ಹೊಸ ಅಂಗಣದ ತಿಂಗಳ ಬೆಳಕು ಕಾರ್ಯಕ್ರಮ

ಮೂಲ್ಕಿ: ತೆರೆಮರೆಯಲ್ಲಿರುವ ಗ್ರಾಮೀಣ ಪ್ರದೇಶದಲ್ಲಿ ಕುಲ ಕಸುಬುಗಳಲ್ಲಿ ತೊಡಗಿಸಿಕೊಂಡಿರುವವರನ್ನು ಗುರುತಿಸಿ ಪೆÇ್ರೀತ್ಸಾಹ ನೀಡಿದಲ್ಲಿ ಅವರಲ್ಲಿ ಹೆಚ್ಚಿನ ಉತ್ತೇಜನ ನೀಡಲು ಸಾಧ್ಯವೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.

ಮೂಲ್ಕಿಯ ಪುನರೂರು ಟೂರಿಸ್ಟ್ ಹೋಂ ಸಭಾಂಗಣದಲ್ಲಿ ಶುಕ್ರವಾರ ಜರಗಿದ ಹೊಸ ಅಂಗಣದ ತಿಂಗಳ ಬೆಳಕು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಸನ್ಮಾನ: ಸರ್ಕಾರದ ಆದೇಶದಂತೆ ಸಾಮಾಜಿಕ ಅಂತರದೊಂದಿಗೆ ಜರಗಿದ ಕಾರ್ಯಕ್ರಮದಲ್ಲಿ ಹಿರಿಯ ಕೃಷಿಕೆ, ಹೈನುಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮೂಲ್ಕಿ ಸಮೀಪದ ನಡಿಕುದ್ರು ನಿವಾಸಿ ವಾರಿಜ ವೀರಪ್ಪ ಸನಿಲ್‍ರನ್ನು ಸನ್ಮಾನಿಸಲಾಯಿತು.

ಮೂಲ್ಕಿಯ ಹಿರಿಯ ವೈದ್ಯ ಡಾ.ಎಂ ಅಚ್ಯುತ ಆರ್.ಕುಡ್ವ, ನಡಿಕುದ್ರು ಶ್ರೀ ಜಾರಂದಾಯ ದೈವಸ್ಥಾನದ ಗುರಿಕಾರ ಸೋಮಸುಂದರ್ ಅಂಚನ್, ಸರೋಜಿನಿ ಸುವರ್ಣ, ಅಂಬಾವತಿ ಅಂಚನ್, ರಮೇಶ್ ಕೊಕ್ಕರಕಲ್ ಉಪಸ್ಥಿತಿರಿದ್ದರು.

ಹೊಸ ಅಂಗಣ ಸಂಪಾದಕ ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್ ಸ್ವಾಗತಿಸಿದರು. ವಾಮನ್ ಕೋಟ್ಯಾನ್ ನಡಿಕುದ್ರು ವಂದಿಸಿದರು. ರವಿಚಂದ್ರ ನಿರೂಪಿಸಿದರು.