ಮೂಲ್ಕಿ ಗಾಂಧಿ ಮೈದಾನದಲ್ಲಿ ಗಣರಾಜ್ಯೋತ್ಸವ

ಮೂಲ್ಕಿ: ಸಾಂಸ್ಕøತಿಕ ವೈಭವದ ಭಾರತವು ಇಂದು ದೇಶದ ಅತ್ಯುತ್ತಮ ಆಡಳಿತದಿಂದಾಗಿ ಪ್ರಪಂಚವೇ ಭಾರತದತ್ತ ತಿರುಗಿ ನೋಡುವಂತೆ ಬೆಳೆದು ನಿಂತಿದೆ.ವಿದೇಶಗಳಲ್ಲಿ ಭಾರತೀಯರಿಗೆ ಸಿಗುವ ಮನ್ನಣೆ ಪ್ರಧಾನಿ ಮೋದಿಯವರಿಂದಾಗಿ ಒದಗಿ ಬಂದಿದೆ ಎಂದು ಮೂಲ್ಕಿ- ಮೂಡಬಿದಿರೆ ಶಾಸಕ ಉಮಾನಾಥ್ ಎ.ಕೋಟ್ಯಾನ್ ಹೇಳಿದರು.
ಮೂಲ್ಕಿ ಗಾಂಧಿ ಮೈದಾನದಲ್ಲಿ ನಪಂ ವತಿಯಿಂದ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ಯಜಾರೋಹಣಗೈದು ಪಥಸಂಚಲನದ ಗೌರವ ಪಡೆದು ಬಳಿಕ ಅವರು ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಪಂ ಅಧ್ಯಕ್ಷ ಸುನಿಲ್ ಆಳ್ವ ಮಾತನಾಡಿ,ಸಂವಿಧಾನ ಶಿಲ್ಪ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಸಂವಿಧಾನ ರಚನಾ ಸಮಿತಿಯ ಸದಸ್ಯರಾಗಿದ್ದ ಮೂಲ್ಕಿ-ಚಿತ್ರಾಪುವಿನ ಜೆರಾಲ್ಡ್ ಡಿಸೋಜಾರನ್ನು ನೆನಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.ಈ ಬಾರಿಯ ನಪಂ ಮಾಸಿಕ ಸಭೆಯಲ್ಲಿ ಇದೇ ಮೊದಲ ಬಾರಿಗೆ 10 ಕೋಟಿ ರೂ.ಬಜೆಟ್ ಮಂಡಿಸಲಾಗಿದ್ದು,ಜತೆಗೆ 15 ಕೋಟಿ ರೂ.ವೆಚ್ಚದ ಮೂಲ್ಕಿ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ತ್ವರಿತವಾಗಿ ಸಾಗುತ್ತಿದೆ.ಮೂಲ್ಕಿ ಬಸ್ಸು ನಿಲ್ದಾಣ ರಚನೆಗಾಗಿ 3 ಕೋಟಿ ರೂ. ಮೀಸಲಿರಿಸಿದ್ದು,ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಂಡಿದೆ.ಮೂಲಭೂತ ಸೌಕರ್ಯಗಳನ್ನು ಒದಗಿಸಲು 5 ಕೋಟಿ ರೂ.ವೆಚ್ಚ ಮಾಡಲಾಗಿದೆ.ಸ್ವಚ್ಛ ಭಾರತ್ ಸರ್ವೇಕ್ಷಣೆಯಲ್ಲಿ ಮೂಲ್ಕಿ ನಪಂ ರಾಜ್ಯಕ್ಕೇ ದ್ವಿತೀಯ ಸ್ಥಾನ ಪಡೆದಿದೆ ಎಂದವರು ಹೇಳಿದರು.

ಸನ್ಮಾನ: ಗೌರವ ಡಾಕ್ಟರೇಟ್ ಪಡೆದ ಸಾಹಿತಿ ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್,ಸ್ವಚ್ಛ ಭಾರತ್ ಅಭಿಯಾನವನ್ನು ನಮ್ಮ ಕುಡ್ಲ ಚ್ಯಾನೆಲ್‍ನಲ್ಲಿ ಉಚಿತವಾಗಿ ಪ್ರಚುರಪಡಿಸಿದ ನಮ್ಮ ಕುಡ್ಲ ಚ್ಯಾನೆಲ್‍ನ ಲೀಲಾಕ್ಷ ಬಿ.ಕರ್ಕೇರ,ಸ್ವಚ್ಛ ಭಾರತ್ ಅಭಿಯಾನಕ್ಕೆ ವಿದ್ಯಾರ್ಥಿಗಳನ್ನು ಒದಗಿಸಿದ ವಿಜಯಾ ಕಾಲೇಜು ಪ್ರಿನ್ಸಿಪಾಲ್ ಡಾ.ನಾರಾಯಣ ಪೂಜಾರಿ,ನಾರಾಯಣ ಗುರು ವಿದ್ಯಾ ಸಂಸ್ಥೆಯ ಸಮರ್ಥ ಶಿಕ್ಷಕ ಗಂಗಾಧರ ಪೂಜಾರಿಯವರನ್ನು ನಪಂ ವತಿಯಿಂದ ಸನ್ಮಾನಿಸಲಾಯಿತು.

