Goods train bogie wheel derails at Nandikur railway station

ನಂದಿಕೂರು: ಹಳಿ ತಪ್ಪಿದ ನಿಂತ ಗೂಡ್ಸ್ ರೈಲು

ಮಳೆ ಕಾರಣ ನಂದಿಕೂರು ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಗೂಡ್ಸ್ ರೈಲು ಹಳಿ ತಪ್ಪಿದ ಘಟನೆ ಭಾನುವಾರ ಮುಂಜಾನೆ ನಡೆದಿದೆ.

ಮುಂಬೈ ಕಡೆಯಿಂದ ಮೈಸೂರಿನ ಚಿಕ್ಕ ಮಧುರೆಗೆ ಸುಮಾರು 50 ಬೋಗಿಗಳಲ್ಲಿ ಅಕ್ಕಿ ಸಾಗಿಸುತ್ತಿದ್ದ ಗೂಡ್ಸ್ ರೈಲನ್ನು ಮೂರು ದಿನಗಳ ಹಿಂದೆ ಮಂಗಳೂರು-ಬೆಂಗಳೂರು ರೈಲು ಹಳಿಯಲ್ಲಿ ಭೂಕುಸಿತ ಉಂಟಾದ ಕಾರಣ ನಿಲ್ಲಿಸಲಾಗಿತ್ತು.ಬೆಂಗಳೂರು ಮಾರ್ಗದ ಭೂ ಕುಸಿತ ಸರಿಪಡಿಸಿ ರೈಲು ಸಂಚಾರ ಪುನರಾರಂಭಗೊಂಡ ಕಾರಣ ಭಾನುವಾರ ಮುಂಜಾನೆ ಗೂಡ್ಸ್ ರೈಲನ್ನು ಮೈಸೂರಿಗೆ ಕೊಂಡೊಯ್ಯಲು ಇಂಜಿನ್ ಸಿಕ್ಕಿಸುವ ಹಂತದಲ್ಲಿ ಮುಂಭಾಗದ ಬೋಗಿಯೊಂದರ ಗಾಲಿಯು ರೈಲು ಹಳಿಯಿಂದ ಕೆಳಗಿಳಿದಿತ್ತು.
ಬಿರು ಮಳೆಯ ಕಾರಣದಿಂದ ರೈಲು ಹಳಿ ಬಿರುಕುಬಿಟ್ಟಿರಬಹುದು ಎಂದು ಶಂಕಿಸಲಾಗಿದೆ.
ಘಟನೆ ನಡೆದ ತಕ್ಷಣ ಕೊಂಕಣ ರೈಲ್ವೆ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಸಮರೋಪಾದಿಯಲ್ಲಿ ಹಳಿ ಸರಿಪಡಿಸುವ ಕಾರ್ಯ ಮುಂದುವರಿಸಿದ್ದಾರೆ.
ಎರಡು ಪ್ರತ್ಯೇಕ ಹಳಿಗಳಿರುವ ಕಾರಣ ಇತರ ರೈಲುಗಳ ಸಂಚಾರಕ್ಕೆ ಯಾವುದೇ ತೊಂದರೆಯಾಗಲಿಲ್ಲ.ಇನ್ನೊಂದು ಹಳಿಯಲ್ಲಿ ಎಲ್ಲಾ ರೈಲುಗಳು ನಿರಾತಂಕವಾಗಿ ಸಾಗಿದವು.

 

News and pictures by:

HK Hejmady