Aatidonji Dina-2018 celebrated at Hejamadi Kodi Govt. Hr Pr school

Padubidri, Aug. 8th, 2018:  “Aatidoni Dina-2018” was celebrated at Hejamadi Kodi Govt. Hr Primary school by the students and their parents.  Chandrashekhar Suvarna of Suvarna Arts Mulki inaugurated the function in traditional manner by desiccating a coconut

Full news in Kannada …

ಆಟಿ ಆಚರಣೆ ಮೂಲಕ ಸಂಘಟನೆ,ಸಂಸ್ಥೆ ಬಲಿಷ್ಠ-ಚಂದ್ರಶೇಖರ ಸುವರ್ಣ

ಧಾರ್ಮಿಕ ನೆಲೆಗಟ್ಟಿನ ಮೂಲಕ ಆಟಿ ಆಚರಣೆಗಳನ್ನು ಆಚರಣೆಯಿಂದ ಸಂಘಟನೆಗಳು ಮತ್ತು ಸಂಸ್ಥೆಗಳು ಬಲಿಷ್ಠವಾಗುತ್ತವೆ.ಆಟಿ ಆಚರಣೆಯನ್ನು ನಾಡಿಗೆ ಪರಿಚಯಿಸಿದ ಮೂಲ್ಕಿ ಯುವವಾಹಿನಿ ಸಂಘಟನೆಯು ಬಲಿಷ್ಠ ಸಂಘಟನೆಯಾಗಿ ಗುರುತಿಸಿಕೊಳ್ಳಲು ಇಂತಹ ಆಚರಣೆಗಳಿಂದ ಸಾಧ್ಯವಾಯಿತು ಎಂದು ಮೂಲ್ಕಿ ಸುವರ್ಣ ಆಟ್ರ್ಸ್‍ನ ಚಂದ್ರಶೇಖರ ಸುವರ್ಣ ಹೇಳಿದರು.

ಹೆಜಮಾಡಿ ಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರ ವತಿಯಿಂದ ನಡೆದ ಆಟಿಡೊಂಜಿ ದಿನ-2018 ಕಾರ್ಯಕ್ರಮವನ್ನು ತೆಂಗಿನ ಕಾಯಿ ಹೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ತುಳುನಾಡಿನ ಆಚರಣೆಗಳನ್ನು ಶಾಲಾ ಮಕ್ಕಳಿಗೆ ತಿಳಿಸಿಕೊಡುವ ಔಚಿತ್ಯಪೂರ್ಣ ಕಾರ್ಯಕ್ರಮ ಎಂದು ಶ್ಲಾಘಿಸಿದ ಅವರು,ಆಟಿ ತಿಂಗಳ ನಾಗಾರಾಧನೆಗೆ ಪ್ರಮುಖ ಕಾರಣವಿದೆ.ಆಟಿ ತಿಂಗಳಲ್ಲಿ ಮಾತ್ರ ನಾಗಬನವನ್ನು ಸ್ವಚ್ಛಗೊಳಿಸಲು,ಮರದ ಗೆಲ್ಲುಗಳನ್ನು ಕಡಿಯಲು ಅವಕಾಶವಿದೆ.ಇದು ಹಿರಿಯರು ನಂಬಿಕೊಂಡು ಬಂದ ನಂಬಿಕೆ ಎಂದವರು ಹೇಳಿದರು.
ಶಿಕ್ಷಣ ಸಂಪನ್ಮೂಲ ಕೇಂದ್ರದ ಸಮನ್ವಯ ಅಧಿಕಾರಿ ಉಮಾ ಮುಖ್ಯ ಅತಿಥಿಯಾಗಿ ಮಾತನಾಡಿ,ಎಳೆಯರಿಗೆ ಪ್ರೀತಿ,ಹಿರಿಯರಿಗೆ ಗೌರವ ನೀಡುವ ಮೂಲಕ ನಮ್ಮ ಸಂಸ್ಕøತಿಯನ್ನು ಉಳಿಸಿ ಬೆಳೆಸಲು ಇಂತಹ ಕಾರ್ಯಕ್ರಮ ಪೂರಕವಾದುದು.ಇದರಲ್ಲಿ ಮಹಿಳೆಯರಿಗೆ ಹೆಚ್ಚು ಜವಾಬ್ದಾರಿ ಇದೆ ಎಂದರು.

ಹೆಜಮಾಡಿ ಗ್ರಾಪಂ ಪಿಡಿಒ ಮಮತಾ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ,ಸರಕಾರದ ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ ಕಾರ್ಯಕ್ರಮದ ಔಚಿತ್ಯವನ್ನು ಮನಗಾಣಿಸಿದರು.


ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಉಮೇಶ್ ಪುತ್ರನ್ ಅಧ್ಯಕ್ಷತೆ ವಹಿಸಿ ತರಕಾರಿ ಕೊಚ್ಚುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪತ್ರಕರ್ತ ಪರಮಾನಂದ ಸಾಲ್ಯಾನ್,ಗ್ರಾಪಂ ಉಪಾಧ್ಯಕ್ಷ ಸುಧಾಕರ ಕರ್ಕೇರ,ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷ ಲೋಕೇಶ್ ಅಮೀನ್,ತಾಪಂ ಸದಸ್ಯೆ ರೇಣುಕಾ ಪುತ್ರನ್,ಮಾನಂಪಾಡಿ ಮೊಗವೀರ ಮಹಾಸಭಾ ಅಧ್ಯಕ್ಷ ಭಾಸ್ಕರ ಎನ್.ಪುತ್ರನ್,ಗಾಂಧಿನಗರ ಯುವಕ ವೃಂದದ ಅಧ್ಯಕ್ಷ ರವೀಂದ್ರ ಕೋಟ್ಯಾನ್,ಎಸ್‍ಡಿಎಮ್‍ಸಿ ಅಧ್ಯಕ್ಷ ಮೊಮ್ಮದ್ ಖಾಲಿದ್,ಲಲಿತಾ ಸದಾನಂದ್,ವಸಂತಿ ಟೀಚರ್, ಶಾಲಾ ಮುಖ್ಯ ಶಿಕ್ಷಕಿ ರಾಜೇಶ್ವರೀ ನಿತ್ಯಾನಂದ್ ಮುಖ್ಯ ಅತಿಥಿಗಳಾಗಿದ್ದರು.ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆ ಆಯೋಜಿಸಲಾಗಿದ್ದು ವಿಜೇತರಿಗೆ ಬಹುಮಾನ ವಿತರಿಸಲಾಯಿತು.36 ಬಗೆಯ ವಿವಿಧ ಆಟಿ ತಿನಿಸುಗಳ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು.ಬಳಿಕ ಮಕ್ಕಳಿಂದ ಜಾನಪದ ನೃತ್ಯ ನಡೆಯಿತು.ಸಂಜೀವ ಟಿ.ಮತ್ತು ದೇವದಾಸ ಸಾಲ್ಯಾನ್ ತುಳು ಪಾಡ್ದನಗಳ ಮೂಲಕ ರಂಜಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು ಸ್ವಾಗತಿಸಿದರು.ಗೋವರ್ಧನ ಕೋಟ್ಯಾನ್ ಮತ್ತು ವಿಜಯ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.ನಿವೃತ್ತ ಮುಖ್ಯ ಶಿಕ್ಷಕ ಸಂಜೀವ ಟಿ.ವಂದಿಸಿದರು.