Ajakayi Seve at Padubidri Brahmasthana (ಪಡುಬಿದ್ರಿ ಬ್ರಹ್ಮಸ್ಥಾನದಲ್ಲಿ ಬಹು ಪ್ರಸಿದ್ಧ ಅಜಕಾಯಿ ಸೇವೆ:

Annual “Ajakayi Seve”  is performed only in Padubidri Shri Kshetra Brahmasthana during the 16th day of Aati month. Thousands of coconuts are broke open and offered to Khadgeshwari Devi.  Thereafter it is distributed to devotees as prasadam. This  years seve will edd  on Wednesday, August 1st.

 

ಆ. 1-ಪಡುಬಿದ್ರಿ ಬ್ರಹ್ಮಸ್ಥಾನದಲ್ಲಿ ಬಹು ಪ್ರಸಿದ್ಧ ಅಜಕಾಯಿ ಸೇವೆ:ಸಹಸ್ರ, ಸಹಸ್ರ ಸಂಖ್ಯೆಯಲ್ಲಿ ತೆಂಗಿನ ಕಾಯಿ ಅರ್ಪಣೆ

ಎಚ್ಕೆ ಹೆಜ್ಮಾಡಿ,ಪಡುಬಿದ್ರಿ

ದ್ವೈವಾರ್ಷಿಕ ಢಕ್ಕೆಬಲಿ ಸೇವೆ ಮೂಲಕ ಪ್ರಸಿದ್ಧಿ ಪಡೆದ ಪಡುಬಿದ್ರಿಯ ಶ್ರೀ ಕ್ಷೇತ್ರ ಬ್ರಹ್ಮಸ್ಥಾನದಲ್ಲಿ ಇಂದು ಅಗಸ್ಟ್ ಒಂದು(ಬುಧವಾರ)ದಂದು ವರ್ಷಾವಧಿಯಾಗಿ ನಡೆಯುವ ಅಜಕಾಯಿ ಸೇವೆ ಸಂಪನ್ನಗೊಳ್ಳಲಿದೆ.ಇಂತಹ ಅಪರೂಪದ ಸೇವೆ ಪಡುಬಿದ್ರಿಯಲ್ಲದೆ ಬೇರೆಲ್ಲೂ ನಡೆಯುವುದಿಲ್ಲ.

ತುಳುವರ ಆಟಿ ತಿಂಗಳ 16ನೇ ದಿನದಂದು ನಡೆಯುವ ಈ ಸೇವೆಯು, ದೇವತಾ ಪ್ರಾರ್ಥನೆಯ ಬಳಿಕ ಸಹಸ್ರಾರು ತೆಂಗಿನ ಕಾಯಿಗಳನ್ನು ಇಲ್ಲಿನ ಪಾತ್ರಿಗಳು ಕ್ಷೇತ್ರಪಾಲ ಕಲ್ಲಿಗೆ ಒಡೆದು ಪ್ರಾಕೃತಿಕ ವನಸಿರಿಯ ನಡುವೆ ನೆಲೆ ನಿಂತಿರುವ ಖಡ್ಗೇಶ್ವರೀ ದೇವಿಗೆ ಅರ್ಪಿಸಿ ಭಕ್ತರಿಗೆ ಹಂಚುತ್ತಾರೆ.

