ಮೂಲ್ಕಿ: ಬೀದಿ ಬದಿ ವ್ಯಾಪಾರಿಗಳ ಪಟ್ಟಣ ವ್ಯಾಪಾರ ಸಮಿತಿಗೆ ಅವಿರೋಧ ಆಯ್ಕೆ

ಮೂಲ್ಕಿ:: ರಾಜ್ಯದ ನಗರ ಸ್ಥಳೀಯ ಸಂಸ್ಥೆ ಹಾಗೂ ಬಿಬಿಎಮ್‍ಪಿ ವಲಯಗಳ ಬೀದಿ ವ್ಯಾಪಾರಿಗಳ ಪಟ್ಟಣ ವ್ಯಾಪಾರ ಸಮಿತಿಗೆ ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿಸ್ಪರ್ಧಿಗಳು ಇಲ್ಲದ ಕಾರಣ 6 ಸದಸ್ಯರನ್ನು ಅವಿರೋಧ ಅಯ್ಕೆ ಮಾಡಲಾಗಿದೆ.

ಚುನಾವಣಾಧಿಕಾರಿಯಾಗಿದ್ದ ಮಂಗಳೂರು ಸಹಕಾರ ಸಂಘಗಳ ಉಪ ನಿಬಂಧಕರ ಕಛೇರಿಯ ಅಧೀಕ್ಷಕರಾದ ಸುಮಿತ್ರಾ ಕುಮಾರಿ ಅವಿರೋಧ ಆಯ್ಕೆಯನ್ನು ಘೋಷಿಸಿದ್ದಾರೆ.
ಡಿಸೆಂಬರ್ 21 ರಂದು ಸಮಿತಿಗೆ ಚುನಾವಣೆ ನಡೆಯಬೇಕಿತ್ತು. ಮೂಲ್ಕಿ ನಪಂ ವ್ಯಾಪ್ತಿಯಲ್ಲಿ 10 ಸದಸ್ಯರನ್ನು ಆಯ್ಕೆ ಮಾಡಬೇಕಿತ್ತು. ಆದರೆ 10 ಸ್ಥಾನಗಳಿಗೆ ಕೇವಲ 6 ನಾಮಪತ್ರ ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಿದ 6 ಮಂದಿಯನ್ನು ಅವಿರೋಧ ಆಯ್ಕೆ ಮಾಡಲಾಗಿದೆ.

ಬಾಬುರಾಯ ಪ್ರಭು(ಸಾಮಾನ್ಯ), ಸುರೇಂದ್ರ ಶೆಟ್ಟಿ(ಸಾಮಾನ್ಯ), ಸಂಜೀವ(ಪ.ಜಾತಿ), ಅಕ್ಬರ್(ಅಲ್ಪಸಂಖ್ಯಾತ), ಬಿ.ಎನ್.ಜಯರಾಮ(ವಿಶೇಷಚೇತನ) ಮತ್ತು ದಿನೇಶ್ ಕೋಟ್ಯಾನ್(ಹಿಂದುಳಿದ ವರ್ಗ) ಅವಿರೋಧ ಆಯ್ಕೆಗೊಂಡ ಸದಸ್ಯರು.

ಮೂರು ಮಹಿಳಾ ಸ್ಥಾನಗಳಿಗೆ ಮತ್ತು ಒಂದು ಪರಿಶಿಷ್ಟ ಪಂಗಡದ ಮೀಸಲಾತಿಗೆ ಯಾವುದೇ ಮತದಾರರು ಇಲ್ಲದಿರುವುದರಿಂದ ಈ ನಾಲ್ಕು ಸ್ಥಾನಗಳಿಗೆ ಯಾವುದೇ ಅಭ್ಯರ್ಥಿಗಳ ಆಯ್ಕೆ ನಡೆದಿಲ್ಲ ಎಂದು ಮೂಲ್ಕಿ ನಪಂ ಮುಖ್ಯಾಧಿಕಾರಿ ಪಿ.ಚಂದ್ರ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.