ಮೂಲ್ಕಿಯಲ್ಲಿ ಜನೌಷಧಿ ಕೇಂದ್ರ ಉದ್ಘಾಟನೆ

ಮೂಲ್ಕಿ: ಜನೌಷಧಿ ಕೇಂದ್ರಗಳ ಸ್ಥಾಪನೆಯಲ್ಲಿ ಹಲವಾರು ತೊಡಕುಗಳಿದ್ದು, ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರಕಾರ ಕ್ರಮ ಕೈಗೊಂಡಿದೆ ಎಂದ ಅವರು ಇಡೀ ರಾಜ್ಯದಲ್ಲಿ ಜನೌಷಧಿ ಕೇಂದ್ರಗಳನ್ನು ವಿಸ್ತರಿಸಲು ರಾಜ್ಯ ಸರಕಾರ ಪರಿಣಾಮಕಾರಿ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ದಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮೂಲ್ಕಿಯ ಕಾರ್ನಾಡು ನಾಲೂರು ಕಾಂಪ್ಲೆಕ್ಸ್‍ನಲ್ಲಿ ಶುಕ್ರವಾರ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅವಭಜಿತ ದಕ ಜಿಲ್ಲೆಯ ಹಿರಿಯರ ದೂರದೃಷ್ಟಿತ್ವದ ಪರಿಣಾಮ ನಮ್ಮ ಜಿಲ್ಲೆಯು ಆರೋಗ್ಯ ಮತ್ತು ಶಿಕ್ಷಣದಲ್ಲಿ ಜಾಗತಿಕವಾಗಿ ಅದ್ವಿತೀಯ ಸಾಧನೆಗೈದಿದೆ. ಉತ್ತರ ಕರ್ನಾಟಕದಲ್ಲಿ ಸಾವಿರ ಹೆರಿಗೆಗೆ ಕನಿಷ್ಠ 30 ಮರಣಗಳಾಗುತ್ತಿವೆ. ಆದರೆ ಅವಿಭಜಿತ ದಕ ಜಿಲ್ಲೆಯಲ್ಲಿ 2000 ಹೆರಿಗೆಗೆ ಕೇವಲ ಒಂದು ಮರಣ ಸಂಭವಿಸುತ್ತದೆ. ಇದಕ್ಕೆ ನಮ್ಮ ಹಿರಿಯರ ಮುಂದಾಲೋಚನೆಯೇ ಕಾರಣ ಎಂದವರು ಹೇಳಿದರು.

ಜನೌಷಧಿ ಕೇಂದ್ರಗಳ ಸ್ಥಾಪನೆಯಲ್ಲಿ ಹಲವಾರು ತೊಡಕುಗಳಿದ್ದು, ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರಕಾರ ಕ್ರಮ ಕೈಗೊಂಡಿದೆ ಎಂದ ಅವರು ಇಡೀ ರಾಜ್ಯದಲ್ಲಿ ಜನೌಷಧಿ ಕೇಂದ್ರಗಳನ್ನು ವಿಸ್ತರಿಸಲು ರಾಜ್ಯ ಸರಕಾರ ಪರಿಣಾಮಕಾರಿ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ಆಯುಷ್ಮಾನ್ ಆರೋಗ್ಯ ಕಾರ್ಡ್ ಬಳಕೆಯಲ್ಲಿ ವಿವಿಧ ತೊಂದರೆಗಳಿದ್ದು, ಕಟ್ಟಕಡೆಯ ವ್ಯಕ್ತಿಗೂ ಯೋಜನೆಯ ಪ್ರಯೋಜನ ಸಿಗುವಂತಾಗಲು ಆರೋಗ್ಯ ಕಾರ್ಡ್ ನಿಯಮ ಬದಲಾವಣೆಗೆ ಸರಕಾರ ಚಿಂತನೆ ನಡೆಸಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಮೂಲ್ಕಿ-ಮೂಡಬಿದಿರೆ ಶಾಸಕ ಉಮಾನಾಥ್ ಎ.ಕೋಟ್ಯಾನ್ ಮಾತನಾಡಿ, ಪ್ರತಿಯೊಬ್ಬನಿಗೂ ಬದುಕುವ ಹಕ್ಕಿದೆ ಎಂಬ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಯವರು ಜನೌಷಧಿ ಯೋಜನೆ ಜಾರಿಗೆ ತಂದರು. ಇದರಿಂದ 100 ರೂ.ಗೆ ಸಿಗಬಹುದಾದ ಔಷಧಗಳು 30-40 ರೂ.ಗೆ ಸಿಗುವಂತಾಗಿದೆ. ಜನತೆ ಇದರ ಪ್ರಯೋಜನವನ್ನು ಸದುಯೋಗಪಡಿಸಿಕೊಳ್ಳಬೇಕು ಎಂದರು.

ಸನ್ಮಾನ: ಇದೇ ಸಂದರ್ಭ ಮೂಲ್ಕಿಯ ಹಿರಿಯ ವೈದ್ಯ ಡಾ.ಎಮ್.ಆರ್.ಕುಡ್ವ, ಸಮುದಾಯ ಆರೋಗ್ಯ ಕೇಂದ್ರದ ಸೀನಿಯರ್ ಸ್ಟಾಫ್ ನರ್ಸ್ ಲಕ್ಷ್ಮೀ ಮತ್ತು ರಾಜ್ಯ ಪಿಎಮ್‍ಬಿಜೆಕೆ ಬಿಪಿಪಿಐನ ನೋಡಲ್ ಅಧಿಕಾರಿ ಡಾ.ಅನಿಲ ದೀಪಕ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಸ್ಥಳದಾನಿ ವಿಲ್ಮಾ ಮತ್ತು ಸೀನಿಯರ್ ಫಾರ್ಮಾಸಿಸ್ಟ್ ಡಾರ್ಲಿನ್‍ರವರನ್ನು ಗೌರವಿಸಲಾಯಿತು.

ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕೆ.ಕೃಷ್ಣ, ಮೂಲ್ಕಿ ಶಾಫಿ ಜುಮ್ಮಾ ಮಸೀದಿಯ ಅಧ್ಯಕ್ಷ ಲಿಯಾಖತ್ ಆಲಿ, ಕಾರ್ನಾಡು ಇಮಾಕ್ಯುಲೇಟ್ ಕನ್ಸಪ್ಷನ್ ಚರ್ಚ್ ಧರ್ಮಗುರು ಫಾದರ್ ಸಿಲ್ವೆಸ್ಟರ್ ಡಿಕೋಸ್ಟಾ, ನವದೆಹಲಿ ನ್ಯಾಷನಲ್ ಯುವ ಕೋಪರೇಟಿವ್ ಸೊಸೈಟಿಯ ಪ್ರತಿನಿಧಿ ಅ