ಸಮುದ್ರ ಪೂಜೆ-2018

ಹೆಜಮಾಡಿ ಅಮವಾಸ್ಯೆಕರಿಯ

ಪಡುಬಿದ್ರಿ ಸಮೀಪದ ಹೆಜಮಾಡಿ ಏಳೂರು ಮೊಗವೀರ ಸಭಾ ವತಿಯಿಂದ ಭಾನುವಾರ ಹೆಜಮಾಡಿಯ ಅಮವಾಸ್ಯೆಕರಿಯ ಬಳಿ ಮತ್ಸ್ಯ ಸಮೃದ್ಧಿಗಾಗಿ ಪ್ರಾರ್ಥಿಸಿ ಸಮುದ್ರಕ್ಕೆ ಹಾಲೆರೆಯುವ ಮೂಲಕ ಸಮುದ್ರ ಪೂಜೆ ನೆರವೇರಿಸಲಾಯಿತು

ಏಳೂರು ಮೊಗವೀರ ಸಭಾ ಅಧ್ಯಕ್ಷ ಸದಾಶಿವ ಕೋಟ್ಯಾನ್,ಹೆಜಮಾಡಿ ಗ್ರಾಪಂ ಉಪಾಧ್ಯಕ್ಷ ಸುಧಾಕರ ಕರ್ಕೇರ,ಗುಂಡಿ ಮೊಗವೀರ ಸಭಾ ಅಧ್ಯಕ್ಷ ಲೋಕನಾಥ ಗುರಿಕಾರ,ಪಲಿಮಾರು ಮೊಗವೀರ ಸಭಾ ಅಧ್ಯಕ್ಷ ಸುಧಾಕರ ಕೋಟ್ಯಾನ್,ಹೆಜಮಾಡಿ ಮೊಗವೀರ ಸಭಾ ಅಧ್ಯಕ್ಷ ರವಿ ಕುಂದರ್,ಮಟ್ಟು ಮೊಗವೀರ ಸಭಾದ ನಾರಾಯಣ ಮೆಂಡನ್,ಕನ್ನಂಗಾರು ಮೊಗವೀರ ಸಭಾ ಅಧ್ಯಕ್ಷ ಕುಮಾರ್ ಕುಂದರ್,ಸಣ್ಣಗುಂಡಿ ಮೊಗವೀರ ಸಭಾ ಅಧ್ಯಕ್ಷ ವಿಠಲ ಪುತ್ರನ್,ಆಚೆಮಟ್ಟು ಮೊಗವೀರ ಸಭಾ ಅಧ್ಯಕ್ಷ ಗಣೇಶ್ ಕೋಟ್ಯಾನ್,ರಮೇಶ್ ಪುತ್ರನ್,ದಿವಾಕರ ಹೆಜ್ಮಾಡಿ,ಪ್ರಾಣೇಶ್ ಹೆಜ್ಮಾಡಿ,ವಿಜಯ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.

 

ಹೆಜಮಾಡಿಕೋಡಿ ಯಾರ್ಡ್

ಮೂಲ್ಕಿ ನಾಲ್ಕುಪಟ್ಣ ಮೊಗವೀರ ಸಭಾ ವತಿಯಿಂದ ಮತ್ಸ್ಯ ಸಮೃದ್ಧಿಗಾಗಿ ಪ್ರಾರ್ಥಿಸಿ ಹೆಜಮಾಡಿಕೋಡಿ ಯಾರ್ಡ್ ಬಳಿ ಭಾನುವಾರ ಸಮುದ್ರಕ್ಕೆ ಹಾಲೆರೆಯುವ ಮೂಲಕ ಸಮುದ್ರಪೂಜೆ ನೆರವೇರಿಸಲಾಯಿತು.

ಮೂಲ್ಕಿ ನಾಲ್ಕುಪಟ್ಣ ಮೊಗವೀರ ಸಭಾ ಅಧ್ಯಕ್ಷ ಗುರುವಪ್ಪ ಕೋಟ್ಯಾನ್,ಎನ್.ಡಿ.ಬಂಗೇರ,ಏಕನಾಥ ಕರ್ಕೇರ,ಒಡೆಯರಬೆಟ್ಟು ಮೊಗವೀರ ಸಭಾ ಅಧ್ಯಕ್ಷ ಸುಜಿತ್ ಎಸ್.ಸಾಲ್ಯಾನ್,ನೀರಜಾಕ್ಷಿ ಅಗರ್‍ವಾಲ್,ಉಮೇಶ್ ಪೂಜಾರಿ,ಗಿರೀಶ್ ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು.