ಸರ್ವ ಸಮುದಾಯದ ಒಗ್ಗಟ್ಟಿನ ಧಾರ್ಮಿಕ ಆಚರಣೆ ಇಂದಿನ ಕಾಲಘಟ್ಟದಲ್ಲಿ ಅಗತ್ಯ-ಕಿಶೋರ್ ಆಳ್ವ

ಸರ್ವ ಸಮುದಾಯವರು ಒಟ್ಟಾಗಿ ಧಾರ್ಮಿಕ ಆಚರಣೆಗಳನ್ನು ನಡೆಸುವುದು ಇಂದಿನ ಸಂಕೀರ್ಣ ಕಾಲಘಟ್ಟದಲ್ಲಿ ಅತೀ ಅಗತ್ಯವಾಗಿದೆ.ಈ ನಿಟ್ಟಿನಲ್ಲಿ ಕಾಲನಿ ಜನರನ್ನು ಒಗ್ಗೂಡಿಸಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಔಚಿತ್ಯಪೂರ್ಣ ಎಂದು ಅದಾನಿ-ಯುಪಿಸಿಎಲ್ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಹೇಳಿದರು.

ಸೆ.9 ಭಾನುವಾರ ಸಂಜೆ ಪಡುಬಿದ್ರಿ ಅಬ್ಬೇಡಿಯ ಸುಜ್ಲಾನ್ ಪುನರ್ವಸತಿ ಕಾಲನಿಯ ಸಭಾಂಗಣದಲ್ಲಿ ಎಸ್‍ಆರ್‍ಸಿ ಸ್ಪೋಟ್ರ್ಸ್ ಮತ್ತು ಕಲ್ಚರಲ್ ಕ್ಲಬ್ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮುದ್ದು ಕೃಷ್ಣ ಸ್ಪರ್ಧೆ,ಛದ್ಮವೇಷ ಹಾಗೂ ವಿವಿಧ ಆಟೋಟ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ವಿಶ್ವ ಭಾತೃತ್ವದ ಅಗತ್ಯವಿದ್ದು,ಪೂರಕ ಕಾರ್ಯಕ್ರಮಗಳು ನಿರಂತರ ನಡೆಯಬೇಕು.ಮುದ್ದು ಮಕ್ಕಳಲ್ಲಿ ದೇವರನ್ನು ಕಾಣುವ ಕಾರ್ಯಕ್ರಮ ಶ್ಲಾಘನೀಯವಾದುದು.ಇಂತಹ ಕಾರ್ಯಕ್ರಮಗಳಿಗೆ ಅದಾನಿ-ಯುಪಿಸಿಎಲ್ ಸದಾ ಬೆಂಬಲ ನೀಡುತ್ತದೆ ಎಂದವರು ಹೇಳಿದರು.

ಸನ್ಮಾನ: ಪಿಯಿಸಿಯಲ್ಲಿ ಈ ಬಾ

ರಿ ಶೇ.97 ಅಂಕ ಗಳಿಸಿದ ಸಪ್ತಾ ಎಸ್.ಶೆಟ್ಟಿ ಮತ್ತು ಖ್ಯಾತ ಚಿತ್ರ ಕಲಾವಿದ ಗಿರೀಶ್ ಸುಜ್ಲಾನ್ ಕಾಲನಿಯವರನ್ನು ಸಂಘಟಕರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಎಸ್‍ಆರ್‍ಸಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಉಮಾನಾಥ ಕೆಆರ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.ತಾಪಂ ಸದಸ್ಯೆ ನೀತಾ ಗುರುರಾಜ್, ಎಸ್‍ಆರ್‍ಸಿ ಗೌರವಾಧ್ಯಕ್ಷ ಮೊೈದಿನ್ ಸಾಹೇಬ್, ಗ್ರಾಪಂ ಸದಸ್ಯರಾದ ಬುಡಾನ್ ಸಾಹೇಬ್,ಸಂಜೀವಿ ಪೂಜಾರ್ತಿ ಮತ್ತು ಸುಮಿತ್ರಾ ಆಚಾರ್ಯ ಮುಖ್ಯ ಅತಿಥಿಗಳಾಗಿದ್ದರು.

ಗಣೇರ್ಶ ಕಾರ್ಯಕ್ರಮ ನಿರ್ವಹಿಸಿ ಕಾರ್ಯದರ್ಶಿ ಚೇತನ್ ವಂದಿಸಿದರು.ಬಳಿಕ ಮುದ್ದು ಕೃಷ್ಣ ಸ್ಪರ್ಧೆ,ಛದ್ಮವೇಷ,ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.