಹಳೇ ಮನೆಯಾದ ಕಾರಣ ಇಲ್ಲಿ ಯಾರೂ ವಾಸಿಸುತ್ತಿಲ್ಲ.

ಹೆಜಮಾಡಿ ಗ್ರಾಮ ಕರಣಿಕ ಅರುಣ್ ಕುಮಾರ್, ಗ್ರಾಮ ಸೇವಕ ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರೂ. 80 ಸಾವಿರ ನಷ್ಟ ಅಂದಾಜಿಸಿದ್ದಾರೆ.

ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಉಪಾಧ್ಯಕ್ಷ ಸುಧಾಕರ ಕರ್ಕೇರ ಭೇಟಿ ನೀಡಿದ್ದಾರೆ.
ಫೋಟೋ:15ಎಚ್‍ಕೆ1