Devotees take holy dip at sea o account of Ellamavasye

ಪಡುಬಿದ್ರಿ ಸಮೀಪದ ಹೆಜಮಾಡಿ ಅಮವಾಸ್ಯೆಕರಿಯ ಬಳಿ ಎಳ್ಳಮವಾಸ್ಯೆಯ ಅಂಗವಾಗಿ ಸೋಮವಾರ ಸಹಸ್ರಾರು ಭಕ್ತರು ಪವಿತ್ರ ಸಮುದ್ರ ಸ್ನಾನಗೈದರು.ಹಲವರು ಗತಿಸಿದ ತಮ್ಮ ಹಿರಿಯರಿಗೆ ಪಿತೃ ತರ್ಪಣ,ತಿಲಹೋಮ ಇತ್ಯಾದಿ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.ಸೋಮವಾರ ರಜಾ ಇಲ್ಲದ ಕಾರಣ ಈ ಬಾರಿ ಸಮುದ್ರ ಸ್ನಾನ ಮಾಡುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತುÁದರೂ ಮುಂಜಾನೆ 2 ಗಂಟೆಯಿಂದಲೇ ದೂದ ಕಾರ್ಕಳ,ಬೆಳ್ಮಣ್ಣು,ಮೂಡಬಿದಿರೆ,ಕಿನ್ನಿಗೋಳಿ ಸಹಿತ ಹಲವೆಡೆಗಳಿಂದ ಭಕ್ತರು ಸಮುದ್ರ ಸ್ನಾನಕ್ಕಾಗಿ ಆಗಮಿಸಿದ್ದರು.ಸಮುದ್ರ ಶಾಂತವಾಗಿದ್ದು,ಸ್ನಾನ ಮಾಡುವವರಿಗೆ ಅನುಕೂಲವಾಗಿತ್ತು.ಪಡುಬಿದ್ರಿ ಪೋಲೀಸರು,ಕರಾವಳಿ ಕಾವಲು ಪಡೆ ಪೋಲೀಸರು,ಸ್ಥಳೀಯ ಈಜುಗಾರರು ಸೂಕ್ತ ಬಂದೋಬಸ್ತ್ ವಹಿಸಿದ್ದರು.