ಪಡುಬಿದ್ರಿ ವ್ಯಾಪ್ತಿಯಲ್ಲಿಮಂಗಳವಾರ 3 ಪಾಸಿಟಿವ್

ಪಡುಬಿದ್ರಿ; ವ್ಯಾಪ್ತಿಯ ಹೆಜಮಾಡಿ ಮತ್ತು ಉಚ್ಚಿಲ ಬಡಾ ಗ್ರಾಮ ವ್ಯಾಪ್ತಿಯಲ್ಲಿ ಮಂಗಳವಾರ 3 ಪಾಸಿಟಿವ್ ದಾಖಲಾಗಿದೆ.

ಹೆಜಮಾಡಿ ಗುಂಡಿಯ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ 18ರ ಯುವತಿಗೆ ಸೋಂಕು ದೃಢಪಟ್ಟಿದೆ. ಕೆಲವು ದಿನಗಳ ಹಿಂದೆ ಜ್ವರ ಬಂದ ಕಾರಣ ಗಂಟಲು ಸ್ರಾವ ಮೂಲ್ಕಿ ಸರಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ನೀಡಿದ್ದು ಇಂದು ವರದಿಯಲ್ಲಿ ಸೋಂಕು ದೃಢಪಟ್ಟಿದೆ. ಮಂಗಳವಾರ ಅವರ ಮನೆಯ ವ್ಯಾಪ್ತಿಯ 5 ಅಂಗಡಿ, ವೈದ್ಯರ ಅಂಗಡಿ, 2 ಮನೆಗಳನ್ನು ಸೀಲ್‍ಡೌನ್ ಮಾಡಲಾಗಿದೆ.

ಉಚ್ಚಿಲ ಬಡಾ ಗ್ರಾಮದ 25ರ ಪುರುಷ ಮತ್ತು 62ರ ಪುರುಷ ಗಂಟಲು ಸ್ರಾವ ಪರೀಕ್ಷೆಯಲ್ಲಿ ಸೋಂಕಿತರಾಗಿರುವುದು