ಪಿ.ದೇವರಾಜ ರಾವ್ (P. Devaraj Rao)

ಪಡುಬಿದ್ರಿ : ತೆಂಕು ತಿಟ್ಟಿನ ಪರಂಪರೆಯ ವೇಷಧಾರಿಯಾಗಿ ಪ್ರಸಿದ್ಧರಾಗಿದ್ದ ದಿ| ಗೋವಿಂದ ರಾವ್‍ರವರ ಪುತ್ರ ಅನುಭವೀ ಕೃಷಿಕ, ಯಕ್ಷಗಾನ ಕಲಾ ಪೆÇೀಷಕ, ವೇಷಧಾರಿ, ಬಹುಮುಖೀ ಕಲಾವಿದ ಪಿ. ದೇವರಾಜ ರಾವ್(76) ಹೃದಯಾಘಾತದಿಂದ ಮೇ 26ರಂದು ಪಡುಬಿದ್ರಿಯ ಸ್ವಗೃಹದಲ್ಲಿ ನಿಧನ ಹೊಂದಿದರು.

ಚಿತ್ರಕಲಾ ವಿದ್ಯಾರ್ಥಿಯಾಗಿ ಮೈಸೂರು ಹಯರ್ ಸೆಕೆಂಡರಿ ಶಿಕ್ಷಣವನ್ನು ಪೂರೈಸಿದ್ದ ಇವರು ಚೌತಿ ಗಣಪತಿ ವಿಗ್ರಹಗಳನ್ನು ತಯಾರಿಸುವಲ್ಲಿ ನಿಷ್ಣಾತ ಕಲಾವಿದರಾಗಿದ್ದರು. ಭಿತ್ತಿ ಚಿತ್ರ, ಗೋಡೆಯಲ್ಲಿನ ಆಯಿಲ್ ಪೈಂಟಿಂಗ್ ಮತ್ತು ವಿವಿದೆಡೆಗಳ ನಡೆದೇಗುಲ(ತೇರು)ಗಳ ಹಲಗೆಯಲ್ಲಿನ ವಿವಿಧ ದೇವ, ದೇವತೆಗಳ ಚಿತ್ರಗಳನ್ನು ಬಿಡಿಸುತ್ತಿದ್ದ ದೇವರಾಜ ರಾವ್ ಅಭಿಜಾತ ಕಲಾವಿದರು.

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ದೇವಕಾರ್ಯ ನಿರತರಾಗಿ ಕೊನೆಯವರೆಗೂ ದುಡಿದಿದ್ದರು. ಶ್ರೀ ದೇವಳದ ಯಕ್ಷಗಾನ ಸಂಘ ಶ್ರೀ ಗಜಾನನ ಯಕ್ಷಗಾನ ಕಲಾ ಮಿತ್ರ ಮಂಡಳಿಯ ಸ್ಥಾಪಕ ಸದಸ್ಯರೂ, ಮಹಾ ಪೆÇೀಷಕರೂ ಆಗಿದ್ದರು. ಅನೇಕರಿಗೆ ಯಕ್ಷಗಾನ ಸಂಸ್ಕಾರವನ್ನೂ ಇತ್ತವರಾಗಿದ್ದರು. ಯಕ್ಷಗಾನ ಕ್ಷೇತ್ರದಲ್ಲಿನ ಅವರ ಸಾಧನೆ ಹಾಗೂ ಚಿತ್ರ ಕಲಾವಿದರಾಗಿ ಅವರ ಸೇವೆಗಳನ್ನು ಗುರುತಿಸಿ ಉಚ್ಚಿಲ, ಎರ್ಮಾಳು, ಪಡುಬಿದ್ರಿ, ನಂದಿಕೂರು, ಪಾವಂಜೆ, ಸಹಿಹಿತ್ಲು, ಬೇಲಾಡಿ, ಎಲ್ಲೂರು ವಿವಿದೆಡೆಗಳಲ್ಲಿ ಅವರನ್ನು ಸಮ್ಮಾನಿಸಲಾಗಿತ್ತು.

ಮೃತರಿಗೆ ಪತ್ನಿ, ಐದು ಪುತ್ರರು ಇದ್ದಾರೆ.