ಬಡಾ ಗ್ರಾಪಂ ವ್ಯಾಪ್ತಿಯಲ್ಲಿ ಅದಾನಿ ಸಿಎಸ್‍ಆರ್ ಯೋಜನೆಯ 6 ಕಾಮಗಾರಿ ಉದ್ಘಾಟನೆ

ಪಡುಬಿದ್ರಿ: ಅದಾನಿ-ಯುಪಿಸಿಎಲ್ ಸಂಸ್ಥೆಯ ಸಿಎಸ್‍ಆರ್ ಯೋಜನೆಯಡಿ ಬಡಾ ಗ್ರಾಪಂ ವ್ಯಾಪ್ತಿಯಲ್ಲಿ ರೂ.30.50 ಲಕ್ಷ ವೆಚ್ಚದಲ್ಲಿ ನಿರ್ವಹಿಸಲಾದ 6 ಕಾಮಗಾರಿಗಳನ್ನು ಉದ್ಘಾಟಿಸಲಾಯಿತು.

ಸುಮಾರು ರೂ. 30.50 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಿದ 90 ಮೀಟರ್ ಉದ್ದದ ಸುಭಾಶ್ ರಸ್ತೆ, 175 ಮೀಟರ್ ಉದ್ದದ ಮಹಾಲಕ್ಷ್ಮೀ ರಸ್ತೆ, 90 ಮೀಟರ್ ಉದ್ದದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರಸ್ತೆ, 120 ಮೀಟರ್ ಉದ್ದದ ಪೆÇಲ್ಯ ರಸ್ತೆ, 110 ಮೀಟರ್ ಉದ್ದದ ಎರ್ಮಾಳ್ ಜನಾರ್ದನ ರಸ್ತೆಗಳ ಕಾಂಕ್ರೀಟೀಕರಣ ಮತ್ತು ಮುಳ್ಳಗುಡ್ಡೆಯಲ್ಲಿ ಅಂಗನವಾಡಿ ಕೇಂದ್ರಕ್ಕೆ ಆವರಣ ಗೋಡೆ ಮತ್ತು ಇಂಟರ್ ಲಾಕಿಂಗ್ ವ್ಯವಸ್ಥೆ-ಕಾಮಗಾರಿಗಳನ್ನು ಅದಾನಿ-ಯುಪಿಸಿಎಲ್ ಸಂಸ್ಥೆಯ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಮತ್ತು ಬಡಾ ಗ್ರಾಪಂ ಅಧ್ಯಕ್ಷೆ ಶರ್ಮಿಳಾ ಸಾಲ್ಯಾನ್ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು.

ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದ ಕಿಶೋರ್ ಆಳ್ವ ಅವರು ಸಂಸ್ಥೆಯು ತನ್ನ ಸಿಎಸ್‍ಆರ್ ಯೋಜನೆಯಡಿಯಲ್ಲಿ ಯುಪಿಸಿಎಲ್ ಸ್ಥಾವರದ ಸುತ್ತಮುತ್ತಲಿನ ಪ್ರದೇಶದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಮೀಸಲಿಟ್ಟಿದ್ದು, ಬಡಾ ಗ್ರಾಪಂಗೆ 3 ವರ್ಷದ ಅವಧಿಗೆ ಒಟ್ಟು ರೂ. 2.77 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸಲು ಬದ್ಧವಾಗಿದೆ ಎಂದರು. ಈಗಾಗಲೇ ಸುಮಾರು ರೂ. 74 ಲಕ್ಷ ಮೌಲ್ಯದ ಕೆಲಸಗಳು ಪೂರ್ಣಗೊಂಡಿದ್ದು, ರೂ. 22.50 ಲಕ್ಷ ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ಆಳ್ವ ತಿಳಿಸಿದರು. ಪ್ರತಿ ವಾರ್ಷಿಕ ಸಾಲಿನಲ್ಲಿ ಗ್ರಾಪಂ ಕ್ರಿಯಾಯೋಜನೆಯಲ್ಲಿ ನಮೂದಿಸಿರುವ ಕಾಮಗಾರಿಗಳನ್ನು ಅದಾನಿ ಸಂಸ್ಥೆ ಸಿಎಸ್‍ಆರ್ ಕಾರ್ಯಕ್ರಮದಡಿಯಲ್ಲಿ ಕೈಗೆತ್ತಿಕೊಂಡು ನಿರ್ವಹಿಸುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಕಚ್ಚಾ ರಸ್ತೆಗಳನ್ನು ಪಕ್ಕಾ ರಸ್ತೆಗಳನ್ನಾಗಿ ಪರಿವರ್ತಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದರು. ನಗರ ಪ್ರದೇಶಗಳಲ್ಲಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ವೈಟ್‍ಟಾಪಿಂಗ್ ಮಾಡಲಾಗುತ್ತಿದೆ.ಅದೇ ರೀತಿಯಲ್ಲಿ ನಮ್ಮ ಜಿಲ್ಲೆಯ ಗ್ರಾಮಗಳಲ್ಲೂ ಸಹ ರಸ್ತೆಗಳನ್ನು ಕಾಂಕ್ರೀಟೀಕರಣಗೊಳಿಸುವುದರಿಂದ ವೈಟ್‍ಟಾಪಿಂಗ್ ಮಾದರಿ ರಸ್ತೆಯಾಗಿದೆ ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ಶರ್ಮಿಳಾ ಸಾಲ್ಯಾನ್ ಅವರು ಅದಾನಿ ಫೌಂಡೇಶನ್ ಹಾಗೂ ಯುಪಿಸಿಎಲ್ ಸಂಸ್ಥೆಯ ಸಿಎಸ್‍ಆರ್ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಡಾ ಗ್ರಾಪಂ ಉಪಾಧ್ಯಕ್ಷೆ ಇಂದಿರಾ ಶೆಟ್ಟಿ, ತಾಪಂ ಸದಸ್ಯ ಯು. ಶೇಖಬ್ಬ, ಗ್ರಾಪಂ ಸದಸ್ಯರಾದ ಚಂದ್ರಶೇಖರ್, ವಸಂತ, ಶಕುಂತಲಾ, ಸೋಮನಾಥ ಪೂಜಾರಿ, ಮೋಹಿನಿ, ಮೋಹಿನಿ ಸುವರ್ಣ, ಅದಾನಿ ಯುಪಿಸಿಎಲ್ ಕಂಪನಿಯ ಏಜಿಎಂ