ಬೆಳ್ಮಣ್ಣು ಎಸ್‍ಎಲ್‍ಜೆ ಇಂಟರ್‍ನ್ಯಾಶನಲ್ ಸ್ಕೂಲ್ ಸತತ 12ನೇ ವರ್ಷ ಶೇ.100

ಪಡುಬಿದ್ರಿ: ಬೆಳ್ಮಣ್ಣು ಶ್ರೀ ಲಕ್ಷ್ಮೀಜನಾರ್ಧನ ಇಂಟರ್‍ನ್ಯಾಶನಲ್ ಸ್ಕೂಲ್ ಈ ಬಾರಿಯ ಸಿಬಿಎಸ್‍ಸಿ ಪರೀಕ್ಷೆಯಲ್ಲಿ ಸತತ 12ನೇ ವರ್ಷ ಶೇ.100 ಫಲಿತಾಂಶ ದಾಖಲಿಸಿದೆ.
ಈ ಬಾರಿ ಪರೀಕ್ಷೆಗೆ ಹಾಜರಾದ 67 ವಿದ್ಯಾರ್ಥಿಗಳ ಪೈಕಿ 18 ಡಿಸ್ಟಿಂಕ್ಷನ್ ಮತ್ತು 43 ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಶಾಲೆಯ ಬಿ.ಸೌಮ್ಯಾ ನಾರಾಯಣಿ ಶೇ.93.6, ಉದಿತ್ ಕಟೀಲ್ ಶೇ.92.4, ವರುಣ್ ಸುರೇಶ್ ಶೆಟ್ಟಿ ಶೇ.90.8, ಜಿ.ಕ್ಷಮಾ ಪೈ 90.6, ಸನತ್ ಪಿ.ಸುವರ್ಣ ಶೇ.90.4. ಅಭಿನವ್ ಗುರುರಾಜ್ ಆಚಾರ್ಯ ಶೇ.90 ಅತ್ಯಧಿಕ ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.

ವಿದ್ಯಾರ್ಥಿಗಳ ಈ ಅತ್ಯುತ್ತಮ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಿನ್ಸಿಪಾಲ್, ಬೋಧಕ ಮತ್ತು ಬೋಧಕೇತರ ವರ್ಗ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದೆ.