ಬಂಟ ಸಮಾಜ ವಿಶೇಷತೆವುಳ್ಳವರು-ಕಿಂಚಿತ್ ಬೆಳೆದಿದ್ದರೆ ಸಮಾಜಕ್ಕೆ ಹಿಂತಿರುಗಿಸಬೇಕು ಪಡುಬಿದ್ರಿ ಬಂಟರ ಸಂಘದ ನೂತನ ಸಭಾಭವನ ಉದ್ಘಾಟಿಸಿ ನಿಟ್ಟೆ ವಿನಯ ಹೆಗ್ಡೆ

ಪಡುಬಿದ್ರಿ: ಕರಾವಳಿ ಜಿಲ್ಲೆಗಳಲ್ಲಿ ಬಂಟ ಸಮಾಜಕ್ಕೆ ವಿಶೇಷ ಸ್ಥಾನಮಾನವಿದೆ. ತಾವು ಪಡೆದಿದ್ದನ್ನು ಸಮಾಜಕ್ಕೆ ಹಿಂತಿರುಗಿಸುವ ಕಾರ್ಯವನ್ನು ಬಂಟ ಸಮಾಜ ಮುಂದುವರಿಸಬೇಕು ಎಂದು ನಿಟ್ಟೆ ವಿಶ್ವವಿದ್ಯಾನಿಲಯ ಕುಲಾಧಿಪತಿ ನಿಟ್ಟೆ ವಿನಯ ಹೆಗ್ಡೆ ಹೇಳಿದರು.

ಪಡುಬಿದ್ರಿ ಬಂಟರ ಸಂಘ, ಬಂಟ್ಸ್ ವೆಲ್‍ಫೇರ್ ಟ್ರಸ್ಟ್ ವತಿಯಿಂದ ಗುರುವಾರ ರಾತ್ರಿ ನೂತನವಾಗಿ ನಿರ್ಮಿಸಿದ ಬಂಟರ ಚಾವಡಿ ಸಭಾಂಗಣ-ಕೃಷ್ಣ ಸುಧಾಮ ವೇದಿಕೆ ಮತ್ತು ಆವರಣ ಗೋಡೆ ಉದ್ಘಾಟಿಸಿ ಅವರು ಮಾತನಾಡಿದರು.
ವಿಮರ್ಶರಿಗೆ ಅಸಾಧ್ಯವಾದ ವ್ಯಕ್ತಿ ಸದ್ಗುರು ನಿತ್ಯಾನಂದರು. ಅವರು ದೇವರಿಗೆ ಸಮಾನವಾದವರು. ಅವರ ಮೂರ್ತಿ ಪ್ರತಿಷ್ಠಾಪನೆ ಮೂಲಕ ಬಂಟ ಸಮಾಜ ಉತ್ತಮ ಕಾರ್ಯ ನಡೆಸಿದೆ ಎಂದವರು ಹೇಳಿದರು.

ಸಮಾರಂಭದ ಮುಖ್ಯ ಅತಿಥಿ ದಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಡಾ.ಎಮ್.ಎನ್.ರಾಜೇಂದ್ರ ಕುಮಾರ್ ಮಾತನಾಡಿ, ಎಲ್ಲರನ್ನೂ ಒಗ್ಗೂಡಿಸಿ ಕಾರ್ಯ ನಿರ್ವಹಿಸುವ ಛಾತಿ ಬಂಟ ಸಮಾಜದಲ್ಲಿದೆ. ಕರಾವಳಿಯ ಸಮಗ್ರ ಅಭಿವೃದ್ಧಿಯಲ್ಲಿ ಬಂಟ ಸಮಾಜದ ಕೊಡುಗೆ ಅಪೂರ್ವವಾದುದು. ಬಂಟರು ಹೃದಯ ಶ್ರೀಮಂತಿಕೆ ಉಳ್ಳವರು. ಡಾ.ದೇವಿಪ್ರಸಾದ್ ಶೆಟ್ಟಿಯವರು ಕೈಗೊಳ್ಳುವ ಯಾವುದೇ ಕಾರ್ಯ ಸುಲಲಿತವಾಗಿ ಪೂರ್ಣಗೊಳ್ಳುತ್ತದೆ ಎಂದರು.
ಉದ್ಘಾಟನೆ: ಸಂಘದ ಆವರಣ ಗೋಡೆ ಉದ್ಘಾಟನೆಯನ್ನು ನವಿ ಮುಂಬೈ ದೇವಿ ರೆಸಿಡೆನ್ಸಿಯ ಅಶೋಕ್ ಆರ್ ಶೆಟ್ಟಿ, ನಾಮಫಲಕ ಅನಾವರಣವನ್ನು ಡಾ.ಎಮ್.ಎನ್.ರಾಜೇಂದ್ರ ಕುಮಾರ್, ಬಂಟರ ಚಾವಡಿಯನ್ನು ಬೆಳಗಾವಿ ರಾಮದೇವ್ ಹೋಟೆಲ್‍ನ ಭವಾನಿ ಆರ್.ಶೆಟ್ಟಿ-ಬೋಳ ರಘುರಾಮ ಶೆಟ್ಟಿ ದಂಪತಿ, ವಾಟರ್ ಕೂಲರ್‍ನ್ನು ಎರ್ಮಾಳು ಸೀತಾರಾಮ ಶೆಟ್ಟಿ ಪುಣೆ, ಬಂಟರ ವೇದಿಕೆಯನ್ನು ಮುಂಬೈ ಹೋಟೆಲ್ ಕೃಷ್ಣ ಪ್ಯಾಲೇಸ್‍ನ ಉಮಾ ಕೆ.ಶೆಟ್ಟಿ-ಕೃಷ್ಣ ವೈ.ಶೆಟ್ಟಿ ದಂಪತಿ ಉದ್ಘಾಟಿಸಿದರು.

