12-03-2019 ಮಂಗಳವಾರ : ಇಂದು ಕಡೇ ಢಕ್ಕೆಬಲಿ ಸೇವೆ_ಮಂಡಲ ವಿಸರ್ಜನೆ

ಪಡುಬಿದ್ರಿ: ಇತಿಹಾಸ ಪ್ರಸಿದ್ಧ ಬಯಲು ಆಲಯ ಪಡುಬಿದ್ರಿ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಸುಮಾರು ಎರಡು ತಿಂಗಳುಗಳಿಂದ ನಡೆಯುತ್ತಿರುವ ದ್ವೈವಾರ್ಷಿಕ ನಡಾವಳಿ ಢಕ್ಕೆಬಲಿ ಸೇವೆಯು ಇಂದು ಮಾ.12 ಮಂಗಳವಾರ ಹಗಲು ತಂಬಿಲ ಸೇವೆ ಬರೆಸಿದ ಭಕ್ತಾದಿಗಳಿಂದ ನಡೆಯುವ ಢಕ್ಕೆಬಲಿ ಸೇವೆ ಮತ್ತು ಮಂಡಲ ವಿಸರ್ಜನೆಯೊಂದಿಗೆ ಸಮಾಪನಗೊಳ್ಳಲಿದೆ.

ಢಕ್ಕೆಬಲಿ ಸೇವೆಯ ಅಂಗವಾಗಿ ಮಧ್ಯಾಹ್ನ 11.30 ಗಂಟೆಯಿಂದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದ್ದು,ಸಂಜೆ 4 ಗಂಟೆಯಿಂದ ಹೊರೆ ಕಾಣಿಕೆ ಮೆರವಣಿಗೆ ನಡೆಯಲಿದೆ.

ಬಳಿಕ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ರಾತ್ರಿ 10.30ರಿಂದ ಢಕ್ಕೆಬಲಿ ಸೇವೆ ನಡೆಯಲಿದ್ದು,ಮುಂಜಾವದ ಕಾಲದಲ್ಲಿ ಮಂಡಲ ವಿಸರ್ಜನೆ ನಡೆಯಲಿದೆ.
ಹಗಲು ತಂಬಿಲ ಬರೆಸಿದ ಭಕ್ತಾದಿಗಳು ಮಾ.13ರ ಬೆಳಿಗ್ಗೆಯಿಂದ ಸಂಜೆತನಕ ಪ್ರಸಾದ ಪಡೆಯಬಹುದೆಂದು ಶ್ರೀ ವನದುರ್ಗಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ವೈ.ಎನ್.ರಾಮಚಂದ್ರ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.