ಸಮಾಜ ಸೇವೆಗೆ ಪ್ರಚಾರದ ಅಗತ್ಯವಿಲ್ಲ-ಹರಿಕೃಷ್ಣ ಪುನರೂರು

ಮೂಲ್ಕಿ: ಸಮಾಜದಲ್ಲಿ ಹಲವಾರು ರೀತಿಯಲ್ಲಿ ಸೇವೆ ಮಾಡಲು ಸಾಧ್ಯವಿದ್ದು ಸಮಸ್ಯೆಯಿರುವಲ್ಲಿ ಸ್ಪಂದಿಸಿ ಬಗೆಹರಿಸುವ ಜೊತೆಗೆ ಸಮಾಜ ಸೇವೆ ಮಾಡಲು ಸಾಧ್ಯವಿದೆ.ಪ್ರಚಾರ ಬಯಸದ ಹಲವಾರು ಮಂದಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂತವರನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.

ಮೂಲ್ಕಿಯ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ಸರ್ಕಾರದ ಆದೇಶದಂತೆ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಜರಗಿದ ಹೊಸ ಅಂಗಣದ ತಿಂಗಳ ಬೆಳಕು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ, ಮೂಲ್ಕಿಯ ಚಿತ್ರಾಪುವಿನ ನಿವಾಸಿ ವಿಠಲ ದೇವಾಡಿಗರನ್ನು ಸನ್ಮಾನಿಸಲಾಯಿತು.
ತೋಕೂರು ತಪೆÇೀವನದ ಎಂಆರ್ ಪೂಂಜ ಐಟಿಐ ನಿವೃತ್ತ ಪ್ರಾಚಾರ್ಯ ವೈ.ಎನ್.ಸಾಲ್ಯಾನ್, ಉದ್ಯಮಿ ವಾಸು ಪೂಜಾರಿ ಚಿತ್ರಾಪು, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಕುಬೆವೂರು, ಹೊಸ ಅಂಗಣದ ಸಂಪಾದಕ ಡಾ.ಹರೀಶ್ಚಂದ್ರ ಪಿ.ಸಾಲ್ಯಾನ್ ಮತ್ತಿತರರಿದ್ದರು.

ಡಾ.ಹರೀಶ್ಚಂದ್ರ ಪಿ.ಸಾಲ್ಯಾನ್ ಸ್ವಾಗತಿಸಿದರು. ವಾಮನ್ ಕೋಟ್ಯಾನ್ ನಡಿಕುದ್ರು ವಂದಿಸಿದರು,. ರವಿಚಂದ್ರ ನಿರೂಪಿಸಿದರು.
ಫೋಟೋ:28ಎಮ್‍ಎಲ್‍ಕೆ1