ಮಾ.14-23: ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳ ವರ್ಷಾವಧಿ ಮಹೋತ್ಸವ

ಪಡುಬಿದ್ರಿ: ಇತಿಹಾಸ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವರ್ಷಾವಧಿ ಮಹೋತ್ಸವವು ಮಾ. 14ರಿಂದ ಮಾ. 23ರವರೆಗೆ ನಡೆಯಲಿದೆ.

ಇಂದು(ಮಾ. 14) ಬೆಳಿಗ್ಗೆ 9ಗಂಟೆಗೆ ಶ್ರೀ ದೇವರ ಧ್ವಜಾರೋಹಣದೊಂದಿಗೆ ವರ್ಷಾವಧಿ ಮಹೋತ್ಸವವು ಆರಂಭಗೊಳ್ಳಲಿದೆ. ರಾತ್ರಿ ಬಡಗು ಸವಾರಿ, ಮಾ.15ರಂದು ರಾತ್ರಿ ಆಯನೋತ್ಸವ, ಮಾ. 17ರಂದು ಪಡು ಸವಾರಿ, ಮಾ.18ರಂದು ಪಾರುಪತ್ಯಗಾರ ಕಟ್ಟೆಪೂಜೆ, ಮಾ. 19ರಂದು ಕೆರೆ ದೀಪೆÇೀತ್ಸವ, ಮಾ.20ರಂದು ತೆಂಕು ಸವಾರಿ ಮಾ.21ರಂದು ಬೆಳಿಗ್ಗೆ 11ಗಂಟೆಗೆ ರಥಾರೋಹಣ, ಸಾರ್ವಜನಿಕ ಅನ್ನ ಸಂತರ್ಪಣೆ, ರಾತ್ರಿ ಮಹಾ ರಥೋತ್ಸವ, ಭೂತ ಬಲಿ, ಕವಾಟ ಬಂಧನ, ಮಾ.22ರಂದು ಕವಾಟೋದ್ಘಾಟನೆ, ತುಲಾಭಾರಸೇವೆ, ಸಂಜೆ 4ಕ್ಕೆ ಚೆಂಡು ಉತ್ಸವ, ರಾತ್ರಿ ಅವಭೃತ ಸ್ನಾನ, ಧ್ವಜಾವರೋಹಣ, ಮಾ. 23ರಂದು ಮಹಾ ಸಂಪೆÇ್ರೀಕ್ಷಣೆ, ಮಂತ್ರಾಕ್ಷತೆಗಳೊಂದಿಗೆ ಮಹೋತ್ಸವವು ಸಂಪನ್ನಗೊಳ್ಳಲಿರುವುದಾಗಿ ಶ್ರೀ ದೇವಸ್ಥಾನದ ಆಡಳಿತ ಮೊಕ್ತೇಸರರು, ಕಾರ್ಯ ನಿರ್ವಹಣಾಧಿಕಾರಿ ತಿಳಿಸಿದ್ದಾರೆ.

ಕ್ಯಾ: ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರು