ಸುಜ್ಲಾನ್ ಫೌಂಡೇಶನ್ ವತಿಯಿಂದ ಅವರಾಲು, ನಡ್ಸಾಲು ಮತ್ತು ನಂದಿಕೂರು ಹಾಲುತ್ಪಾದಕರ ಸಂಘಗಳ ಸದಸ್ಯರಿಗೆ ಆಹಾರ ಕಿಟ್‍

ಪಡುಬಿದ್ರಿಯ ಸುಜ್ಲಾನ್ ಫೌಂಡೇಶನ್ ವತಿಯಿಂದ ಅವರಾಲು, ನಡ್ಸಾಲು ಮತ್ತು ನಂದಿಕೂರು ಹಾಲುತ್ಪಾದಕರ ಸಂಘಗಳ ಸದಸ್ಯರಿಗೆ ಗುರುವಾರ ಆಹಾರ ಕಿಟ್‍ಗಳನ್ನು ಶಾಸಕ ಲಾಲಾಜಿ ಆರ್. ಮೆಂಡನ್ ವಿತರಿಸಿದರು. ಈ ಸಂದರ್ಭ ಕಾಪು ತಹಶೀಲ್ದಾರ್ ಮೊಹಮ್ಮದ್ ಇಸಾಕ್, ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್. ಪಲಿಮಾರು ಗ್ರಾಪಂ ಅಧ್ಯಕ್ಷ ಜಿತೇಂದ್ರ ಫುರ್ಟಾಡೋ, ಉದ್ಯಮಿಗಳಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ನವೀನ್‍ಚಂದ್ರ ಜೆ.ಶೆಟ್ಟಿ ಮತ್ತು ಕರುಣಾಕರ ಶೆಟ್ಟಿ, ಆಸ್ಪಿನ್ ಇಂಡಿಯಾ ಪಡುಬಿದ್ರಿ ಪ್ರೈ.ಲಿ. ಜನರಲ್ ಮ್ಯಾನೇಜರ್ ಅಶೋಕ್ ಶೆಟ್ಟಿ, ಅಡ್ಮಿನಿಸ್ಟ್ರೇಟಿವ್ ಮ್ಯಾನೇಜರ್ ಜಿನರಾಜ್ ಎರ್ಮಾಳ್, ಎಚ್.ಆರ್. ಅರುಣ್ ಕುಮಾರ್, ಸಿಎಸ್‍ಆರ್ ಪ್ರತಿನಿಧಿ ಪ್ರಸಾದ್ ಕುಮಾರ್ ಉಪಸ್ಥಿತರಿದ್ದರು. ಈ ಸಂದರ್ಭ ಸಂಘಗಳ ಸದಸ್ಯರಿಗಾಗಿ 150ಕ್ಕೂ ಅಧಿಕ ಕಿಟ್‍ಗಳನ್ನು ವಿತರಿಸಲಾಯಿತು.