ಮೂಲ್ಕಿ ನಗರ ವ್ಯಾಪ್ತಿಯ ಮಳೆ ಹಾನಿ ಮುಂಜಾಗ್ರತಾ ಸಭೆ

ಮೂಲ್ಕಿ: ಮುಂಬರುವ ಪ್ರಾಕೃತಿಕ ವಿಕೋಪ ಮುಂದಾಲೋಚನಾ ಸಭೆಯು ಮೂಲ್ಕಿ ಸಮುದಾಯ ಭವನದಲ್ಲಿ ಶಾಸಕ ಉಮಾನಾಥ್ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು.

ಕಂದಾಯ, ಆರೋಗ್ಯ, ಪೋಲಿಸ್, ಮೆಸ್ಕಾಂ, ನೀರಾವರಿ ಸಹಿತ ವಿವಿಧ 17 ಇಲಾಖೆಗಳ ಪ್ರತಿನಿಧಿಗಳೊಂದಿಗೆ ಮಳೆ ಹಾನಿ ಮುಂಜಾಗೃತಾ ಕ್ರಮಗಳ ಬಗ್ಗೆ ಶಾಸಕರು ಮಾಹಿತಿ ಪಡೆದರು.

ನಗರ ವ್ಯಾಪ್ತಿಯ ಚರಂಡಿ ಹೂಳೆತ್ತುವಿಕೆ ಬಗ್ಗೆ ವಿಶೇಷ ಕಾಳಜಿ ವ್ಯಕ್ತಪಡಿಸಿದ ಅವರು ನಪಂ ಮುಖ್ಯಾಧಿಕಾರಿ ಪಿ.ಚಂದ್ರ ಪೂಜಾರಿ ಬಳಿ ಸವಿವರ ಪಡೆದರು. ಮೆಸ್ಕಾಂ ಇಲಾಖಾ ಕಾರ್ಯವಿಧಾನಗಳ ಬಗ್ಗೆ ಮಾಹಿತಿ ಪಡೆದು ಮಳೆಗಾಲದಲ್ಲಿ ಯಾವುದೇ ಸಮಸ್ಯೆ ತಲೆದೋರದಂತೆ ಮುಂಜಾಗೃತೆ ವಹಿಸುವಂತೆ ಸೂಚಿಸಿದರ
ು.
ಆರೋಗ್ಯ ಇಲಾಖಾ ಮಾಹಿತಿ ನೀಡಿದ ಕೆಮ್ರಾಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚಿತ್ರಾ ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ನೀಡಿ, ನಗರ ವ್ಯಾಪ್ತಿಯಲ್ಲಿ ಡೆಂಗೆ ಮತ್ತು ಮಲೇರಿಯಾ ಬಗ್ಗೆ ಮನೆ ಮನೆ ಮಾಹಿತಿ ನೀಡಿದ ಬಗ್ಗೆ ತಿಳಿಸಿದರು. ಕೊರೊನಾ ಮುಂಜಾಗೃತಾ ಕ್ರಮಗಳ ಬಗ್ಗೆಯೂ ವಿವರಿಸಿದರು.

ಮಳೆಗಾಲದಲ್ಲಿ ಪ್ರತಿ ಬಾರಿ ಯಾಂತ್ರಿಕ ದೋಣಿಗಳ ಮೂಲಕ ನಪಂ ಆಡಳಿತಕ್ಕೆ ಸಹಕಾರ ನೀಡುವ ಮೂಲ್ಕಿ ಮಂತ್ರ ಸರ್ಫ್ ಕ್ಲಬ್ ಪರವಾಗಿ ಸತ್ಯ ಶಮಂತ್ ಗೌಡ ಮಾಹಿತಿ ನೀಡಿದರು.

ಮೂಲ್ಕಿ ನಪಂ ಆಡಳಿತಾಧಿಕಾರಿ ಮತ್ತು ತಹಶೀಲ್ದಾರ್ ಮಾಣಿಕ್ಯ ಎಮ್. ಕಂದಾಯ ಇಲಾಖಾ ಮಾಹಿತಿ ನೀಡಿದರು.
ಮೂಲ್ಕಿ ಪೋಲಿಸ್ ಎಸ್‍ಐ ಶೀತಲ್ ಅಲಗೂರು ಉಪಸ್ಥಿತರಿದ್ದರು.

ಈ ಸಂದರ್ಭ ಮನೆ ರಿಪೇರಿಗಾಗಿ ನಗರ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಶಾಸಕ ಉಮಾನಾಥ ಕೋಟ್ಯಾನ್ ಚೆಕ್ ವಿತರಿಸಿದರು. ಮಳೆಗಾಲ ಆರಂಭಕ್ಕೆ ಮುನ್ನವೇ ಎಲ್ಲಾ ಇಲಾಖೆಗಳು ಮುನ್ನೆಚ್ಚರಿಕೆ ವಹಿಸಿ ಕಾರ್ಯನಿರ್ವಹಿಸುವಂತೆ ಉಮಾನಾಥ್ ಕೋಟ್ಯಾನ್ ತಿಳಿಸಿದರು.