ಪಡುಬಿದ್ರಿ ವ್ಯಾಪ್ತಿಯಲ್ಲಿ ಮತ್ತೆ 5 ಪಾಸಿಟಿವ್

ಪಡುಬಿದ್ರಿ: ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ರ್ಯಾಂಡನ್ ಪರೀಕ್ಷೆ ವೇಳೆ 5 ಪಾಸಿಟಿವ್ ಪತ್ತೆಯಾಗಿದೆ.

ಹೆಜಮಾಡಿ ಗುಂಡಿಯ 50 ವರ್ಷದ ಮಹಿಳೆ, ಹೆಜಮಾಡಿ ಕೋಡಿಯ 47 ವರ್ಷದ ಪುರುಷ, ನಡ್ಸಾಲು ಬೀಡು ಬಳಿಯ 27 ವರ್ಷದ ಪುರುಷ, ಪಡುಬಿದ್ರಿ ಗುಡ್ಡೆ ಗಣಪತಿ ದೇವಳ ಸಮೀಪದ 25 ಮತ್ತು 48 ವರ್ಷಗಳ ಪುರುಷರಲ್ಲಿ ಬುಧವಾರ ಕೊರೊನಾ ಸೋಂಕು ದೃಡಪಟ್ಟಿದೆ. ಹೆಜಮಾಡಿ ಗುಂಡಿ ಬಳಿ 18 ವರ್ಷದ ಯುವತಿಗೆ ಪಾಸಿಟಿವ್ ಬಂದ ಬಳಿಕ ಮನೆ ಸುತ್ತ ರ್ಯಾಂಡಮ್ ಪರೀಕ್ಷೆ ನಡೆಸಿದ ಸಂದರ್ಭ ಮನೆ ಪಕ್ಕದ 50 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.

ಅವರನ್ನೆಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸುವ ಮತ್ತು ಮನೆ ಸೀಲ್‍ಡೌನ್ ಮಾಡುವ ಪ್ರಕ್ರಿಯೆ ಮುಂದುವರಿದಿದೆ.