ಹೆಜಮಾಡಿ ಅಮವಾಸ್ಯೆಕರಿಯ ಬಳಿ ಸೂರ್ಯಗ್ರಹಣದ ಬಳಿಕ ಸಮುದ್ರ ಸ್ನಾನ

ಪಡುಬಿದ್ರಿ: ವರ್ಷಂಪ್ರತಿ ಲಕ್ಷಾಂತರ ಜನರು ಎಳ್ಳಮವಾಸ್ಯೆಯಂದು ಸಮುದ್ರ ಸ್ನಾನಗೈಯುವ ಹೆಜಮಾಡಿಯ ಎಳ್ಳಮವಾಸ್ಯೆ ಕರಿಯ ಬಳಿ ಸಹಸ್ರಾರು ಭಕ್ತರು ಸೂರ್ಯಗ್ರಹಣದ ಬಳಿಕ 11 ಗಂಟೆ ನಂತರ ಪವಿತ್ರ ಸಮುದ್ರ ಸ್ನಾನಗೈದರು.

ಮುಂಜಾನೆ ವಿರಳ ಮಂದಿ ದೂರದೂರುಗಳಂದ ಆಗಮಿಸಿ ಸಮುದ್ರ ಸ್ನಾನಗೈದಿದ್ದು, ಸೂರ್ಯಗ್ರಹಣದ ಸಂದರ್ಭ ಯಾರೊಬ್ಬರೂ ಸಮುದ್ರಕ್ಕಿಳಿಯಲಿಲ್ಲ. ಸಮಯ 11 ಗಂಟೆಯಾಗುತ್ತಿದ್ದಂತೆ ದೂರದೂರುಗಳಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಪವಿತ್ರ ಸಮುದ್ರ ಸ್ನಾನಗೈದರು. ಸೂರ್ಯಗ್ರಹದ ಸಂದರ್ಭ ಅಲ್ಲಿಗಾಗಮಿಸಿದ ವ್ಯಾಪಾರಿಗಳಿಗೆ ನಯಾಪೈಸೆಯ ವ್ಯವಹಾರ ನಡೆಯಲಿಲ್ಲ.

ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಯಾವುದೇ ಪಿಂಡ ಪ್ರದಾನ ಇತ್ಯಾದಿ ಧಾರ್ಮಿಕ ಕಾರ್ಯಗಳು ನಡೆಯಲಿಲ್ಲ.