ಹೆಜಮಾಡಿ ಕೋಡಿ: ಸೋಂಕಿತರ ಮನೆಯ ಕೆಲಸದ ಮಹಿಳೆಗೆ ಸೋಂಕು ದೃಢ

ಪಡುಬಿದ್ರಿ: ಹೆಜಮಾಡಿ ಕೋಡಿಯಲ್ಲಿ ಒಂದೇ ಮನೆಯಲ್ಲಿ 11 ಮಂದಿಗೆ ಕೊರೊನಾ ಸೋಂಕು ತಗುಲಿದ ಮನೆ ಕೆಲಸದ 60 ವರ್ಷ ವಯಸ್ಸಿನ ಮಹಿಳೆಗೆ ಸೋಮವಾರ ಕೊರೊನಾ ಸೋಂಕು ದೃಢಪಟ್ಟಿದೆ.

ಮಣಿಪಾಲ ಆಸ್ಪತ್ರೆಯಲ್ಲಿ ಸೋಂಕಿತರಾಗಿ ಗಂಭೀರ ಸ್ಥಿತಿಯಲ್ಲಿರುವ ವ್ಯಕ್ತಿಯ ಮನೆಯಲ್ಲಿ ವಾರದ ಹಿಂದಿನವರೆಗೂ ಮಹಿಳೆ ಕೆಲಸ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಜ್ವರ ಪೀಡಿತ ಮಹಿಳೆ ಮತ್ತವರ ಮಗನ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಸೋಮವಾರ ಮಹಿಳೆಯ ವರದಿ ಬಂದಿದ್ದು ಸೋಂಕು ದೃಢಪಟ್ಟಿದೆ. ಮಗನ ವರದಿ ಇನ್ನೂ ಬಂದಿಲ್ಲ. ಅವರನ್ನು ಮನೆಯಲ್ಲಿ ಕ್ವಾರಂಟೈನ್‍ಗೊಳಪಡಿಸಲಾಗಿದೆ. ಇದೇ ಸಂದರ್ಭ ಪ್ರಥಮ ಸೋಂಕಿತ ಸಂಪರ್ಕದಿಂದ ಇದ್ದ ಮತ್ತಿಬ್ಬರು ವ್ಯಕ್ತಿಗಳು ಸ್ವಯಂಪ್ರೇರಿತರಾಗಿ ಪರೀಕ್ಷೆಗೊಳಪಟ್ಟಿದ್ದು ಅವರ ವರದಿಯೂ ಕೈಸೇರಿಲ್ಲ. ಹೆಜಮಾಡಿಯ ಎರಡು ಕೊರೊನಾ ಸೋಂಕು ಘಟನೆಗೆ ಸಂಬಂಧಿಸಿ ಆರೋಗ್ಯ ಇಲಾಖೆ 15ಕ್ಕೂ ಹೆಚ್ಚು ಮಂದಿಯ ಗಂಟಲು ದ್ರವವನ್ನು ಪ