ಹರಿಭಕ್ತಿಗಿಂತ ಗುರು ಭಕ್ತಿ ಮುಖ್ಯವಾದುದು-ಪುತ್ತಿಗೆ ಸುಗುಣೇಂದ್ರ ಶ್ರೀ

ಪಡುಬಿದ್ರಿ: ಭಾರತೀಯ ಸಂಸ್ಕøತಿಯಲ್ಲಿ ಗುರುವಿಗೆ ವಿಶೇಷ ಗೌರವದ ಸ್ಥಾನವಿದೆ. ದೇವರ ಭಕ್ತಿ ದೃಢವಾಗುವುದು ಗುರು ಭಕ್ತಿಯ ಮೂಲಕ. ಹರಿಭಕ್ತಿಗಿಂತ ಗುರುಭಕ್ತಿಯೇ ಮುಖ್ಯವಾದುದು ಎಂಉ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.

ಪಡುಬಿದ್ರಿಯ ಕಂಚಿನಡ್ಕದಲ್ಲಿ ಸುಮಾರು ಒಂದು ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಲಿರುವ ಶ್ರೀ ಗುರು ರಾಘವೇಂದ್ರ ಮಂದಿರದ ಶಿಲಾನ್ಯಾಸ ನೆರವೇರಿಸಿದ ಬಳಿಕ ಅವರು ಧಾರ್ಮಿಕ ಸಭೆಯಲ್ಲಿ ಆಶೀರ್ವಚಿಸಿದರು.

ಭಾರತೀಯ ಸಂಸ್ಕøತಿಯಲ್ಲಿ ಶಿಕ್ಷೆಗಿಂತ ಭಜನೆ ಪ್ರಭಾವಿಯಾದುದು. ಸರಕಾರವು ಧಾರ್ಮಿಕ ದತ್ತಿ ಇಲಾಖೆಯಂತೆ ಪ್ರತ್ಯೇಕ ಭಜನಾ ಸಚಿವಾಲಯವನ್ನು ಆರಂಭಿಸಬೇಕು. ಈ ಮೂಲಕ ಭಜನೆಗೆ ವಿಶೇಷ ಒತ್ತು ನೀಡಬೇಕೆಂದು ಸಲಹೆ ನೀಡಿದ ಶ್ರೀಗಳು, ಇತ್ತೀಚಿನ ದಿನಗಳಲ್ಲಿ ದೇವಳಗಳಲ್ಲಿ ಅರ್ಚಕರ ಕೊರತೆ ಎದ್ದು ಕಾಣುತ್ತಿದೆ. ಮಂದಿರ, ದೇವಳ ನಿರ್ಮಿಸುವವರು ಅರ್ಚಕರನ್ನು ತಯಾರು ಮಾಡುವ ವಿದ್ಯಾಪೀಠಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿ, ಪಡುಬಿದ್ರಿಯ ಗುರು ರಾಘವೇಂದ್ರ ಮಂದಿರ ಶೀಘ್ರ ನಿರ್ಮಾಣವಾಗಿ ಸಮಾಜಕ್ಕೆ ದಾರಿದೀಪವಾಗಲಿ ಎಂದು ಶುಭ ಹಾರೈಸಿದರು.

ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿ, ಸರ್ವರ ಸಹಕಾರದೊಂದಿಗೆ ಮಂದಿರ ಶೀಘ್ರ ನಿರ್ಮಾಣವಾಗಲಿ ಎಂದು ಶುಭ ಹಾರೈಸಿ, ಶಾಸಕನಾಗಿ ಸರಕಾರದ ವತಿಯಿಂದ ಮಂದಿರ ನಿರ್ಮಾಣಕ್ಕೆ 10 ಲಕ್ಷ ರೂ. ನೀಡುವುದಾಗಿ ಘೋಷಿಸಿದರು.

ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ರೂ.8 ಲಕ್ಷ, ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರಿ ರೂ.5 ಲಕ್ಷ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ರೂ.3 ಲಕ್ಷ, ಧಾರ್ಮಿಕ ದತ್ತಿ ಪರಿಷತ್ ಮೂಲಕ ರೂ.3 ಲಕ್ಷ ಮತ್ತು ಮತ್ತಷ್ಟು ಸಹಕಾರದ ಭರವಸೆಗಳ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಲಾಯಿತು.
ಇದೇ ಸಂದರ್ಭ ಶ್ರೀಗಳು ಮಂದಿರದ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ನಾಗದೇವರ ಆವರ್ಕ ಆರೂಢದಲ್ಲಿ ನಾಗಾಲಯವನ್ನು ಲೋಕಾರ್ಪಣೆಗೊಳಿಸಿದರು.

