ಭಾರೀ ಗಾಳಿ ಮಳೆಗೆ ಹೆಜಮಾಡಿ ಚೆಕ್‍ಪೋಸ್ಟ್ ತಗಡು ಚಪ್ಪರ ಧರಾಶಾಯಿ

ಮೂಲ್ಕಿ: ಭಾನುವಾರ ರಾತ್ರಿ ಹೆಜಮಾಡಿ ಭಾಗದಲ್ಲಿ ಭಾರೀ ಗಾಳಿ ಮಳೆ ಕಾರಣ ಚೆಕ್‍ಪೋಸ್ಟ್‍ನಲ್ಲಿ ಹಾಕಲಾಗಿದ್ದ ತಗಡು ಶೀಟು ಚಪ್ಪರಗಳು ಧರಾಶಾಯಿಯಾಗಿದೆ. ಆದರೆ ಯಾರಿಗೂ ಯಾವುದೆ ಅಪಾಯವಾಗಿಲ್ಲ
.
ದಕ ಉಡುಪಿ ಗಡಿಭಾಗ ಹೆಜಮಾಡಿಯಲ್ಲಿ ಹೊರ ರಾಜ್ಯಗಳಿಂದ ಆಗಮಿಸುವವರ ಮಾಹಿತಿ ಸಂಗ್ರಹಕ್ಕಾಗಿ ಕೆಲವು ದಿನಗಳ ಹಿಂದೆ ಹೆದ್ದಾರಿಯ ಎರಡೂ ಬದಿಗಳಲ್ಲಿ ತಗಡು ಶೀಟು ಹಾಕಿ ತಪಾಸನಾ ಕೇಂದ್ರ ಆರಂಭಿಸಲಾಗಿತ್ತು.

ಆದರೆ ಭಾನುವಾರ ರಾತ್ರಿಯ ಭಾರೀ ಗಾಳಿ ಮಳೆಗೆ ಉಡುಪಿ ಭಾಗದ ಎಲ್ಲಾ ತಗಡು ಚಪ್ಪರಗಳೂ ನೆಲಸಮವಾಗಿದ್ದು, ಅದರೊಳಗಿದ್ದ ಎಲ್ಲಾ ಸಿಬ್ಭಂದಿಗಳು ಹೊರಗೋಡಿದ ಪರಿಣಾಮ ಅಪಾಯದಿಂದ ಪಾರಾಗಿದ್ದಾರೆ.

ದಕ ಜಿಲ್ಲೆ ವತಿಯಿಂದ ರಸ್ತೆಯ ಪೂರ್ವ ಬದಿಯಲ್ಲಿ ಬೋಲ್ಟ್ ಹಾಕಿ ತಗಡು ಚಪ್ಪರ ಹಾಕಲಾಗಿದ್ದು ಯಾವುದೆ ಅಪಾಯ ಸಂಭವಿಸಿಲ್ಲ. ಕೆಲವ ಒಂದೆರಡು ಶೀಟುಗಳು ಹಾರಿಹೋಗಿದೆ.

ಅದರೆ ಉಡುಪಿ ಭಾಗದ ಎಲ್ಲ ಶೀಟುಗಳು ನೆಲಸಮವಾಗಿದೆ. ರಸ್ತೆ ಡಿವೈಡರ್ ಮೇಲೆ ಹಾಕಲಾಗಿದ್ದ ಚಪ್ಪರವು ನೆಲಸಮವಾಗಿದೆ.