ಹೆಜಮಾಡಿಯ ಉಭಯ ಜಿಲ್ಲೆಗಳ ತಪಾಸಣಾ ಕೇಂದ್ರದ ಉಡುಪಿ ಭಾಗದಲ್ಲಿ ನಿತ್ಯವೂ ಸಾನಿಟೈಸೇಶನ್

ಪಡುಬಿದ್ರಿ ಸಮೀಪದ ಹೆಜಮಾಡಿಯ ಉಭಯ ಜಿಲ್ಲೆಗಳ ತಪಾಸಣಾ ಕೇಂದ್ರದ ಉಡುಪಿ ಭಾಗದಲ್ಲಿ ನಿತ್ಯವೂ ಸಾನಿಟೈಸೇಶನ್ ಮಾಡಲಾಗುತ್ತಿದ್ದು ಸ್ವಚ್ಛತಾ ಕಾರ್ಮಿಕರು ಇದನ್ನು ನಿರ್ವಹಿಸುತ್ತಿದ್ದಾರೆ. ಶುಕ್ರವಾರದಂದು ಇವರಿಗೆ ಹೆಚ್ಚಿನ ಕೆಲಸದ ಒತ್ತಡವಿದ್ದುದರಿಂದ ಸ್ವತಹಾ ಹೆಜಮಾಡಿ ಗ್ರಾ. ಪಂ. ಉಪಾಧ್ಯಕ್ಷ ಸುಧಾಕರ ಕರ್ಕೇರ ಅವರೇ ಚೆಕ್‍ಪೆÇೀಸ್ಟ್‍ನ ಸ್ವಚ್ಛತಾ ಕಾರ್ಯವನ್ನು ಸಾನಿಟೈಸೇಶನ್ ನಿರ್ವಹಿಸುವ ಮೂಲಕ ಗೈದು ಮೆಚ್ಚುಗೆಗೆ ಪಾತ್ರರಾದರು.