ಬಳಿಕ ಆಗಮ ಪಂಡಿತ ಹಾಗೂ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ವೇದಮೂರ್ತಿ ಕುತ್ಯಾರು ಕೇಂಜ ಶ್ರೀಧರ ತಂತ್ರಿಗಳ ನೇತೃತ್ವದಲ್ಲಿ ಬಿಂಬ ಪ್ರತಿಷ್ಠೆ, ಸಾನಿಧ್ಯ ಕಲಶೋತ್ಸವ, ಆಶ್ಲೇಷಾ ಬಲಿ ಸಹಿತ ವಿವಿಧ ಧಾರ್ಮಿಕ ವಿಧಿಗಳು ನಡೆಯಿತು.

ನಂದಿಕೂರು ಶ್ರೀ ದುರ್ಗಾಪರಮೇಶ್ವರೀ ದೇವಳದ ಆಡಳಿತ ಮೊಕ್ತೇಸರ ವೇದಮೂರ್ತಿ ಮಧ್ವರಾಯ ಭಟ್, ವೇದಮೂರ್ತಿ ಕೇಂಜ ಶ್ರೀಧರ ತಂತ್ರಿ, ತಾಪಂ ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ, ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್, ಉಪಾಧ್ಯಕ್ಷ ವೈ.ಸುಕುಮಾರ್, ಮಂದಿರದ ಆಡಳಿತ ಮಂಡಳಿಯ ಅಧ್ಯಕ್ಷ ಎರ್ಮಾಳು ಶಶಿಧರ್ ಕೆ.ಶೆಟ್ಟಿ, ಕಾರ್ಯದರ್ಶಿ ಡಾ.ಎನ್.ಟಿ.ಅಂಚನ್, ಕೋಶಾಧಿಕಾರಿ ವಿಶುಕುಮಾರ್ ಶೆಟ್ಟಿಬಾಲ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುಧಾಕರ ಶೆಟ್ಟಿ ಹೆಜಮಾಡಿ, ಕಾರ್ಯದರ್ಶಿ ವಿಷ್ಣುಮೂರ್ತಿ ಭಟ್ ಪಾದೆಬೆಟ್ಟು, ಜತೆ ಕಾರ್ಯದರ್ಶಿ ಶ್ರೀನಿವಾಸ ಶರ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುಮಾರು ಒಂದು ಕೋಟಿ ರೂ.ವೆಚ್ಚದಲ್ಲಿ ಶ್ರೀ ರಾಘವೇಂದ್ರ ಸಮುದಾಯ ಭವನ, ಪ್ರಾಂಗಣ, ಪೂಜಾ ಮಂದಿರ, ಸ್ವಾಗತ ಗೋಪುರ, ನಾಗಾಲಯ, ಸಭಾಂಗಣ, ಆವರಣ ಗೋಡೆ ಹಾಗೂ ತೀರ್ಥ ಬಾವಿ ನಿರ್ಮಾಣ ಕಾರ್ಯ ನಡೆಯಲಿದೆ. ಗುತ್ತಿಗೆದಾರರಾಗಿ ಐತಪ್ಪ ಪೂಜಾರಿ, ವಿನ್ಯಾಸಗಾರರಾಗಿ ಕುತ್ಯಾರು ಪ್ರಸಾದ್ ಶೆಟ್ಟಿ, ಶಿಲ್ಪಿಯಾಗಿ ಮುರುಗನ್ ಕಾರ್ಯನಿರ್ವಹಿಸಲಿದ್ದಾರೆ.

ಪಿ.ರವೀಂದ್ರನಾಥ ಜಿ.ಹೆಗ್ಡೆ, ಬೆಳಪು ಡಾ.ದೇವಿಪ್ರಸಾದ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ನವೀನ್‍ಚಂದ್ರ ಜೆ.ಶೆಟ್ಟಿ, ನವೀನ್‍ಚಂದ್ರ ಸುವರ್ಣ ಅಡ್ವೆ, ಮಿಥುನ್ ಆರ್.ಹೆಗ್ಡೆ, ಪ್ರಕಾಶ್ ಶೆಟ್ಟಿ ಪಡುಹಿತ್ಲು, ಲೋಕೇಶ್ ಕಂಚಿನಡ್ಕ, ಗಣಪತಿ ಕಾಮತ್, ಸದಾಶಿವ ಪಡುಬಿದ್ರಿ, ಶ್ರೀನಾಥ್ ಹೆಗ್ಡೆ, ಲಕ್ಷ್ಮಣ ಅಮೀನ್, ಪ್ರಭಾಕರ ಶೆಟ್ಟಿ, ನವೀನ್ ಎನ್.ಶೆಟ್ಟಿ, ನವೀನ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

ವಿಶುಕುಮಾರ್ ಶೆಟ್ಟಿಬಾಲ್ ಸ್ವಾಗತಿಸಿದರು. ಜಯ ಎಸ್.ಶೆಟ್ಟಿ ಪದ್ರ ಕಾರ್ಯಕ್ರಮ ನಿರ್ವಹಿಸಿದರು. ನಾಗರಾಜ ಭಟ್ ವಂದಿಸಿದರು.