ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಪಾದುಕಾನ್ಯಾಸ

ಪಡುಬಿದ್ರಿ: ಪುನರ್‍ನಿರ್ಮಾಣಗೊಳ್ಳಲಿರುವ ಹೆಜಮಾಡಿಯ ಶ್ರೀ ಮಹಾಲಿಂಗೇಶ್ವರ ದೇವಳದ ಜೀರ್ಣೋದ್ಧಾರದ ಪ್ರಥಮ ಹಂತವಾಗಿ ಬುಧವಾರ ವಿವಿಧ ಧಾರ್ಮಿಕ ವಿಧಿಗಳೊಂದಿಗೆ ಪಾದುಕಾನ್ಯಾಸ ನಡೆಯಿತು.

ಈ ಸಂದರ್ಭ ಧಾರ್ಮಿಕ ವಿಧಿಗಳ ನೇತೃತ್ವ ವಹಿಸಿದ್ದ ವಿದ್ವಾನ್ ಪಂಜ ಭಾಸ್ಕರ ಭಟ್ ಶ್ರೀ ದೇವಳದ ಗರ್ಭಗೃಹ, ಸುತ್ತುಪೌಳಿ, ನವೀಕೃತ ಬ್ರಹ್ಮಕಲಶವು ಎಲ್ಲರ ಐಕ್ಯಮತದೊಂದಿಗೆ ನಡೆಯುವಂತೆ ಶ್ರೀ ಮಹಾಲಿಂಗೇಶ್ವರನು ಅನುಗ್ರಹಿಸಲಿ. ಎಲ್ಲರ ಸಮರ್ಪಣಾಭಾವದಿಂದ ಶೀಘ್ರಾತಿ ಶೀಘ್ರ ಸಂಪನ್ಮೂಲ ಸಹಿತ ಕಾರ್ಯಗಳೆಲ್ಲವೂ ನಿರ್ವಿಘ್ನವಾಗಿ ನಡೆಯುವಂತಾಗಲಿ ಎಂದರು.

ಕೊರೊನಾ ನಿಗ್ರಹಕ್ಕೆ ಪ್ರಾರ್ಥನೆ: ಇದೇ ಸಂದರ್ಭ ವಿಶ್ವವನ್ನೇ ಭಯದ ನೆರಳಲ್ಲಿ ಹಿಡಿದಿಟ್ಟ ಕೊರೊನಾ ಮಹಾಮಾರಿ ಶೀಘ್ರ ಮೃತ್ಯುಂಜಯ ದೇವರ ಅನುಗ್ರಹದಿಂದ ನಿವಾರಣೆಯಾಗಲಿ. ದೇಶವನ್ನು ಸುರಕ್ಷಿತವನ್ನಾಗಿಸಲಿ ಎಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ದೇವಳದ ತಂತ್ರಿಗಳಾದ ಬ್ರಹ್ಮಶ್ರೀ ರಾಧಾಕೃಷ್ಣ ತಂತ್ರಿ ಎಡಪದವು ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಅರ್ಚಕರಾದ ರಾಮಚಂದ್ರ ಭಟ್, ಪದ್ಮನಾಭ ಭಟ್, ಶ್ರೀನಿವಾಸ ಆಚಾರ್ಯ, ಪದ್ಮನಾಭ ಆಚಾರ್ಯ, ಹರಿ ಭಟ್, ಅನಂತ ಭಟ್ ಉಪಸ್ಥಿತರಿದ್ದರು.

ದೇವಳದ ಆಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ, ಮೊಕ್ತೇಸರರುಗಳಾದ ಶೇಷಗಿರಿ ರಾವ್, ಗಣೇಶ್ ಸಿ.ಆಚಾರ್ಯ, ಶಂಕರ ಶೆಟ್ಟಿ, ಸುರೇಶ್ ದೇವಾಡಿಗ, ರವೀಂದ್ರ ಕೋಟ್ಯಾನ್, ಪಾಂಡುರಂಗ ಕರ್ಕೇರ, ಜಯಂತ್ ಪುತ್ರನ್, ಇಂದಿರೇಶ್ ಸಾಲ್ಯಾನ್, ಸಂಜೀವ ಟಿ., ಹರೀಶ್ ಶೆಣೈ, ಜಯಂತಿ ಆಚಾರ್ಯ, ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಎಚ್.ಎಸ್.ರಘುಪತಿ ರಾವ್, ಉಪಾಧ್ಯಕ್ಷರಾದ ಅರುಣ್ ಶೆಟ್ಟಿ, ಜಿನರಾಜ ಬಂಗೇರ, ಸುಧಾಕರ ಕರ್ಕೇರ, ಲೋಕೇಶ್ ಅಮೀನ್, ಹರೀಶ್ ದೇವಾಡಿಗ, ರಾಜೇಶ್ ಆಚಾರ್ಯ, ಕಾರ್ಯದರ್ಶಿ ದಿವಾಕರ ಹೆಜ್ಮಾಡಿ, ಶರಣ್ ಕುಮಾರ್ ಮಟ್ಟು, ಪರಮೇಶ್ವರ ಹೆಜ್ಮಾಡಿ, ರಮೇಶ್ ಭಟ್, ಪ್ರಬೋದ್‍ಚಂದ್ರ ಹೆಜ್ಮಾಡಿ, ಎಚ್.ರವಿ ಕುಂದರ್, ಸುಧೀರ್ ಕರ್ಕೇರ, ಹಿರಿಯರಾದ ನಾರಾಯಣ ಮೆಂಡನ್, ಸದಾಶಿವ ಕೋಟ್ಯಾನ್, ಲೋಕನಾಥ ಗುರಿಕಾರ ಮತ್ತಿತರರು ಉಪಸ್ಥಿತರಿದ್ದರು.
ಫೋಟೋ:18ಎಚ್‍ಕೆ2