ಸಮುದ್ರಕ್ಕೆ ಮೀನು ಹಿಡಿಯಲು ಹೋದ ವ್ಯಕ್ತಿ ಸಾವು

ಸಮುದ್ರದಲ್ಲಿ ಬಲೆ ಹಾಕಿ ಮೀನು ಹಿಡಿಯಲು ಹೋದ ವ್ಯಕ್ತಿಯೊಬ್ಬರು ಸಮುದ್ರದಲೆಗೆ ಸಿಲುಕಿ ಮೃತಪಟ್ಟ ಘಟನೆ ಇಲ್ಲಿನ ಠಾಣಾ ವ್ಯಾಪ್ತಿಯ ಉಚ್ಚಿಲ ಬಳಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.

ಉಚ್ಚಿಲ ನಿವಾಸಿ ರಮೇಶ್ ಜಿ.ಕೋಟ್ಯಾನ್ (70) ಮೃತಪಟ್ಟವರು. ರಮೇಶ್‍ರವರು ಮಧ್ಯಾಹ್ನ ಊಟ ಮಾಡಿದ ಬಳಿಕ ಉಚ್ಚಿ ಬಡಾ ಗ್ರಾಮದ ಮಾಡಕಲ್ಲು ಬಳಿ ಮೀನು ಹಿಡಿಯಲು ಬಲೆಯೊಂದಿಗೆ ತೆರಳಿದ್ದರು. ನೀರಿನಲ್ಲಿ ಸುಳಿ ಇದ್ದು, ಸುಳಿಗೆ ಸಿಲುಕಿ ಅವರು ಮೃತಪಟ್ಟಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ. ಮೃತದೇಹವನ್ನು ಸ್ಥಳೀಯರು ದಡಕ್ಕೆ ತಂದಿದ್ದಾರೆ.

ಘಟನಾ ಸ್ಥಳಕ್ಕೆ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಆಗಮಿಸಿ, ಸಂಬಂಧಿಕರಿಗೆ ಸಾಂತ್ವನ ಹೇಳಿದ್ದಾರೆ.

ಬಡತನ ಹಿನ್ನೆಲೆಯ ಮೃತರಿಗೆ ಪುತ್ರಿ ಹಾಗು 2 ಪುತ್ರ ಇದ್ದಾರೆ. ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.