ಸಾಮಥ್ರ್ಯಕ್ಕೆ ಅನುಗುಣವಾಗಿ ಮುಂದುವರಿಯಬೇಕು-ಡಾ.ಎಚ್.ಶಾಂತಾರಾಮ್

ಮೂಲ್ಕಿ: ಇಂದಿನ ವಿದ್ಯಾರ್ಥಿಗಳಲ್ಲಿ ಉತ್ತಮ ಪ್ರತಿಭೆ ಹಾಗೂ ಸಾಮಥ್ರ್ಯವಿದ್ದು ವಿದ್ಯಾರ್ಥಿಗಳು ತಮ್ಮ ಪ್ರತಿಭೆಗೆ ಸೂಕ್ತ ವಿಷಯಗಳನ್ನು ತಿಳಿದು ಮುಂದುವರಿಯಬೇಕು ಎಂದು ಮಣಿಪಾಲ ಅಕಾಡೆಮಿಯ ಆಡಳಿತಾಧಿಕಾರಿ ಡಾ| ಎಚ್.ಶಾಂತಾರಾಂ ಹೇಳಿದರು.

ಮೂಲ್ಕಿ ವಿಜಯಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಾಚೀನ ಗುರುಕುಲ ಪದ್ದತಿಯ ಸಮಗ್ರ ಪ್ರಾಪಂಚಿಕ ಜ್ಞಾನಯುಕ್ತ ವಿಶಿಷ್ಟ ಬೋಧನಾ ಕ್ರಮವು ವಿದ್ಯಾರ್ಥಿಗಳ ಜೀವನದಲ್ಲಿ ಅಮೂಲಾಗ್ರ ಬದಲಾವಣೆಯನ್ನು ತರುತ್ತದೆ ಎಂದವರು ಹೇಳಿದರು.  ಮುಖ್ಯ ಅತಿಥಿ ಶಾರದಾ ಕಾಲೇಜಿನ ಪ್ರಾಂಶುಪಾಲ ಡಾ| ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್‍ರವರು, ಮೂಲ್ಕಿಯು ಶಿಕ್ಷಣ ಮತ್ತು ಸಂಸ್ಕೃತಿಗೆ ಹೆಸರುವಾಸಿಯಾದ ಸ್ಥಳ.ಪ್ರಾಚೀನ ಶಿಕ್ಷಣ ಕೇಂದ್ರವಾದಂತಹ ನಳಂದ ಮತ್ತು ತಕ್ಷ ಶಿಲೆಯು ಹೇಗೆ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದವೋ ಅದೇರೀತಿ ವಿಜಯಾ ಕಾಲೇಜು ಮೌಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತದೆ ಎಂದು ಹೇಳಿದರು. ನಾರಾಯಣ ಗುರು ಪದವಿಪೂರ್ವ ಕಾಲೇಜು ಉಪನ್ಯಾಸಕರಾದ ಶಕಿಲರಾಜ್, ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವುದರಿಂದ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದರು.

ಪದವಿ ಕಾಲೇಜು ಪ್ರಾಂಶುಪಾಲ ಡಾ| ಕೆ ನಾರಾಯಣ ಪೂಜಾರಿಯವರು ಶುಭ ಹಾರೈಸಿ ಮಾತನಾಡುತ್ತ ಉನ್ನತ ಶಿಕ್ಷಣದ ಸೀಮಾರೇಖೆ ಇಂದು ವಿಸ್ತೃತವಾಗುತ್ತಿದ್ದು, ವಿದ್ಯಾರ್ಥಿಗಳ ಅಭಿರುಚಿ, ಕೌಶಲ್ಯತೆಗೆ ಸರಿಹೊಂದುವ ಶಿಕ್ಷಣ, ಉದ್ಯೋಗವನ್ನು ಆಯ್ದುಕೊಳ್ಳಲು ಸೂಕ್ತ ತರಬೇತಿಯನ್ನು ಕಾಲೇಜಿನಲ್ಲಿ ನೀಡಲಾಗುತ್ತಿದೆ ಎಂದರು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪಮೀದಾ ಬೇಗಂ ಕಾಲೇಜಿನ ವಾರ್ಷಿಕ ವರದಿಯನ್ನು ಮಂಡಿಸಿದರು.
ಆಡಳಿತ ಮಂಡಳಿಯ ಸದಸ್ಯ ಹೆಚ್.ರಾಮದಾಸ್ ಕಾಮತ್ ಹಾಗೂ ವಿದ್ಯಾರ್ಥಿ ನಾಯಕರಾದ ಕಿರಣ್, ಉನ್ನತಿ ಮತ್ತು ದೀಪ್ತಿ ವೇದಿಕೆಯಲ್ಲಿದ್ದರು.

ಶ್ರೀಪ್ರಿಯಾ ಸ್ವಾಗತಿಸಿದರು.ಶ್ರೀಲಕ್ಷ್ಮಿಯವರು ಕಾರ್ಯಕ್ರಮ ನಿರ್ವಹಿಸಿದರು.ಲತಾ ಡಿ.ಇ.ಮತ್ತು ಜೀವನ್ ಅತಿಥಿಗಳನ್ನು ಪರಿಚಯಿಸಿದರು. ಸೌಮ್ಯಾ ವಂದಿಸಿದರು.