ಪಲಿಮಾರು: 50ಕಿಟ್‍ಗಳ ಹಸ್ತಾಂತರ

ಪಡುಬಿದ್ರಿ: ಕೊರೊನಾ ಮಹಾಮಾರಿಯ ಸಂದರ್ಭ ತಮ್ಮ ಮೂಲ ಮಠದ ಪರಿಸರದಲ್ಲಿ ಯಾರೂ ಹಸಿವಿನಿಂದ ಬಳಲಬಾರದೆನ್ನುವ ಉದ್ದೇಶದಿಂದ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥರು ತಮ್ಮ ಶಿಷ್ಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರ ಜತೆಗೂಡಿ ಪಲಿಮಾರು ಗ್ರಾ. ಪಂ. ವ್ಯಾಪ್ತಿಯಲ್ಲಿ ಅರ್ಹರಿಗೆ ಹಂಚಲು ಅಕ್ಕಿ ಮತ್ತಿತರ ವಸ್ತುಗಳನ್ನು ಕಾಪು ತಹಶೀಲ್ದಾರ್ ಮಹಮ್ಮದ್ ಐಸಾಕ್ ಅವರಿಗೆ 50ಕಿಟ್‍ಗಳನ್ನು ಹಸ್ತಾಂತರಿಸಿದರು. ಎಲ್ಲೂರು ಮುದರಂಗಡಿ ಗ್ರಾ. ಪಂ.ಗಳಿಗೂ 50 ಕಿಟ್‍ಗಳನ್ನು ನೀಡಿರುವ ಸ್ವಾಮೀಜಿ ಪಲಿಮಾರು ಗ್ರಾಮಸ್ಥರಿಗೆ ಅಗತ್ಯವಿದ್ದಲ್ಲಿ ಮುಂದೆಯೂ ನೀಡುವುದಾಗಿ ಹೇಳಿದ್ದಾರೆ. ಈ ಸಂದರ್ಭ ಪಲಿಮಾರು ಗ್ರಾ. ಪಂ. ಅಧ್ಯಕ್ಷ ಜಿತೇಂದ್ರ ಫುರ್ಟಾಡೋ, ಗ್ರಾ. ಪಂ. ಸದಸ್ಯರಾದ ಮಧುಕರ ಸುವರ್ಣ, ಸತೀಶ್ ದೇವಾಡಿಗ, ಕಂದಾಯ ಪರಿವೀಕ್ಷಕ ರವಿಶಂಕರ್, ಗ್ರಾ. ಪಂ. ಪಿಡಿಒ ಸತೀಶ್, ಗ್ರಾಮ ಲೆಕ್ಕಿಗ ಮಂಜು ಮತ್ತಿತರಿದ್ದರು. ಮುದರಂಗಡಿ ಎಲ್ಲೂರುಗಳಲ್ಲೂ ಈ ಕಿಟ್‍ಗಳನ್ನು ಬಡವರಿಗೆ ಹಂಚಲಾಗಿದೆ. ನಂದಿಕೂರು, ಪಲಿಮಾರು ಗ್ರಾಮಸ್ಥರಿಗೆ ಮುಂದಿನ ದಿನಗಳಲ್ಲಿ ಹಂಚಲಾಗುವುದೆಂದು ಕಾಪು ಕಂದಾಯ ಪರಿವೀಕ್ಷಕ ರವಿಶಂಕರ್ ತಿಳಿಸಿದ್ದಾರೆ.