ಸಮುದ್ರದ ಮರಳೇ ಇಲ್ಲಿ ಪ್ರಸಾದ: ಆಸನ ವಿಶೇಷವಾದ ಈ ಅಜಕಾಯಿ ಸೇವೆಯ ದಿನದಂದು ಮುಂಜಾನೆ ಇಲ್ಲಿನ ದೇವಕಾರ್ಯ ನಿರತರು ಸಮುದ್ರ ತಟಕ್ಕೆ ತೆರಳಿ ಅಲ್ಲಿಂದ ತಮ್ಮ ಸೊಂಟಮಟ್ಟದ ನೀರಲ್ಲಿನ ಮರಳನ್ನು ಸಂಗ್ರಹಿಸಿ ಬ್ರಹ್ಮಸ್ಥಾನಕ್ಕೆ ತರುತ್ತಾರೆ.ಇದಕ್ಕಾಗಿ ಇವರೊಂದಿಗೆ ಪಡುಬಿದ್ರಿ ಬೇಂಗ್ರೆ ಶಿವಳ್ಳಿ ಬ್ರಾಹ್ಮಣ ಸಮೂಹದ ಯುವಕರು ಸಹಕರಿಸುತ್ತಾರೆ. ಇವರೆಲ್ಲೂ ಒಟ್ಟಾಗಿ ಸಮುದ್ರದ ಮರಳನ್ನು ತಂದು ಪಡುಬಿದ್ರಿ ಬ್ರಹ್ಮಸ್ಥಾನದಲ್ಲಿ ಖಡ್ಗೇಶ್ವರಿಯ ಮೂಲಬಿಂಬವಿರುವಲ್ಲಿಗೆ ಹಾಗೂ ಬ್ರಹ್ಮಸ್ಥಾನದೊಳಗಿನ ನಾಗನ ಸನ್ನಿಧಿ ಸಹಿತ ಪರಿಸರದಲ್ಲೆಲ್ಲಾ ಹರಡುತ್ತಾರೆ. ಮುಂದೆ ಇಲ್ಲಿಗೆ ಆಗಮಿಸುವ ಭÀಕ್ತರಿಗೆ ಇದೇ ಖಡ್ಗೇಶ್ವರೀ ಮಾತೆಯ ಪ್ರಸಾದವೂ ಆಗುತ್ತದೆ.
ಸಹಸ್ರಾರು ಭಕ್ತರನ್ನು ಆಕರ್ಷಿಸುವ ಈ ತಾಣ ಗುಡಿ, ಗೋಪುರಗಳಿಲ್ಲದೆಯೇ ವನಸಿರಿಯ ನಡುವೆ ಶೋಭಿಸುತ್ತಿದೆ. ಕಾಣಿಕೆಯ ಹುಂಡಿಗಳಿಲ್ಲದ, ವಿದ್ಯುದ್ದೀಪದ ವ್ಯವಸ್ಥೆಯನ್ನು ಕಾಣದ, ಕಲ್ಲ ಗರ್ಭಗುಡಿ, ಅಂಬೆಲಗಳ ರಚನೆಗಳಿರದ ಈ ಪಂಚದೈವೀಕ ತಾಣದಲ್ಲಿ ಅತೀ ಸಾಮಾನ್ಯವಾಗಿರುವ ಕಟ್ಟುಕಟ್ಟಳೆಗಳಂತೆಯೇ ಯಾವತ್ತೂ ಕೆಲಸ ಕಾರ್ಯಗಳು, ಆರಾಧನೆಗಳು ತೊಡಕಿಲ್ಲದೇ ನಡೆಯುತ್ತವೆ. ಫೆÇೀಟೋಗಳನ್ನು ಕ್ಲಿಕ್ಕಿಸಿಕೊಳ್ಳಲಾರದ ಈ ಪ್ರಶಾಂತ ತಾಣಕ್ಕೆ ಈ ಹಿಂದೆ ಪಾಶ್ಚಾತ್ಯ ವಿದ್ವಾಂಸರೂ ಆಗಮಿಸಿ ಇಲ್ಲಿನ ಡಾಕ್ಯುಮೆಂಟರಿಗಳನ್ನೂ ರಚಿಸಿಕೊಂಡಿದ್ದಾರೆ.
15 ಸಾವಿರ ತೆಂಗಿನಕಾಯಿ: ಅಜಕಾಯಿ ಬಳಿಕ ಪ್ರಸಾದ ವಿತರಣೆ ಇಲ್ಲಿನ ಸ್ಧಾನಿಗಳ, ಮಾನಿಗಳ ಮತ್ತು ಊರ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರ ಸಮ್ಮುಖದಲ್ಲಿ ಬೆಳಿಗ್ಗೆ ದೇವತಾ ಪ್ರಾರ್ಥನೆಯ ನಂತರ ಜಿಲ್ಲೆಯ ಮೂಲೆ, ಮೂಲೆಗಳಿಂದ ಆಗಮಿಸುವ ಭಕ್ತರ ಹರಕೆಯ ತೆಂಗಿನ ಕಾಯಿಗಳು ಸುಮಾರು 15000ದಷ್ಟು ಸಂಖ್ಯೆಯಲ್ಲಿರುತ್ತವೆ. ಇವುಗಳಲ್ಲಿ ಅಜಕಾಯಿ ಸೇವೆಗೆ ಬಂದ ತೆಂಗಿನಕಾಯಿಗಳನ್ನು ಅಜಕಾಯಿ ಕಲ್ಲಿಗೆ ಇಲ್ಲಿನ ಪಾತ್ರಿಗಳೇ ಒಡೆಯಬೇಕೆಂಬ ಕಟ್ಟಳೆಯಿದೆ. ದೇವರಿಗೆ ಸಮರ್ಪಿಸಲು ಬರುವ ಕಾಯಿಗಳನ್ನು ಯುವಕರು ಒಡೆದು ಪೇರಿಸಿಡುತ್ತಾರೆ. ಬಂದು ಸೇರುವ ಅಜಕಾಯಿ ತೆಂಗಿನ ಕಾಯಿಗಳನ್ನು ಒಡೆದು ಮುಗಿಸುವ ವೇಳೆ ಮಧ್ಯಾಹ್ನ ಕಳೆದಿರುತ್ತದೆ. ಬಳಿಕ ದೇವರಿಗೆ ಪೂಜೆ, ಪ್ರಾರ್ಥನೆಗಳ ಬಳಿಕ ಪ್ರಸಾದ ವಿತರಣೆಯೊಂದಿಗೆ ಬ್ರಹ್ಮಸ್ಥಾನದಲ್ಲಿ ಮಳೆಗಾಲದ ಪ್ರಕೃತಿ ಆರಾಧನೆಯೂ ಸಂಪನ್ನಗೊಳ್ಳುತ್ತದೆ.

 

Annual “Ajakayi Seve”  is performed only in Padubidri Shri Khadgeshwari Brahmasthana during the 16th day of Aati month. Thousands of coconuts are broke open and offered to Khadgeshwari Devi.  Thereafter it is distributed to devotees as prasadam. This  years seve will ed  on Wednesday, August 1st.