1.7 lakhs Katahapoopa offered to Padubidri Shri Maha-Ganapathi

Padubidri Aug 4th, 2018::  Padubidri Shri Mahalingeshwara Mahaganapathi  temple’s famous “Sarvajanika Katahapoopa Seve {Kattadappa Seve)” was performed on Saturday, Aug. 4th, 2018. 1.7 lakhs Kattadappas were offered to Lord Maha Ganapathi with Sarvajanka Pooja ceremony  after the Main Pooa ceremony.

ಪಡುಬಿದ್ರಿ ಶ್ರೀ ಮಹಾ ಗಣಪತಿಗೆ 1.70 ಲಕ್ಷ ಕಟಾಹಾಪೂಪ ಸಮರ್ಪಣೆ

ಇಲ್ಲಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ಶನಿವಾರ ರಾತ್ರಿ ಶ್ರೀ ಮಹಾಗಣಪತಿಗೆ 1.70 ಲಕ್ಷ ಕಟಾಹಾಪೂಪ(ಕಟ್ಟದಪ್ಪ) ಸಾರ್ವಜನಿಕ ಪ್ರಾರ್ಥನೆಯೊಂದಿಗೆ ಸಮರ್ಪಿಸಲಾಯಿತು.

ಶ್ರೀ ಮಹಾಗಣಪತಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ಮಹಾಪೂಜೆ ಸಲ್ಲಿಕೆಯ ಬಳಿಕ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಟಾಹಾಪೂಪ ಸೇವೆ ನಡೆಯಿತು.

ಪಡುಬಿದ್ರಿ ಯೋಗೀಶ್ ಭಟ್ ಮತ್ತು ನಂದಿಕೂರು ಕೃಷ್ಣಮೂರ್ತಿ ಭಟ್ ನೇತೃತ್ವದಲ್ಲಿ 89 ಕಾರ್ಯಕರ್ತರು ಶುಕ್ರವಾರ ಮಧ್ಯರಾತ್ರಿಯಿಂದ ಶನಿವಾರ ಸಂಜೆ 7 ಗಂಟೆವರೆಗೆ ಕಟ್ಟದಪ್ಪಗಳನ್ನು ತಯಾರಿಸಿದ್ದು,83 ಮುಡಿ ಅಕ್ಕಿ ಹಿಟ್ಟು,128 ಕ್ವಿಂಟಾಲ್ ಬೆಲ್ಲ,30 ಚೀಲ ಅರಳು,10 ಕೆಜಿ ಏಲಕ್ಕಿ, 2000 ತೆಂಗಿನಕಾಯಿ,85 ಟಿನ್ ತೆಂಗಿನೆಣ್ಣೆ ಬಳಸಲಾಯಿತು.

ಪೂಜಾ ಸಂದರ್ಭ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್,ದೇವಳದ ಅನುವಂಶಿಕ ಮೊಕ್ತೇಸರರುಗಳಾದ ರತ್ನಾಕರರಾಜ್ ಅರಸು ಕಿನ್ಯಕ್ಕ ಬಲ್ಲಾಳ್ ಮತ್ತು ಪೇಟೆಮನೆ ವಿಶ್ವನಾಥ ಹೆಗ್ಡೆ,ಕಾರ್ಯನಿರ್ವಹಣಾಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ,ಅರ್ಚಕರಾದ ಪದ್ಮನಾಭ ಭಟ್ ಮತ್ತು ಗುರುರಾಜ್ ಭಟ್,ಊರಿನ ಗಣ್ಯರು ಉಪಸ್ಥಿತರಿದ್ದರು.