ಹೆಜಮಾಡಿ ಕೋಡಿ ಕ್ರಿಕೆಟರ್ಸ್ ವತಿಯಿಂದ ರೂ. 50,000 ಧನಸಹಾಯ

ಪಡುಬಿದ್ರಿ ಸಮೀಪದ ಹೆಜಮಾಡಿ ಕೋಡಿ ಕ್ರಿಕೆಟರ್ಸ್ ವತಿಯಿಂದ ಹೆಜಮಾಡಿ ಕೋಡಿ ನಿವಾಸಿ ವಸಂತಿ ಎಮ್.ಕುಂದರ್‍ರವರ ಚಿಕಿತ್ಸೆಗಾಗಿ ದಾನಿಗಳಿಂದ ಸಂಗ್ರಹಿಸಿದ ರೂ. 50,000 ಧನಸಹಾಯವನ್ನು ಅವರ ಮನೆಗೆ ತೆರಳಿ ನೀಡಲಾಯಿತು. ಈ ಸಂದರ್ಭ ಕೋಡಿ ಕ್ರಿಕೆಟರ್ಸ್ ಸಂಚಾಲಕ ಸತೀಶ್ ಕೋಟ್ಯಾನ್, ಅಧ್ಯಕ್ಷ ಸೀತಾರಾಮ ಬಂಗೇರ, ಭರತ್ ಪುತ್ರನ್, ಪುತ್ರನ್ ಕಿರಣ್ ಮತ್ತಿತರರು ಉಪಸ್ಥಿತರಿದ್ದರು. ಕೋಡಿ ಕ್ರಿಕೆಟರ್ಸ್ ವತಿಯಿಂದ ಈ ವರ್ಷ ದಾಖಲೆ ಮೊತ್ತವಾದ 3 ಲಕ್ಷ ರೂ. ಗಳಷ್ಟು ಬಡವರ ವೈದ್ಯಕೀಯ ವೆಚ್ಚಕ್ಕಾಗಿ ನೀಡಲಾಗಿದೆ.