ಪಲಿಮಾರು ಗ್ರಾಪಂ ವ್ಯಾಪ್ತಿಯಲ್ಲಿ 2.05 ಕೋಟಿ ರೂ.ಕಾಮಗಾರಿಗಳಿಗೆ ಶಾಸಕರಿಂದ ಗುದ್ದಲಿ ಪೂಜೆ

ಪಡುಬಿದ್ರಿ: ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳ ಸುಮಾರು ರೂ.2.05 ಕೋಟಿ ಅನುದಾನದಲ್ಲಿ ಕೈಗೆತ್ತಿಕೊಳ್ಳಲಿರುವ ವಿವಿಧ ಕಾಮಗಾರಿಗಳಿಗೆ ಭಾನುವಾರ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಗುದ್ದಲಿ ಪೂಜೆ ನೆರವೇರಿಸಿದರು.
ಸಣ್ಣ ನೀರಾವರಿ ಇಲಾಖೆ ಮೂಲಕ ರೂ.20 ಲಕ್ಷದಲ್ಲಿ ಪಲಿಮಾರು ತೋಡು ಅಭಿವೃದ್ಧಿ, ಕೆಆರ್‍ಐಡಿಎಲ್ ಅನುದಾನ ರೂ.25 ಲಕ್ಷ ವೆಚ್ಚÀದಲ್ಲಿ ಪಟ್ಟಿಂಜೆ ಪರಿಶಿಷ್ಟ ಜಾತಿ ಕಾಲನಿ ರಸ್ತೆ, ಸಣ್ಣ ನೀರಾವರಿ ಇಲಾಖೆ ಮೂಲಕ ರೂ.45 ಲಕ್ಷದ ಅಡ್ವೆಬೈಲು ಕಿಂಡಿ ಅಣೆಕಟ್ಟು ಅಭಿವೃದ್ಧಿ, ರೂ.45 ಲಕ್ಷದಲ್ಲಿ ನಂದಿಕೂರು ಕೆಲ್ಲಾರು ಕೊಪ್ಪಳತೋಟ ಕಿಂಡಿ ಅಣೆಕಟ್ಟು, ರೂ 50 ಲಕ್ಷ ವೆಚ್ಚದಲ್ಲಿ ಅಡ್ವೆಯಿಂದ ಅವರಾಲು ಮಟ್ಟುವರೆಗಿನ ಅಡ್ವೆ ಹೊಳೆ ಮತ್ತು ನದಿ ದಂಡೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಈ ಸಮದರ್ಭ ಮಾತನಾಡಿದ ಶಾಸಕ ಮೆಂಡನ್, ಪಲಿಮಾರು ಗ್ರಾಪಂ ವ್ಯಾಪ್ತಿಯ ನಂದಿಕೂರು ದುರ್ಗಾಪರಮೇಶ್ವರೀ ದೇವಸ್ಥಾನ ರಸ್ತೆಯನ್ನು ರೂ.8 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ರಸ್ತೆಯಲ್ಲಿನ ಬಾಕಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತೆ ಗ್ರಾಮಸ್ಥರು ಬೇಡಿಕೆಯಿಟ್ಟಿದ್ದು, ಅದಕ್ಕೆ ತಗಲುವ ಹೆಚ್ಚುವರಿ ರೂ.12 ಲಕ್ಷ ಮೊತ್ತವನ್ನು ಹೊಂದಾಣಿಕೆ ಮಾಡಿಕೊಂಡು ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ರಾಜ್ಯದಲ್ಲಿನ ನೆರೆ ಪರಿಣಾಮ ಸರ್ಕಾರದ ಅನುದಾನ ಕಡಿತಗೊಂಡು ವಿಳಂಬವಾಗಿ ಬಿಡುಗಡೆಯಾಗಿದೆ. ಮುಂದಿನ ಬಜೆಟ್‍ನಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಇನ್ನಷ್ಟು ಅನುದಾನದೊಂದಿಗೆ ಬಾಕಿ ಅನುದಾನವೂ ಬಿಡುಗಡೆಯಾಗುವ ವಿಶ್ವಾಸವಿದೆ ಎಂದು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.

ಜಿಪಂ ಸದಸ್ಯ ಶಶಿಕಾಂತ ಪಡುಬಿದ್ರಿ, ಪಲಿಮಾರು ಗ್ರಾಪಂ ಅಧ್ಯಕ್ಷ ಜಿತೇಂದ್ರ ಫುರ್ಟಾಡೋ, ಉಪಾಧ್ಯಕ್ಷೆ ಸುಮಂಗಲ ದೇವಾಡಿಗ, ಸದಸ್ಯರಾದ ಸೌಮ್ಯಲತಾ ಶೆಟ್ಟಿ, ಮಧುಕರ ಸುವರ್ಣ, ಸತೀಶ್ ದೇವಾಡಿಗ, ಶಕೀಲಾ, ಕೃಷ್ಣಕುಮಾರ್, ಗಾಯತ್ರಿ ಪ್ರಭು, ಮಾಜಿ ಸದಸ್ಯ ಉದಯ ರೈ ಅರಂತಡೆ, ಪಿಡಿಒ ಸತೀಶ್, ಎಪಿಎಂಸಿ ಮಾಜಿ ಅಧ್ಯಕ್ಷ ಲಕ್ಷ್ಮಣ ಶೆಟ್ಟಿವಾಲ್, ಪ್ರಮುಖರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪ್ರಸಾದ್ ಪಲಿಮಾರ್, ರಾಯೇಶ್ ಪೈ, ಪ್ರವೀಣ್ ಅಡ್ವೆ, ಅರುಣ್ ಶೆಟ್ಟಿ, ಸತೀಶ್ ಶೆಟ್ಟಿ ಬೆಜ್ಜಬೆಟ್ಟು, ಸಂತೋಷ್ ಶೆಟ್ಟಿ, ಸರೋಜಾಕ್ಷ ಶೆಟ್ಟಿ, ತೆಕ್ಕಟ್ಟೆ ವಿಶ್ವನಾಥ ಶೆಟ್ಟಿ, ಗಣೇಶ್ ನಂದಿಕೂರು, ನಾಗರಾಜ ಭಟ್ ನಂದಿಕೂರು, ರವಿ, ಉಮೇಶ ಪೂಜಾರಿ, ಸತೀಶ ಶೆಟ್ಟಿ, ಶಶಿಧರ ಹೆಗ್ಡೆ, ಸುಧಾಮ ಶೆಟ್ಟಿ, ದಾಮೋದರ ಕೋಟ್ಯಾನ್ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

ಫೋಟೋ: ನಂದಿಕೂರು ದುರ್ಗಾಪರಮೇಶ್ವರಿ ದೇವಸ್ಥಾನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಲಾಲಾಜಿ ಆರ್. ಮೆಂಡನ್ ಗುದ್ದಲಿ ಪೂಜೆ ನೆರವೇರಿಸಿದರು.