ಮೂಲ್ಕಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ನೂತನ ಅಧ್ಯಕ್ಷರಾಗಿ ಡಾ.ರಾಜಶೇಖರ ಕೋಟ್ಯಾನ್

ಮೂಲ್ಕಿ: ಮೂಲ್ಕಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ನೂತನ ಅಧ್ಯಕ್ಷರಾಗಿ ಡಾ.ರಾಜಶೇಖರ ಕೋಟ್ಯಾನ್ ಸರ್ವಾನುಮತದಿಂದ ಆಯ್ಕೆಯಾದರು.

ಭಾನುವಾರ ಮೂಲ್ಕಿಯ ರಾಷ್ಟ್ರೀಯ ಬಿಲ್ಲವರ ಭವನದಲ್ಲಿ ಮೂಲ್ಕಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಗೌರವಾಧ್ಯಕ್ಷ ಜಯ ಸಿ. ಸುವರ್ಣ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಮಹಾಸಭೆಯಲ್ಲಿ 2019 ಹಾಗೂ 2021ರ ಸಾಲಿನ ಕಾರ್ಯಕಾರಿ ಮಂಡಳಿಯ ನೂತನ ಪದಾಧಿಕಾರಗಳ ಆಯ್ಕೆ ನಡೆಯಿತು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ.ರಾಜೇಶೇಖರ ಕೋಟ್ಯಾನ್ ಮಾತನಾಡಿ, ಇದ್ದವರಿಂದ ಪಡೆದು ಇಲ್ಲದವರಿಗೆ ಹಂಚುವ ಮೂಲಕ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು. ಎಲ್ಲಾ ಕ್ಷೇತ್ರಗಳಲ್ಲೂ ಸಮಾಜ ಪ್ರತಿನಿಧಿಗಳನ್ನು ಬೆಳೆಸೋಣ. ದುರ್ಬಲ ಸಮಾಜವನ್ನು ಬಲಿಷ್ಠರನ್ನಾಗಿ ಮಾಡಲು ಒಮ್ಮನಸ್ಸಿನ ಕಾರ್ಯಕ್ರಮವನ್ನು ರೂಪಿಸೋಣ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಮೂಲ್ಕಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಗೌರವಾಧ್ಯಕ್ಷ ಜಯ ಸಿ. ಸುವರ್ಣ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಲು ಸಮಾಜದ ಸಂಘಟನೆಯನ್ನು ಕಟ್ಟಿಕೊಂಡು ಒಂದಾಗಿ ದುರ್ಬಲ ವರ್ಗದ ಜನರ ಸೇವೆಯನ್ನು ನಿಸ್ವಾರ್ಥವಾಗಿ ಮಾಡೋಣ ಎಂದು ಹೇಳಿದರು.

ಈ ಸಂದರ್ಭ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು.


ದೇಣಿಗೆ ಹಸ್ತಾಂತರ: ಈ ಸಂದರ್ಭದಲ್ಲಿ ಪುತ್ತೂರಿನ ಗೆಜ್ಜೆಗಿರಿ ನಂದನ ಬಿತ್ತಲ್ ಕ್ಷೇತ್ರಕ್ಕೆ ಎನ್.ಟಿ.ಪೂಜಾರಿ ಹಾಗೂ ಹರೀಶ್ ಜಿ. ಅಮೀನ್ ಅವರು ನೀಡಿದ 5 ಲಕ್ಷರೂ. ದೇಣಿಗೆಯನ್ನು ಹಸ್ತಾಂತರಿಸಲಾಯಿತು.

ನಿವೃತ್ತ ಸಹಕಾರಿ ಅಧಿಕಾರಿ ಚಂದ್ರಶೇಖರ ಸುವರ್ಣ ಅವರು ಚುನಾವಣಾಧಿಕಾರಿಯಾಗಿ ಪದಾಧಿಕಾರಿಗಳನ್ನು ಅಯ್ಕೆ ಮಾಡಿದರು.

ಬೆಂಗಳೂರಿನ ವೇದ ಕುಮಾರ್, ಕಟಪಾಡಿ ಕ್ಷೇತ್ರದ ಅಧ್ಯಕ್ಷ ಬಿ.ಎನ್. ಶಂಕರ್ ಪೂಜಾರಿ, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ್ ನಡುಬೈಲು, ಎನ್.ಟಿ.ಪೂಜಾರಿ ಮುಂಬೈ, ಹರೀಶ್ ಜಿ. ಅಮೀನ್ ಮುಂಬೈ, ಶಂಕರ ಸುವರ್ಣ ಮುಂಬೈ, ಹರೀಶ್ಚಂದ್ರ ಅಮೀನ್ ಕಟಪಾಡಿ ಅಭಿನಂದನಾ ಮಾತುಗಳನ್ನಾಡಿದರು.

ವಾರ್ಷಿಕ ಲೆಕ್ಕ ಪತ್ರವನ್ನು ಕೋಶಾಧಿಕಾರಿ ಯೋಗೀಶ್ ಕೋಟ್ಯಾನ್ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ಮೋಹನ್‍ದಾಸ್ ಪಾವೂರು ಭಂಡಾರಮನೆ ಸ್ವಾಗತಿಸಿ, ವರದಿಯನ್ನು ಮಂಡಿಸಿದರು.

ಉಪಾಧ್ಯಕ್ಷ ಪಿತಾಂಬರ ಹೆರಾಜೆ ಬೆಳ್ತಂಗಡಿ, ನೂತನ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಕುಬೆವೂರು, ಸಹ ಕಾರ್ಯದರ್ಶಿಗಳಾದ ಗಣೇಶ್ ಎಲ್. ಪೂಜಾರಿ ಬೈಂದೂರು ಮತ್ತು ಗಂಗಾಧರ ಪೂಜಾರಿ ಬಾಳ-ಚೇಳ್ಯಾರು, ಸಹ ಕೋಶಾಧಿಕಾರಿ ಶಿವಾಜಿ ಸುವರ್ಣ ಉಪಸ್ಥಿತಿತದ್ದರು.

ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಗೌ.ಪ್ರಧಾನ ಕಾರ್ಯದರ್ಶಿ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.