ಸತತ ನಾಲ್ಕನೇ ಬಾರಿಗೆ ಪಡುಬಿದ್ರಿ ಸಿ.ಎ.ಬ್ಯಾಂಕ್ ಅಧ್ಯಕ್ಷರಾಗಿ ವೈ.ಸುೀರ್ ಕುಮಾರ್ ಅವಿರೋಧ ಆಯ್ಕೆ

ಪಡುಬಿದ್ರಿ: ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಮುಂದಿನ 5 ವರ್ಷಗಳ ಅವಗೆ ಹಾಲಿ ಅಧ್ಯಕ್ಷರಾದ ವೈ. ಸುೀರ್ ಕುಮಾರ್ ಇವರು ಅಧ್ಯಕ್ಷರಾಗಿ ಪುನರಾಯ್ಕೆಗೊಂಡರು.

ಕಳೆದ ಮೂರು ಅವಯಲ್ಲಿ ಪಡುಬಿದ್ರಿ ಸೊಸೈಟಿಯನ್ನು ಜಿಲ್ಲೆಯಲ್ಲಿಯೇ ಅತ್ಯುತ್ತಮ ಸೊಸೈಟಿಯಾಗಿ ಮುನ್ನಡೆಸಿದ ಅವರು ಸಹಜವಾಗಿಯೇ ಸತತ ನಾಲ್ಕನೇ ಬಾರಿಗೆ ಅವಿರೋಧವಾಗಿ ಪುನರಾಯ್ಕೆಗೊಂಡರು.
ಇದೇ ಸಮದರ್ಭ ಸೊಸೈಟಿ ಅಭಿವೃದ್ಧಿಯಲ್ಲಿ ಸಹಕರಿಸಿದ ಗುರುರಾಜ್ ಪೂಜಾರಿಯವರು ಸತತ ಮೂರನೇ ಬಾರಿಗೆ ಉಪಾಧ್ಯಕ್ಷರಾಗಿ ಅವಿರೋಧ ಪುನರಾಯ್ಕೆಗೊಂಡರು.

ಪದಾಕಾರಿಗಳ ಅಯ್ಕೆಗಾಗಿ ಮಂಗಳವಾರ ಸೊಸೈಟಿಯ ಪ್ರಧಾನ ಕಾರ್ಯಲಯದಲ್ಲಿ ನಡೆದ ಪ್ರಕ್ರಿಯೆಯಲ್ಲಿ ಕಾರ್ಕಳ ಸಹಕಾರಿ ಸಂಘಗಳ ಅಭಿವೃದ್ಧಿ ಅಕಾರಿ ಅರುಣ್ ಕುಮಾರ್ ಎಸ್.ವಿ.ಯವರು ರಿಟರ್ನಿಂಗ್ ಅಕಾರಿಯಾಗಿ ಚುನಾವಣಾ ಪ್ರಕ್ರಿಯೆಗಳನ್ನು ನಡೆಸಿದರು.

ಆಯ್ಕೆ ಪ್ರಕ್ರಿಯೆ ಬಳಿಕ ಮಾತನಾಡಿದ ವೈ. ಸುೀರ್ ಕುಮಾರ್, ಮುಂದಿನ 5 ವರ್ಷಗಳ ಅವಗೆ ಸೊಸೈಟಿಯ ವ್ಯಾಪ್ತಿಗೆ ಸೇರಿರುವ ಎಲ್ಲಾ ಗ್ರಾಮದ ಜನರು ಸೊಸೈಟಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವ್ಯವಹರಿಸುವ ಮೂಲಕ ಸೊಸೈಟಿಯು ಜಿಲ್ಲೆಯಲ್ಲಿ ಉತ್ತಮ ಸಂಸ್ಥೆಯಾಗಿ ಬೆಳೆಸುವಲ್ಲಿ ಸಹಕಾರ ಕೋರಿದರು. ಮುಂದಿನ ದಿನಗಳಲ್ಲಿ ನಮ್ಮ ಆಡಳಿತ ಮಂಡಳಿಯು ಈ ಸಂಸ್ಥೆಯ ಬೆಳವಣಿಗೆಯಲ್ಲಿ ಸರ್ವ ರೀತಿಯಲ್ಲಿ ಸಿಬ್ಬಂದಿ ವೃಂದದೊಂದಿಗೆ ಕೈ ಜೋಡಿಸುವುದಾಗಿ ತಿಳಿಸಿದರು. ಹಾಗೂ ಸಹಕಾರಿ ಇಲಾಖೆಯ ಎಲ್ಲಾ ಅಕಾರಿ ವರ್ಗದವರು ತಮಗೆ ಮಾರ್ಗದರ್ಶನ ನೀಡಿ ಸಂಸ್ಥೆಯನ್ನು ಬೆಳೆಸುವಲ್ಲಿ ಸಹಕಾರ ನೀಡಬೇಕೆಂದು ವಿನಂತಿಸಿದರು.

ಈ ಸಂದರ್ಭ ನಿರ್ದೇಶಕರಾದ ರಸೂಲ್ ವೈ. ಜಿ, ಗಿರೀಶ್ ಫಲಿಮಾರ್, ಶಿವರಾಮ ಎನ್. ಶೆಟ್ಟಿ, ವಾಸುದೇವ ದೇವಾಡಿಗ, ರಾಜಾರಾಮ್ ರಾವ್, ಮಾಧವ ಆಚಾರ್ಯ, ಯಶವಂತ್, ಸ್ಟ್ಯಾನಿ ಕ್ವಾಡ್ರಸ್, ಸುಚರಿತಾ ಎಲ್. ಅಮೀನ್, ಕುಸುಮಾ ಎಮ್. ಕರ್ಕೇರ, ಕಾಂಚನಾ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿ ಬಾಲಕೃಷ್ಣ ರಾವ್, ಮುಖ್ಯ ಕಾರ್ಯನಿರ್ವಾಹಣಾಕಾರಿ ನಿಶ್ಮಿತಾ ಪಿ.ಎಚ್., ಸಿಬ್ಬಂದಿ ವೃಂದ ಹಾಗೂ ಸೊಸೈಟಿಯ ಸದಸ್ಯರು ಉಪಸ್ಥಿತರಿದ್ದರು.