Congress President Shri Rahul Gandhi visits Brahmashrri Narayana Guru Mandira in Hemady

Padubidri, March 23rd 2018:  Congress President Shri Rahul Gandhi visited Brahmashri Narayana Guru Mandira in Hejmady after addressing a public gathering in Padubidri.

 

ಹೆಜಮಾಡಿ ಬ್ರಹ್ಮಶ್ರೀ ನಾರಾಯಣಗುರು ದರ್ಶನ ಪಡೆದ ರಾಹುಲ್‍ಗಾಂಧಿ

ಪಡುಬಿದ್ರಿ ಕಾರ್ಯಕ್ರಮ ಮುಗಿಸಿ ಭೋಜನ ಸವಿಯಲು ಹೆಜಮಾಡಿ ನಾರಾಯಣ ಗುರು ಸಭಾಭವನಕ್ಕೆ ಆಗಮಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಅಲ್ಲೇ ಸಮೀಪದ ಬ್ರಹ್ಮಶ್ರೀ ನಾರಾಯಣ ಗುರು ಮಂದಿರಕ್ಕೆ ಭೇಟಿ ನೀಡಿದರು.
ಈ ಸಂದರ್ಭ ಅವರು ಗುರುಮೂರ್ತಿಯ ದರ್ಶನ ಪಡೆದು ಪೂಜೆ ಸಲ್ಲಿಸಿ,ಪ್ರಸಾದ ಸ್ವೀಕರಿಸಿದರು.


ಬಳಿಕ ಸಭಾಭವನದಲ್ಲಿ ಅವರು ಮತ್ತವರ ತಂಡಕ್ಕೆ ಸಿದ್ಧಪಡಿಸಿದ ಕರಾವಳಿಯ ವಿಶೇಷ ಖಾದ್ಯಗಳುಳ್ಳ ಭೋಜನ ಸವಿದರು.
ಎರಡೆರಡು ಬಾರಿ ಕೇಳಿ ಪಡೆದ ಒಣ ಸಿಗಡಿ ಚಟ್ನಿ: ನೀರ್ ದೋಸೆ,ಕೋಳಿ ಗಸಿ,ಪಾಂಪ್ರೆಟ್ ಗಸಿ,ಕೋಳಿ ರೊಟ್ಟಿ, ಕಾಣೆ ಫ್ರೈ,ಮಾವಿನ ಹಣ್ಣಿನ ಸಾಂಬಾರು,ಬೆಳ್ತಿಗೆ ಅಕ್ಕಿ ಅನ್ನದೊಂದಿಗೆ ಇದ್ದ ಸಣ್ಣ ಒಣ ಸಿಗಡಿಯ ಚಟ್ನಿಯನ್ನು ರಾಹುಲ್‍ರವರು ಎರಡೆರಡು ಬಾರಿ ಕೇಳಿ ಪಡೆದು ಸವಿದರು.ಬಳಿಕ ಚಟ್ನಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಭೋಜನ ವ್ಯವಸ್ಥೆಯಲ್ಲಿ ಪಾಯಸ ಸಹಿತ ಹಲವು ಸಸ್ಯಾಹಾರಿ ಖಾದ್ಯಗಳನ್ನು ತಯಾರಿಸಲಾಗಿದ್ದು,ಅವನ್ನೂ ಸವಿದರು.
ಸುಮಾರು 200 ಮಂದಿ ಭೋಜನ ಸವಿದರು.

ಹೆಜಮಾಡಿ ಕಾಂಗ್ರೆಸ್ ಸ್ಥಾನೀಯ ಸಮಿತಿಯ ಅಧ್ಯಕ್ಷ ಸುಧೀರ್ ಕರ್ಕೇರ ಸಹಿತ ವಿವಿಧ ಗಣ್ಯರು ಭೋಜನ ವ್ಯವಸ್ಥೆ ಕಲ್ಪಿಸಿದ್ದರು.