ಶ್ರೀ ವನದುರ್ಗಾ ಟ್ರಸ್ಟ್ ವತಿಯಿಂದ ಶಾಸಕ ಲಾಲಾಜಿ ಆರ್ ಮೆಂಡನ್‍ಗೆ ಸನ್ಮಾನ

ಪಡುಬಿದ್ರಿ: ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಕಡೇ ನವರಾತ್ರಿ ಮಹೋತ್ಸವ ಅಂಗವಾಗಿ ಗುರುವಾರ ರಾತ್ರಿ ತಂಬಿಲ ಸೇವೆ ನಡೆಯಿತು.

ಈ ಸಂದರ್ಭ ತಂಬಿಲ ಸೇವೆಯಲ್ಲಿ ಸಪತ್ನೀಕರಾಗಿ ಭಾಗವಹಿಸಿದ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್‍ರವರನ್ನು ಶ್ರೀ ಖಡ್ಗೇಶ್ವರೀ ಜ್ಞಾನಮಂದಿರದಲ್ಲಿ ಶ್ರೀ ವನದುರ್ಗಾ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.

ಜನಸೇವೆಗೈಯಲು ದೇವರ ಪ್ರೇರಣೆ ಅಗತ್ಯವಾಗಿದೆ.ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನವು ಇಡೀ ಲೋಕಕ್ಕೆ ಆಧರಣೀಯ ಕ್ಷೇತ್ರವಾಗಿ ಗುರುತಿಸಿಕೊಂಡಿದ್ದು,ದೇವರ ಪ್ರೇರಣೆಯಂತೆ ಜಾತಿ ಮತ ಬೇಧ ಮರೆತು ಜನರ ಸೇವೆ ಮಾಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭ ಬ್ರಹ್ಮಸ್ಥಾನದ ಪಾತ್ರಿಗಳಾದ ಪಿ.ಜಿ.ನಾರಾಯಣ ರಾವ್ ಮತ್ತು ಪಿ.ಸುರೇಶ್ ರಾವ್, ಅರ್ಚಕರಾದ ಪಿ.ಎಲ್.ರಾಮಕೃಷ್ಣ ಆಚಾರ್ಯ ಮತ್ತು ಗುರುರಾಜ ಆಚಾರ್ಯ,ವನದುರ್ಗಾ ಟ್ರಸ್ಟ್‍ನ ಅಧ್ಯಕ್ಷ ಕೊರ್ನಾಯ ಶ್ರೀಪತಿ ರಾವ್,ಪ್ರಧಾನ ಕಾರ್ಯದರ್ಶಿ ವೈ.ಎನ್,ರಾಮಚಂದ್ರ ರಾವ್,ಕೋಶಾಧಿಕಾರಿ ವೈ.ಸುರೇಶ್ ರಾವ್,ಗುರಿಕಾರ ಕೊರ್ನಾಯ ಪದ್ಮನಾಭ ರಾವ್,ಗುರಿಕಾರ ಶ್ರೀನಿವಾಸ ರಾವ್,ಗುರಿಕಾರ ವಿಠಲ ರಾವ್,ಗುರಿಕಾರ ಮೋಹನ ರಾವ್ ಮತ್ತಿತರರು ಉಪಸ್ಥಿತರಿದ್ದರು.ವೈ.ಎನ್.ರಾಮಚಂದ್ರ ರಾವ್ ಸ್ವಾಗತಿಸಿ ವಂದಿಸಿದರು.