ರಾಜ್ಯ,ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಬಿಬಿಎಮ್ ರ್ಯಾಂಕ್ ವಿಜೇತೆ ಎಮ್.ವಂದನಾ ಎಸ್.ಶೆಣೈ,ಕರಾಟೆ ಸಾಧಕ ನಾರಾಯಣ ಗುರು ಶಾಲೆಯ ದೀಪಿಕಾ ಆರ್.ಅಮೀನ್,ಚೆಸ್ ಸಾಧಕಿ ಕಿಲ್ಪಾಡಿ ಬೆಥನಿ ಶಾಲೆಯ ಐಶಾನಿ ಶೆಟ್ಟಿ,ಕರಾಟೆ ಸಾಧಕರಾದ ಬೆಥನಿ ಶಾಲಾ ವಿದ್ಯಾರ್ಥಿಗಳಾದ ಅಬ್ದುಲ್ ಖಾದರ್,ಅಬ್ದುಲ್ ಮಹಮ್ಮದ್ ಇಸ್ಮಾಯಿಲ್,ಅರ್‍ಮಾನ್ ಮತ್ತು ಅನ್ವಿತ್ ವೈ.ಪೂಜಾರಿ,ನವದೆಹಲಿಯಲ್ಲಿ ಕಬ್-ಗೋಲ್ಡನ್ ಆ್ಯರೋ ಪ್ರಶಸ್ತಿ ಪಡೆದ ವಿಜಯಾ ಕಾಲೇಜಿನ ರಿಶೋನ್,ಪ್ರಜ್ವಲ್ ಡಿಸೋಜಾ,ಪ್ರನಮ್ ಆರ್,ಜೋಯಾನ್ ಕ್ರಿಸ್ ಡಿಲ್ಮೇಡಾ,ಅನುಷ್ ಅಂಚನ್,ವಿನೋಲ್ ಪ್ರಕಾಶ್ ಬೆನ್ನಿಸ್,ಅನ್ವಿತ್ ವೈ.ಪೂಜಾರಿ,ಶೇಖ್ ಅರ್ಕಾನ್ ಅನ್ವರ್,ತುಷಾರ್ ರಾವ್,ಬಿ.ಪ್ರತ್ಯೂಷ್ ರಾವ್,ಗ್ಯಾವಿನ್ ಆ್ಯರನ್ ಮಿನೇಜಸ್,ಮಯೂರ್ ಬಿ.ಕೋಟ್ಯಾನ್,ಮೊಹಮ್ಮದ್ ರಾಫಿಲ್‍ರನ್ನು ಸನ್ಮಾನಿಸಲಾಯಿತು.
ಬಹುಮಾನ ವಿತರಣೆ: ಶಾಲಾ ಮಕ್ಕಳಿಗಾಗಿ ನಪಂ ವ
ತಿಯಿಂದ ಚಿತ್ರಕಲೆ,ದೇಶಭಕ್ತಿ ಗೀತೆ,ಪ್ರಬಂಧ,ಭಾಷಣ,ರಂಗೋಲಿ,ವಾಲಿಬಾಲ್,ತ್ರೋಬಾಲ್,ಸ್ವ-ಸಹಾಯ ಗುಂಪುಗಳಿಗೆ ಹಗ್ಗ ಜಗ್ಗಾಟ ಸಹಿತ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು,ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪಥ ಸಂಚಲನ: ಮೂಲ್ಕಿ ಪೋಲೀಸ್,ಗೃಹ ರಕ್ಷಕ ದಳ,ವಿವಿಧ ಶಾಲಾ ಎನ್‍ಸಿಸಿ,ನೌಕಾ ದಳ,ಸ್ಕೌಟ್ಸ್,ಗೈಡ್ಸ್,ಭಾರತ್ ಸೇವಾ ದಳ,ಬುಲ್‍ಬುಲ್ ತಂಡಗಳಿಂದ ನಡೆದ ಆಕರ್ಷಕ ಪಥ ಸಂಚಲನದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಗೌರವ ವಂದನೆ ಸ್ವೀಕರಿಸಿದರು.
ನೃತ್ಯ ಪ್ರದರ್ಶನ: ಬಳಿಕ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಬಯಲು ನೃತ್ಯ ಪ್ರದರ್ಶನ ನಡೆಯಿತು.

ನಪಂ ಉಪಾಧ್ಯಕ್ಷೆ ರಾಧಿಕಾ ಯಾದವ ಕೋಟ್ಯಾನ್,ವಿಶೇಷ ತಹಶೀಲ್ದಾರ್ ಎನ್.ಮಾಣಿಕ್ಯ,ಮೂಲ್ಕಿ ಠಾಣಾ ವೃತ್ತ ನಿರೀಕ್ಷಕ ಅನಂತ ಪದ್ಮನಾಭ,ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕೃಷ್ಣ ಮುಖ್ಯ ಅತಿಥಿಗಳಾಗಿದ್ದರು.ಮುಖ್ಯಾಧಿಕಾರಿ ಇಂದು ಎಮ್.ಸ್ವಾಗತಿಸಿದರು.ನ್ಯಾಯವಾದಿ ಭಾಸ್ಕರ್ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.ಸ್ಥಾಯೀ ಸಮಿತಿಯ ಅಧ್ಯಕ್ಷ ಶೈಲೇಶ್ ಕುಮಾರ್ ವಂದಿಸಿದರು.