ಮೂಲ್ಕಿ ಕೊಸೆಸಾಂ ಅಮ್ಮನವರ ಚರ್ಚ್‍ನಲ್ಲಿ ತೆನೆ ಹಬ್ಬ ಸಂಭ್ರಮ

ಮೂಲ್ಕಿ ಕೊಸೆಸಾಂ ಅಮ್ಮನವರ ಚರ್ಚ್‍ನಲ್ಲಿ ತೆನೆ ಹಬ್ಬ ಸಂಭ್ರಮ
ಮೂಲ್ಕಿ: ತ್ಯಾಗ ಜೀವನದ ಪ್ರತೀಕವಾದ ಮಾತೆ ಮರಿಯಮ್ಮನವರ ಜೀವನ ತತ್ವದಂತೆ ಸ್ವಾರ್ಥರಹಿತವಾಗಿ ನಮ್ಮನ್ನು ಸಲಹುವ ಪ್ರಕೃತಿಯನ್ನು ಮಾತೆಯ ಜನ್ಮದಿನದಂದು ಪೂಜಿಸಿ ಕೃತಜ್ಞತೆ ಅರ್ಪಿಸುವ ಕಾರ್ಯ ಸ್ತುತ್ಯರ್ಹ ಎಂದು ಮೂಲ್ಕಿ ಕೊಸೆಸಾಂ ಅಮ್ಮನವರ ದೇವಾಲಯದ ಧರ್ಮಗುರುಗಳಾದ ವಂದನೀಯ ಸಿಲ್ವೆಸ್ಟರ್ ಡಿಕೋಸ್ಟಾ ಹೇಳಿದರು.

ಮಾತೆ ಮರಿಯಮ್ಮನವರ ಜನ್ಮ ದಿನಾಚರಣೆ(ಮೋಂತಿ ಪೆಸ್ತ್) ಪ್ರಯುಕ್ತ ಮೂಲ್ಕಿ ಕಾರ್ನಾಡು ಪೂಂಜಾ ಸಂಕೀರ್ಣದ ಎದುರು ತೆÀನೆಗಳನ್ನು ಶುದ್ದೀಕರಿಸಿ ಆಶೀರ್ವಚಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಹಿರಿಯ ಶಿಕ್ಷಕಿ ಪೌಷ್ಠಿನ್ ಮಥಾಯಿಸ್ ಮೋಂತಿ ಪೆಸ್ತ್ ಬಗ್ಗೆ ಪ್ರಸ್ತಾವಿಸಿದರು. ಮೂಲ್ಕಿ ಡಿವೈನ್ ಕಾಲ್ ಸೆಂಟರ್ ಧರ್ಮಗುರು ಫಾದರ್ ಆಲ್ವಿನ್ ಪಿಂಟೋ ದೇವ ವಾಕ್ಯದೊಂದಿಗೆ ಆಶೀರ್ವಚಿಸಿದರು. ಸಿಲ್ವೆಸ್ಟರ್ ಡಿಕೋಸ್ಟಾ ತೆನೆಗಳನ್ನು ಶುದ್ದೀಕರಿಸಿ ಆಶೀರ್ವಚನ ನೀಡಿದರು.

ಈ ಸಂದರ್ಭ ಮೂಲ್ಕಿ ಕಾನ್ವೆಂಟ್ ಸುಪೀರಿಯರ್ ಭಗಿನಿ ನಂದಿತಾ, ಚರ್ಚು ಪಾಲನಾ ಸಮಿತಿ ಉಪಾಧ್ಯಕ್ಷೆ ಜೀನ್ ಮೋಲಿನ್ ಡಿಸೋಜಾ, ಕಾರ್ಯದರ್ಶಿ ಪ್ರಕಾಶ್ ಮೊಂತೇರೊ, ಗುರಿಕಾರರು ವಾರ್ಡು ಮುಖ್ಯಸ್ಥರು, ಧರ್ಮ ಸಭಾ ಸದಸ್ಯರು ಉಪಸ್ಥಿತರಿದ್ದರು. ಜೀನ್ ಮೊಲಿನ್ ಡಿಸೋಜಾ ವಂದಿಸಿದರು.

ಬಳಿಕ ಬಾಲೆ ಮರಿಯಮ್ಮನವರ ಮೂರ್ತಿ ಹಾಗೂ ತೆನೆಗಳನ್ನು ಮೆರವಣಿಗೆಯಲ್ಲಿ ಚರ್ಚ್‍ಗೆ ಕೊಂಡೊಯ್ದು ಪೂಜೆಯ ಬಳಿಕ ಧರ್ಮ ಸಭೆಯ ಸದಸ್ಯರಿಗೆ ನೀಡಲಾಯಿತು.
ಫೋಟೋ: ಮೂಲ್ಕಿ ಕೊಸೆಸಾಂ ಅಮ್ಮನವರ ದೇವಾಲಯದ ಧರ್ಮಗುರುಗಳಾದ ವಂ.ಸಿಲ್ವೆಸ್ಟರ್ ಡಿಕೋಸ್ಟಾ ಮಾತೆ ಮರಿಯಮ್ಮನವರ ಜನ್ಮ ದಿನಾಚರಣೆ(ಮೋಂತಿ ಪೆಸ್ತ್) ಪ್ರಯುಕ್ತ ಮೂಲ್ಕಿ ಕಾರ್ನಾಡು ಪೂಂಜಾ ಸಂಕೀರ್ಣದ ಎದುರು ತೆÀನೆಗಳನ್ನು ಶುದ್ದೀಕರಿಸಿ ಆಶೀರ್ವಚಿಸಿದರು.