ಪಡುಬಿದ್ರಿಯ ಶ್ರೀ ಕ್ಷೇತ್ರ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ 12-03-2019 ಮಂಗಳವಾರ ಕಡೇ ಢಕ್ಕೆಬಲಿ ಸೇವೆ ಹಾಗೂ ಮಂಡಲ ವಿಸರ್ಜನೆ

ಪಡುಬಿದ್ರಿಯ ಶ್ರೀ ಕ್ಷೇತ್ರ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಮಂಗಳವಾರ ಕಡೇ ಢಕ್ಕೆಬಲಿ ಸೇವೆ ಹಾಗೂ ಮಂಡಲ ವಿಸರ್ಜನೆ ಸಂಪನ್ನಗೊಂಡಿತು.ಈ ಸಂದರ್ಭ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ನಡೆದ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ 8 ಸಾವಿರಕ್ಕೂ ಅಧಿಕ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.ಸಂಜೆ ನಡೆದ ಹೊರೆಕಾಣಿಕೆ ಮೆರವಣಿಗೆಯಲ್ಲಿ ಪಡುಬಿದ್ರಿ ಬೀಡು ಅರಸರಾದ ರತ್ನಾಕರರಾಜ್ ಅರಸು ಕಿನ್ಯಕ್ಕ ಬಲ್ಲಾಳ್,ಸನ್ನಿಧಿಯ ಪಾತ್ರಿ ಪಿ.ಜಿ.ನಾರಾಯಣ ರಾವ್.ಅರ್ಚಕರಾದ ರಾಮಕೃಷ್ಣ ಆಚಾರ್ಯ,ಕೇಶವ ಆಚಾರ್ಯ,ಗುರುರಾಜ ಆಚಾರ್ಯ ಮತ್ತು ರಘುಪತಿ ಆಚಾರ್ಯ,ಶ್ರೀ ವನದುರ್ಗಾ ಟ್ರಸ್ಟ್ ಅಧ್ಯಕ್ಷ ಕೊರ್ನಾಯ ಶ್ರೀಪತಿ ರಾವ್, ಗುರಿಕಾರ ಬಾಲಪ್ಪ ಎನ್.ಶ್ರೀನಿವಾಸ ರಾವ್,ಗುರಿಕಾರ ಮುರುಡಿ ಮೋಹನ ರಾವ್,ಪ್ರಧಾನ ಕಾರ್ಯದರ್ಶಿ ವೈ.ಎನ್.ರಾಮಚಂದ್ರ ರಾವ್,ಕೋಶಾಧಿಕಾರಿ ವೈ.ಸುರೇಶ್ ರಾವ್,ಪಿ.ಶ್ರೀನಿವಾಸ ರಾವ್,ಪಟ್ರಾಮ ಪಿ.ಕೃಷ್ಣಾನಂದ ರಾವ್,ಗುಡ್ಡೆ ವಿಠಲ ರಾವ್,ವೈ.ಎನ್.ಬಾಲಕೃಷ್ಣ ರಾವ್ ಮತ್ತಿತರರು ಉಪಸ್ಥಿತರಿದ್ದರು.