ಸನ್ಮಾನ: ಇದೇ ಸಂದರ್ಭ ಪಡುಬಿದ್ರಿ ಸಂಘದ ಅಭಿವೃದ್ಧಿ ಕಾರ್ಯದಲ್ಲಿ ಅತೀ ಹೆಚ್ಚು ಸಹಕಾರ ನೀಡಿದ ಭವಾನಿ ಆರ್.ಶೆಟ್ಟಿ-ಬೋಳ ರಘುರಾಮ ಶೆಟ್ಟಿ ದಂಪತಿ, ಉಮಾ ಕೃಷ್ಣ ಶೆಟ್ಟಿ-ಕೃಷ್ಣ ವೈ.ಶೆಟ್ಟಿ ದಂಪತಿ, ಎರ್ಮಾಳು ಚಂದ್ರಹಾಸ ಶೆಟ್ಟಿ-ಸಾರಿಕಾ ಸಿ.ಶೆಟ್ಟಿ ದಂಪತಿ, ಡಾ.ಎಮ್.ಎನ್.ರಾಜೇಂದ್ರ ಕುಮಾರ್ ಸಹಿತ ಎಲ್ಲಾ ದಾನಿಗಳನ್ನು ಹಾಗೂ ಕಟ್ಟಡ ಕಾಮಗಾರಿಗಳಿಗೆ ಸಹಕರಿಸಿದವರನ್ನು ಬಂಟರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಮಂಗಳೂರು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ನವಿ ಮುಂಬೈ ಖಾಂದೇಶ್ ಭಾಸ್ಕರ ಶೆಟ್ಟಿ, ಉಡುಪಿ ಮಾತೃ ಬಂಟರ ಸಂಘದ ಸಂಚಾಲಕ ಜಯರಾಜ್ ಹೆಗ್ಡೆ, ಪಡುಬಿದ್ರಿ ಬಂಟ್ಸ್ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ವೈ.ಶಶಿಧರ್ ಕೆ.ಶೆಟ್ಟಿ, ಸಿರಿಮುಡಿ ದತ್ತಿನಿಧಿ ಸ್ಥಾಪಕ ಹಾಗೂ ಬಂಟರ ಸಂಘದ ಮಾಜಿ ಅಧ್ಯಕ್ಷ ಸಾಂತೂರು ಭಾಸ್ಕರ ಶೆಟ್ಟಿ, ಸಂಘದ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ವೆಲ್‍ಫೇರ್ ಟ್ರಸ್ಟ್ ಕೋಶಾಧಿಕಾರಿ ಅನಿಲ್‍ಕುಮಾರ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ನೇತ್ರಾವತಿ ಆರ್.ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ನವೀನ್ ಎನ್.ಶೆಟ್ಟಿ, ಸಂಘದ ಮಾಜಿ ಅಧ್ಯಕ್ಷರುಗಳಾದ ಪಿ.ರವೀಂದ್ರನಾಥ ಜಿ.ಹೆಗ್ಡೆ, ಸುರೇಶ್ ಶೆಟ್ಟಿ ಗುಂಡ್ಲಾಡಿ ಮತ್ತು ಮನೋಹರ ಶೆಟ್ಟಿ ಮುಖ್ಯ ಅತಿಥಿಗಳಾಇದ್ದರು.

ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ಸ್ವಾಗತಿಸಿ ಪ್ರಸ್ತಾವಿಸಿದರು. ನವೀನ್ ಶೆಟ್ಟಿ ಎಡ್ಮೆಮಾರ್ ಮತ್ತು ಜಯ ಶೆಟ್ಟಿ ಪದ್ರ ಕಾರ್ಯಕ್ರಮ ನಿರ್ವಹಿಸಿದರು. ಪ್ರಕಾಶ್ ಶೆಟ್ಟಿ ಪಡುಹಿತ್ಲು ವಂದಿಸಿದರು.

ಬಳಿಕ ಸಾಂಸ್ಕøತಿಕ ಕಾರ್ಯಕ್ರಮ, ಗುರುಗಳ ಪ್ರಸನ್ನ ಪೂಜೆ ನಡೆಯಿತು.